ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ದಶಕ ಆಡಳಿತ ನಡೆಸಿದ ಒಮನ್ ಸುಲ್ತಾನ ನಿಧನ

|
Google Oneindia Kannada News

ಮಸ್ಕತ್, ಜನವರಿ 11: ಮಧ್ಯಪ್ರಾಚ್ಯದಲ್ಲಿ ಅತ್ಯಂತ ದೀರ್ಘಾವಧಿ ಆಡಳಿತ ನಡೆಸಿದ ರಾಜರಲ್ಲಿ ಒಬ್ಬರಾದ ಒಮನ್ ಅರಸ ಸುಲ್ತಾನ್ ಖಾಬೂಸ್ ಬಿನ್ ಸೈಯದ್ (79) ಶುಕ್ರವಾರ ನಿಧನರಾದರು.

ಮಧ್ಯಪ್ರಾಚ್ಯದ ನಿರಂತರ ಸಂಘರ್ಷಮಯ ವಾತಾವರಣ ನಡುವೆಯೂ ಯಾವುದೇ ದೇಶ ಅಥವಾ ಸಂಘರ್ಷಕ್ಕೆ ಬೆಂಬಲ ನೀಡದೆ ಒಮನ್ ತಟಸ್ಥತೆ ಕಾಪಾಡಿಕೊಂಡು ಬರುವಂತೆ ಸುಲ್ತಾನ್ ಖಾಬೂಸ್ ನೋಡಿಕೊಂಡಿದ್ದರು. ಅವರ ಸ್ಥಾನಕ್ಕೆ ಸೂಕ್ತ ಉತ್ತರಾಧಿಕಾರಿಯನ್ನು ಹುಡುಕಲು ದೇಶದ ಉನ್ನತ ಸೇನಾ ಸಮಿತಿ ಪ್ರಕ್ರಿಯೆ ಆರಂಭಿಸಿದೆ.

ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ನಿಧನಹಿರಿಯ ಸಂಶೋಧಕ ಚಿದಾನಂದ ಮೂರ್ತಿ ನಿಧನ

ದೇಶದಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, 40 ದಿನಗಳವರೆಗೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುತ್ತದೆ. ಒಮನ್ ಹಿಂದಿನ ವಸಾಹತು ಅಧೀನದಲ್ಲಿದ್ದ ಬ್ರಿಟನ್‌ನ ಸಹಾಯದಿಂದ 1970ರಲ್ಲಿ ರಕ್ತಪಾತರಹಿತ ದಂಗೆ ನಡೆಸಿದ್ದ ಖಾಬೂಸ್, ಅಧಿಕಾರಕ್ಕೇರಿದ್ದರು. ಅಂದಿನಿಂದ ಸುಮಾರು 50 ವರ್ಷ ಅವರು ನಿರಂತರ ಆಡಳಿತ ನಡೆಸಿದ್ದರು.

Omans Sultan Qaboos Bin Said Died At 79

ಖಾಬೂಸ್ ಅವರ ಸಾವಿಗೆ ನಿಖರ ಕಾರಣ ಏನೆಂಬುದನ್ನು ಒಮನ್ ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ ಅವರು ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಡಿಸೆಂಬರ್ ಆರಂಭದಲ್ಲಿ ಒಂದು ವಾರ ಬೆಲ್ಜಿಯಂಗೆ ತೆರಳಿದ್ದರು.

ಖಾಬೂಸ್ ಅವರಿಗೆ ಮಕ್ಕಳಿಲ್ಲ. ಅವರು ತಮ್ಮ ಉತ್ತರಾಧಿಕಾರಿ ಯಾರೆಂದು ಸಾರ್ವಜನಿಕವಾಗಿ ಘೋಷಣೆ ಕೂಡ ಮಾಡಿರಲಿಲ್ಲ. 1996ರ ಒಮನ್ ಕಾನೂನಿನ ಪ್ರಕಾರ ಆಡಳಿತಾರೂಢ ಕುಟುಂಬವು ಸಿಂಹಾಸನವು ತೆರವಾದ ಮೂರು ದಿನಗಳ ಒಳಗೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುತ್ತದೆ.

