ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ಬಾಲಕಿ ಐನ್ ಸ್ಟೀನ್ ರನ್ನೇ ಹಿಂದಿಕ್ಕಿದ್ದಾಳಾ?

By Vanitha
|
Google Oneindia Kannada News

ಲಂಡನ್, ಸೆಪ್ಟೆಂಬರ್, 07 : ಜಗತ್ತಿನ ಅತೀಬುದ್ಧಿವಂತರ ಸಾಲಿನಲ್ಲಿ ಅಗ್ರಮಾನ್ಯ ವ್ಯಕ್ತಿಯೇ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಆಲ್ಚರ್ಟ್ ಐನ್ ಸ್ಟೀನ್. ಆದರೆ ಇಲ್ಲಿ ಭಾರತ ಮೂಲದ ಬಾಲಕಿಯೊಬ್ಬಳು ಐನ್ ಸ್ಟೀನ್ ಬುದ್ದಿವಂತಿಕೆ ಮೀರಿಸಿ ನಿಂತಿದ್ದಾಳೆ.

ಭಾರತ ಮೂಲದ ಲಿದಿಯಾ ಸೆಬಾಸ್ಟೈನ್ ಮೆನ್ಸಾ ಸಂಸ್ಥೆ ನಡೆಸಿದ ಬುದ್ಧಿವಂತಿಕೆ ಪರೀಕ್ಷೆಯನ್ನು ಕೆಲವೇ ನಿಮಿಷದಲ್ಲಿ ಪೂರ್ಣಗೊಳಿಸಿ 162 ಅಂಕ ಗಳಿಸುವುದರ ಮೂಲಕ ಈ ಸಾಧನೆ ತೋರಿದ್ದಾಳೆ.[ಭಾರತೀಯ ಮೂಲದ ಮಹಿಳೆ ಟ್ವಿಟರ್ ಸಿಇಓ]

OMG! This 12-year-old Indian-origin girl achieved what genius Albert Einstein

ಜಗತ್ತಿನಲ್ಲಿ ಪ್ರತಿಷ್ಠಿತ ಮತ್ತು ಬಹಳ ಹಳೆಯದಾದ ಮೆನ್ಸಾ ಸಂಸ್ಥೆಯು ಪ್ರತಿವರ್ಷವೂ ಬುದ್ಧಿವಂತಿಕೆ ಪರೀಕ್ಷೆ ನಡೆಸಿಕೊಂಡು ಬಂದಿದ್ದು, ಲಿದಿಯಾ ಕ್ಯಾಟಲ್ 3 ಬಿ ಪೇಪರ್‌ನಲ್ಲಿ ಅಧಿಕ ಅಂಕ ಗಳಿಸಿ ತನ್ನ ಬುದ್ದಿಮಟ್ಟತೆಯನ್ನು ಜಗಜ್ಜಾಹೀರುಗೊಳಿಸಿದ್ದಾಳೆ.

ಈ ಪರೀಕ್ಷೆಯು ಭಾಷಾ ಕೌಶಲ್ಯಗಳು, ಸಾದೃಶ್ಯಗಳು, ವ್ಯಾಖ್ಯೆಗಳನ್ನು ಒಳಗೊಂಡಿದೆ. ತರ್ಕಬದ್ದವಾದ ಈ ಪರೀಕ್ಷೆಯನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಿದ ಈಕೆ ಇದರಲ್ಲಿ ಜಯಶಾಲಿಯಾಗಿದ್ದಾಳೆ. ಹ್ಯಾರಿ ಪಾಟರ್ ನ ಏಳು ಪ್ರವೃತ್ತಿಗಳನ್ನು ಮೂರು ಬಾರಿ ಓದಿದ್ದು, ಸಂಗೀತ ಸೇರಿದಂತೆ ವಿಭಿನ್ನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಈಕೆ ಈ ಪ್ರತಿಫಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.

ಕ್ಯಾಟಲ್ 3 ಬಿಯಲ್ಲಿ 150 ಪ್ರಶ್ನೆಗಳಿದ್ದು, ಇದರಲ್ಲಿ 161 ಅಂಕ ಗಳಿಸಿದರೆ ಅತಿ ಹೆಚ್ಚು ಬುದ್ದಿವಂತಿಕೆಯ ಮಟ್ಟ ಎಂದು ತೀರ್ಮಾನವಾಗುತ್ತದೆ. ಅದರೆ ಈಕೆ 162 ಅಂಕ ಗಳಿಸಿ ಒಂದಡಿ ಮುಂದೆ ಇದ್ದಾಳೆ. ಇದೇ ಪರೀಕ್ಷೆಯಲ್ಲಿ ಐನ್ ಸ್ಟೀನ್ 160 ಅಂಕ ಪಡೆದಿದ್ದರು. ಆದರೆ ಈ ಬಾಲಕಿ 162 ಅಂಕ ಪಡೆದು ಐನ್ ಸ್ಟೀನ್ ಅವರನ್ನು ಹಿಂದಿಕ್ಕಿದ್ದಾರೆ.

English summary
The girl named Lydia Sebastian achieved the highest possible score of 162 on a Mensa IQ test, outwitting geniuses like Stephen Hawking and Einstein
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X