ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗೆ ಓಮನ್‌ನಲ್ಲಿ ಇನ್ಮುಂದಿಲ್ಲ ಕ್ವಾರಂಟೈನ್‌

|
Google Oneindia Kannada News

ಮಸ್ಕತ್‌, ಅಕ್ಟೋಬರ್‌ 27: ಭಾರತದ ಕೋವ್ಯಾಕ್ಸಿನ್‌ ಲಸಿಕೆಯನ್ನು ಓಮನ್‌ ಸರ್ಕಾರವು ಬುಧವಾರ ಯಾವುದೇ ಕ್ವಾರಂಟೈನ್‌ ಇಲ್ಲದೆಯೇ ದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗುವ ಕೊರೊನಾ ಲಸಿಕೆಗಳ ಪಟ್ಟಿಗಳಿಗೆ ಸೇರ್ಪಡೆ ಮಾಡಿದೆ.

ಈ ಬಗ್ಗೆ ಮಸ್ಕತ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. "ಅನುಮೋದಿತ ಕೊರೊನಾ ಲಸಿಕೆಯ ಪಟ್ಟಿಗೆ ಕೋವ್ಯಾಕ್ಸಿನ್‌ ಲಸಿಕೆಯನ್ನು ಸೇರ್ಪಡೆ ಮಾಡಲಾಗಿದೆ. ಇನ್ನು ಮುಂದೆ ಕೋವ್ಯಾಕ್ಸಿನ್‌ ಲಸಿಕೆ ಪಡೆದವರು ಯಾವುದೇ ಕ್ವಾರಂಟೈನ್‌ ಇಲ್ಲದೆಯೇ ಓಮನ್‌ ದೇಶಕ್ಕೆ ತೆರಳಬಹುದು. ಈ ಬದಲಾವಣೆಯು ಕೋವ್ಯಾಕ್ಸಿನ್‌ ಲಸಿಕೆ ಪಡೆದಿರುವ ಭಾರತದ ಜನರಿಗೆ ಅನುಕೂಲವಾಗಿದೆ," ಎಂದು ತಿಳಿಸಿದೆ.

ನ.3ರಂದು ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮೋದನೆಯ ಭವಿಷ್ಯ ನಿರ್ಧಾರ: WHOನ.3ರಂದು ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮೋದನೆಯ ಭವಿಷ್ಯ ನಿರ್ಧಾರ: WHO

"ಓಮನ್‌ಗೆ ಬರುವ ಕನಿಷ್ಠ 14 ದಿನಗಳ ಮುಂಚೆ ಕೋವ್ಯಾಕ್ಸಿನ್‌ನ ಎರಡೂ ಡೋಸ್‌ ಲಸಿಕೆಯನ್ನು ಪಡೆದಿರುವ ಭಾರತೀಯರು ಈಗ ಓಮನ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕಾಗಿಲ್ಲ. ಆದರೆ ಈ ಪ್ರಯಾಣಿಕರು ಇಲ್ಲಿಗೆ ಬರುವ ಮುಂಚೆಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಆ ನಿಯಮ ಈ ಹಿಂದಿನಂತೆಯೇ ಇರುತ್ತದೆ," ಎಂದು ಹೇಳಿದೆ.

 Oman Approves Covaxin Shots For Travel Without Quarantine

ಈ ಅಧಿಸೂಚನೆಯು ಕೋವ್ಯಾಕ್ಸಿನ್‌ ತೆಗೆದುಕೊಂಡ ಭಾರತೀಯ ಪ್ರಜೆಗಳಿಗೆ ಓಮನ್‌ಗೆ ಪ್ರಯಾಣವನ್ನು ಮಾಡಲು ಇರುವ ಅಡೆತಡೆಗಳನ್ನು ತೊಡೆದು ಹಾಕಿದೆ. ಅಸ್ಟ್ರಾಜೆನೆಕಾ/ಕೋವಿಶೀಲ್ಡ್‌ ತೆಗೆದುಕೊಂಡ ಪ್ರಯಾಣಿಕರಿಗೆ ಕ್ವಾರಂಟೈನ್‌ ಇಲ್ಲದೆಯೇ ಓಮನ್‌ಗೆ ಪ್ರಯಾಣಿಸಲು ಈಗಾಗಲೇ ಅನುಮತಿ ನೀಡಲಾಗಿದೆ. ಕೋವ್ಯಾಕ್ಸಿನ್‌ ಭಾರತದ ಮೊದಲ ಸ್ಥಳೀಯ ಕೋವಿಡ್‌ ಲಸಿಕೆಯಾಗಿದೆ. ಭಾರತೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಅಭಿವೃದ್ದಿಪಡಿಸಿದೆ. ಆದರೆ ಈವರೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ದೊರೆತಿಲ್ಲ.

