ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಲಸಿಕೆ ಪಡೆಯದಿದ್ದರೆ ಓಮಿಕ್ರಾನ್ ರೂಪಾಂತರಿ ಅಪಾಯಕಾರಿ: WHO

|
Google Oneindia Kannada News

ನವದೆಹಲಿ, ಜನವರಿ 13: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ತಳಿಯು ವಿಶೇಷವಾಗಿ ಲಸಿಕೆ ಪಡೆಯದವರ ಪಾಲಿಗೆ ಅಪಾಯಕಾರಿ ವೈರಸ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ.

ಜಗತ್ತಿನಾದ್ಯಂತ ಕಳೆದ ಒಂದು ವಾರದಲ್ಲಿ 15 ದಶಲಕ್ಷ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ಸಿಕ್ಕಿದೆ. ಇದು ಅತಿಹೆಚ್ಚು ಆತಂಕವನ್ನು ಹುಟ್ಟು ಹಾಕುತ್ತಿದ್ದು, ಓಮಿಕ್ರಾನ್ ರೂಪಾಂತರ ತಳಿಯು ಸೋಂಕು ಹರಡುವಿಕೆ ವೇಗ ಹೆಚ್ಚಲು ಪ್ರಮುಖ ಕಾರಣವಾಗುತ್ತಿದೆ. ಓಮಿಕ್ರಾನ್ ರೂಪಾಂತರಿಯು ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಡೆಲ್ಟಾ ಸ್ಥಾನವನ್ನು ಆವರಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಓಮಿಕ್ರಾನ್ ಶೀಘ್ರ ಡೆಲ್ಟಾ ಪ್ರಕರಣಗಳನ್ನು ಓವರ್ ಟೇಕ್ ಮಾಡಲಿದೆ:WHOಓಮಿಕ್ರಾನ್ ಶೀಘ್ರ ಡೆಲ್ಟಾ ಪ್ರಕರಣಗಳನ್ನು ಓವರ್ ಟೇಕ್ ಮಾಡಲಿದೆ:WHO

"ಕಳೆದ ಅಕ್ಟೋಬರ್ ತಿಂಗಳಿನಿಂದ ಕೊವಿಡ್-19 ಸಾವಿನ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದೆ. ಒಂದು ವಾರದಲ್ಲಿ 48,000 ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಬಹುತೇಕ ದೇಶಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವಾಗ, ಇದು ಹಿಂದಿನ ಅಲೆಗಳಲ್ಲಿ ಕಂಡುಬರುವ ಮಟ್ಟದಲ್ಲಿಲ್ಲ. ಬಹುಶಃ ಓಮಿಕ್ರಾನ್‌ನ ಕಡಿಮೆ ತೀವ್ರತೆ ಮತ್ತು ಲಸಿಕೆ ಅಥವಾ ಹಿಂದಿನ ಸೋಂಕಿನಿಂದ ಹೆಚ್ಚಿರುವ ಪ್ರತಿರಕ್ಷೆಯೇ ಕಾರಣ ಆಗಿರಬಹುದು," ಎಂದಿದ್ದಾರೆ.

ಓಮಿಕ್ರಾನ್ ಸೋಂಕಿನ ಅಪಾಯದ ಬಗ್ಗೆ ಎಚ್ಚರಿಕೆ ಸಂದೇಶ

ಓಮಿಕ್ರಾನ್ ಸೋಂಕಿನ ಅಪಾಯದ ಬಗ್ಗೆ ಎಚ್ಚರಿಕೆ ಸಂದೇಶ

"ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ತಳಿಯು ಈ ಹಿಂದಿನ ಡೆಲ್ಟಾ ರೂಪಾಂತರಕ್ಕೆ ಹೋಲಿಸಿದರೆ ಕಡಿಮೆ ತೀವ್ರತೆಯನ್ನು ಹೊಂದಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಓಮಿಕ್ರಾನ್ ಕೂಡಾ ಒಂದು ಅಪಾಯಕಾರಿ ತಳಿ ಆಗಿದೆ. ಅದರಲ್ಲೂ ಕೊವಿಡ್-19 ಲಸಿಕೆ ಪಡೆಯದವರ ಪಾಲಿಗೆ ಓಮಿಕ್ರಾನ್ ರೋಗಾಣು ಅತಿಹೆಚ್ಚು ಅಪಾಯವನ್ನು ಉಂಟು ಮಾಡಬಹುದು," ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ಎಚ್ಚರಿಕೆ ನೀಡಿದ್ದಾರೆ.