 ಪ್ರಸಂಗ ಮುಗಿಸಿ ಹೊರಟ ಹೊಸ್ತೋಟ ಮಂಜುನಾಥ ಭಾಗವತರು ಪ್ರಸಂಗ ಮುಗಿಸಿ ಹೊರಟ ಹೊಸ್ತೋಟ ಮಂಜುನಾಥ ಭಾಗವತರು

ಒಮನ್‌ನ ಆಡಳಿತ ಕುಟುಂಬ ಸಮಿತಿಯು ಹೊಸ ಆಡಳಿತಗಾರನನ್ನು ಆಯ್ಕೆ ಮಾಡಲು ಸಭೆ ನಡೆಸಲಿದೆ ಎಂದು ಉನ್ನತ ಸೇನಾ ಸಮಿತಿ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.

ಒಂದು ವೇಳೆ ಸಮಿತಿಯು ಒಮ್ಮತಾಭಿಪ್ರಾಯದಿಂದ ಆಡಳಿತಾಧಿಕಾರಿಯ ಆಯ್ಕೆ ಮಾಡುವಲ್ಲಿ ವಿಫಲವಾದರೆ ಸೇನೆ ಮತ್ತು ಭದ್ರತಾ ಅಧಿಕಾರಿಗಳು, ಸುಪ್ರೀಂಕೋರ್ಟ್ ಮುಖ್ಯಸ್ಥರು ಹಾಗೂ ಎರಡು ಸಲಹಾ ಸಭೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯು, ಸುಲ್ತಾನ್ ಮುಚ್ಚಿದ ಲಕೋಟೆಯಲ್ಲಿ ರಹಸ್ಯವಾಗಿ ಬರೆದಿಟ್ಟಿರುವ ಹೆಸರಿನ ವ್ಯಕ್ತಿಯನ್ನು ಅಧಿಕಾರದಲ್ಲಿ ಇರಿಸುತ್ತವೆ.

ಪ್ಯಾಲೆಸ್ತೀನ್ ನಲ್ಲಿ ರಾಯಭಾರ ಕಚೇರಿ ಆರಂಭಿಸಲು ಒಮನ್ ನಿರ್ಧಾರ ಪ್ಯಾಲೆಸ್ತೀನ್ ನಲ್ಲಿ ರಾಯಭಾರ ಕಚೇರಿ ಆರಂಭಿಸಲು ಒಮನ್ ನಿರ್ಧಾರ

ಇರಾನ್ ಮತ್ತು ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರ ಸೌದಿ ಅರೇಬಿಯಾ ನಡುವಿನ ಉದ್ವಿಗ್ನ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ, ಇತರೆ ಗಲ್ಫ್ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ತೈಲ ಉತ್ಪಾದಿಸುವ ಒಮನ್‌ನಲ್ಲಿ ನಿರುದ್ಯೋಗದ ಮತ್ತು ಆರ್ಥಿಕ ಸಮಸ್ಯೆಗಳು ತೀವ್ರವಾಗಿದೆ. ದೇಶದ ಆಂತರಿಕ ಸವಾಲುಗಳು ಹೆಚ್ಚಾಗಿವೆ. ಹೀಗಾಗಿ ಆಡಳಿತದ ಜವಾಬ್ದಾರಿ ತೆಗೆದುಕೊಳ್ಳುವವರು ಅಧಿಕ ಒತ್ತಡ ಎದುರಿಸಬೇಕಾಗುತ್ತದೆ.

ಸುಲ್ತಾನ್‌ನ ಮೂವರು ಸಂಬಂಧಿಗಳಾದ ಅಸ್ಸಾದ್, ಶಿಹಾಬ್ ಮತ್ತು ಹೈಥಮ್ ಬಿನ್ ತಾರೀಖ್ ಅಲ್ ಸೈಯದ್ ಅವರಲ್ಲಿ ಒಬ್ಬರು ಈ ಪಟ್ಟಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಹೊರಗಿನ ದೇಶಗಳ ಒತ್ತಡವೂ ಸುಲ್ತಾನ್ ಆಯ್ಕೆಯ ಮೇಲೆ ಪರಿಣಾಮ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

English summary
Sultan of Oman Qaboos Bin Said Al Said who ruled country since 1970, died at the age of 79.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X