ಭಾರತದ ಕೋವ್ಯಾಕ್ಸಿನ್‌ ಉತ್ತಮ ಲಸಿಕೆ; ಶೀಘ್ರ WHO ಅನುಮೋದನೆಭಾರತದ ಕೋವ್ಯಾಕ್ಸಿನ್‌ ಉತ್ತಮ ಲಸಿಕೆ; ಶೀಘ್ರ WHO ಅನುಮೋದನೆ

ಇನ್ನು ಜುಲೈನಲ್ಲಿ ಓಮನ್‌ ಭಾರತ ಸೇರಿದಂತೆ ಹಲವಾರು ದೇಶಗಳಿಗೆ ನಿರ್ಬಂಧವನ್ನು ಹೇರಿತ್ತು. ಗಲ್ಫ್‌ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಿನ ದಿನ ಏರಿಕೆ ಆಗುತ್ತಿದೆ. ಈ ಕಾರಣದಿಂದಾಗಿ ವಿದೇಶದಿಂದ ಬರುವ ಎಲ್ಲಾ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಓಮನ್‌ ಹೇಳಿತ್ತು. ಯುಕೆ, ಟುನೀಶಿಯಾ, ಲೆಬನಾನ್, ಇರಾನ್, ಇರಾಕ್, ಲಿಬಿಯಾ, ಬ್ರುನೇ, ಸಿಂಗಾಪುರ, ಇಂಡೋನೇಷ್ಯಾ, ಫಿಲಿಪೈನ್ಸ್, ಸೂಡನ್, ತಾಂಜೇನಿಯಾ, ದಕ್ಷಿಣ ಆಫ್ರಿಕಾ, ಘಾನಾ, ಸಿಯೆರಾ ಲಿಯೋನ್, ನೈಜೀರಿಯಾ, ಗಿನಿ, ಕೊಲಂಬಿಯಾ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಿಗೆ ನಿರ್ಬಂಧ ಹೇರಿತ್ತು.

ಪ್ರಯೋಜನ, ಅಪಾಯದ ಬಗ್ಗೆ ಮಾಹಿತಿ ನೀಡಲು ಡಬ್ಲ್ಯೂಹೆಚ್‌ಒ ಸೂಚನೆ

ಇನ್ನು ಇತ್ತೀಚೆಗೆ ಕೋವ್ಯಾಕ್ಸಿನ್‌ ಲಸಿಕೆಯ ಬಗ್ಗೆ ತುರ್ತು ಬಳಕೆಗೆ ಅಂತಿಮ ಅನುಮೋದನೆ ನೀಡುವುದಕ್ಕೂ ಮುನ್ನ ಈ ಕೋವ್ಯಾಕ್ಸಿನ್‌ ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ಆಗುವ ಪ್ರಯೋಜನ ಹಾಗೂ ಅಪಾಯಗಳ ಬಗ್ಗೆ ಅಧಿಕ ಮಾಹಿತಿಯನ್ನು ನೀಡಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈ ಲಸಿಕೆಯನ್ನು ಉತ್ಪಾದನೆ ಮಾಡುವ ಭಾರತ್ ಬಯೋಟೆಕ್ ಸಂಸ್ಥೆಗೆ ಸೂಚನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿಯು ನವೆಂಬರ್ 3ರಂದು ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿದಂತೆ ಅಂತಿಮ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಿದೆ. ಆ ಬಳಿಕ ಈ ಲಸಿಕೆಗೆ ಅನುಮೋದನೆ ನೀಡಲಾಗುವುದೇ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಲಿದೆ.

ಕೋವಿಡ್ 19: ಭಾರತ ಸೇರಿ 24 ದೇಶಗಳ ವಿಮಾನಗಳಿಗೆ ಓಮನ್ ನಿರ್ಬಂಧಕೋವಿಡ್ 19: ಭಾರತ ಸೇರಿ 24 ದೇಶಗಳ ವಿಮಾನಗಳಿಗೆ ಓಮನ್ ನಿರ್ಬಂಧ

ಇನ್ನು ಈ ಲಸಿಕೆಯ ಬಗ್ಗೆ ಭಾರತ್‌ ಬಯೋಟೆಕ್‌ ನೀಡಿರುವ ಹೇಳಿಕೆಯಲ್ಲಿ ಈ ಲಸಿಕೆಯು ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಶೇ.77.8ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಹಾಗೆಯೇ ಕೊರೊನಾ ವೈರಸ್‌ ಸೋಂಕಿನ ಅತೀ ಹೆಚ್ಚಾಗಿ ಹರಡುವ ಡೆಲ್ಟಾ ರೂಪಾಂತರದ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್‌ ಬಯೋಟೆಕ್‌ ಹೇಳಿಕೊಂಡಿದೆ.

Recommended Video

ಆಮೀರ್ ನಿಂಗಿದು ಬೇಕಿತ್ತಾ??ಕೇಳಿ ಇಸ್ಕೊಳ್ಳೋದು ಅಂದ್ರೆ ಇದೇ ಅನ್ಸತ್ತೆ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Oman Approves Covaxin Shots For Travel Without Quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X