ಎಲ್ಲ ರಾಷ್ಟ್ರಗಳಲ್ಲಿ ಶೇ.70ರಷ್ಟು ಮಂದಿಗೆ ಕೊವಿಡ್-19 ಲಸಿಕೆ

ಎಲ್ಲ ರಾಷ್ಟ್ರಗಳಲ್ಲಿ ಶೇ.70ರಷ್ಟು ಮಂದಿಗೆ ಕೊವಿಡ್-19 ಲಸಿಕೆ

"ಕೊರೊನಾವೈರಸ್ ಲಸಿಕೆ ರಫ್ತು ಮಾಡುವುದರಲ್ಲಿ ನಾವು ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಕಳೆದ ಡಿಸೆಂಬರ್‌ನಲ್ಲಿ, ನವೆಂಬರ್‌ನಲ್ಲಿ ರವಾನಿಸಲಾದ ಡೋಸ್‌ಗಳಿಗಿಂತ 2 ಪಟ್ಟು ಹೆಚ್ಚು COVAX ರವಾನೆಯಾಗಿದೆ. ಮುಂಬರುವ ದಿನಗಳಲ್ಲಿ COVAX 1 ಶತಕೋಟಿ ಲಸಿಕೆ ಡೋಸ್ ಅನ್ನು ರವಾನಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಕಳೆದ ವರ್ಷ ನಾವು ಎದುರಿಸಿದ ಕೆಲವು ಪೂರೈಕೆ ನಿರ್ಬಂಧಗಳು ಈಗ ಸರಾಗವಾಗಲು ಪ್ರಾರಂಭಿಸಿದೆ. ಆದರೆ ಈ ವರ್ಷದ ಮಧ್ಯದ ವೇಳೆಗೆ ಪ್ರತಿ ದೇಶದ ಜನಸಂಖ್ಯೆಯ ಶೇಕಡಾ 70 ಪ್ರತಿಶತದಷ್ಟು ಜನರಿಗೆ ಲಸಿಕೆ ಹಾಕುವ ನಮ್ಮ ಗುರಿಯನ್ನು ತಲುಪಲು ಇನ್ನೂ ಬಹಳ ದೂರ ಸಾಗಬೇಕಾಗಿದೆ," ಎಂದು ಅವರು ಹೇಳಿದರು.

ಲಸಿಕೆ ವಿತರಣೆಯಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳು ಹಿಂದೆ

ಲಸಿಕೆ ವಿತರಣೆಯಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳು ಹಿಂದೆ

ಜಗತ್ತಿನ 90ಕ್ಕೂ ಹೆಚ್ಚು ದೇಶಗಳಲ್ಲಿ ಇನ್ನೂ ಶೇಕಡಾ 40ರಷ್ಟು ಮಂದಿಗೂ ಕೊರೊನಾವೈರಸ್ ಲಸಿಕೆ ನೀಡುವ ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ. ಅದರಲ್ಲೂ 36 ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇಕಡಾ 10 ಕ್ಕಿಂತ ಕಡಿಮೆ ಜನರಿಗೆ ಲಸಿಕೆ ನೀಡಲಾಗಿದೆ. "ವಿಶ್ವ ಆರೋಗ್ಯ ಸಂಸ್ಥೆ ಮತ್ತು ನಮ್ಮ ಪಾಲುದಾರರು ಈ ದೇಶಗಳು ಎದುರಿಸುತ್ತಿರುವ ಅಡೆತಡೆಗಳನ್ನು ನಿವಾರಿಸಲು ಸಕ್ರಿಯವಾಗಿ ಬೆಂಬಲಿಸುತ್ತಿದ್ದಾರೆ. ನಾಯಕತ್ವ ಮತ್ತು ಸಮನ್ವಯತೆ, ಪೂರೈಕೆಯ ಗೋಚರತೆಯ ಕೊರತೆ, ದಾನ ಮಾಡಿದ ಲಸಿಕೆಗಳ ಕಡಿಮೆ ಶೆಲ್ಫ್-ಲೈಫ್, ಲಸಿಕೆ ವಿಶ್ವಾಸ, ಆರೋಗ್ಯ ಕಾರ್ಯಕರ್ತರ ಕೊರತೆ ಮತ್ತು ಸ್ಪರ್ಧಾತ್ಮಕತೆಯೇ ನಮ್ಮ ಆದ್ಯತೆ ಆಗಿರುತ್ತದೆ," ಎಂದು WHO ಡೈರೆಕ್ಟರ್ ಜನರಲ್ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕದ ಹಾವಳಿ

ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕದ ಹಾವಳಿ

ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 317,540,737 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 5,530,344 ಮಂದಿ ಪ್ರಾಣ ಬಿಟ್ಟಿದ್ದಾರೆ. 262,830,073 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 49,180,320 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

English summary
Omicron Variant is 'dangerous' virus for unvaccinated people: WHO chief Tedros Adhanom Ghebreyesus warns.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X