ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಧಾನಮಂತ್ರಿಯನ್ನು ಕೊಂದವನ ಪತ್ತೆಗೆ 34 ವರ್ಷ!

|
Google Oneindia Kannada News

ಸ್ಟಾಕ್ ಹೋಮ್, ಜೂನ್.12: ದೇಶದ ಪ್ರಧಾನಮಂತ್ರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯನ್ನು ಪತ್ತೆ ಮಾಡುವಷ್ಟರಲ್ಲೇ ಅಪರಾಧಿ ಪ್ರಾಣ ಬಿಟ್ಟಿರುವ ವಿಚಿತ್ರ ಘಟನೆಗೆ ಸ್ವೀಡನ್ ಸಾಕ್ಷಿಯಾಗಿದೆ. 34 ವರ್ಷದ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ನಿಜವಾದ ಅಪರಾಧಿ ಯಾರು ಎಂದು ಬಹಿರಂಗ ಪಡಿಸಿದ್ದಾರೆ.

Recommended Video

Jonty Rhodes Shares Viral Video Of People Playing Cricket In Quarantine | Oneindia Kannada

1986 ಫೆಬ್ರವರಿ.28ರ ಶುಕ್ರವಾರ ಸ್ವೀಡನ್ ಪ್ರಧಾನಮಂತ್ರಿ ಓಲೊಫ್ ಪಾಮ್ ಕೊಲೆ ಪ್ರಕರಣದ ಹಿಂದಿನ ರಹಸ್ಯ ಬಯಲಾಗಿದೆ. ತಮ್ಮ ದೇಶದ ಪ್ರಧಾನಿಮಂತ್ರಿಯನ್ನು ಕೊಂದವರು ಯಾರು ಎನ್ನುವುದು ದೇಶದ ಪ್ರಜೆಗಳಿಗೆ 34 ವರ್ಷಗಳ ನಂತರ ತಿಳಿದಿದೆ.

ನಾಪತ್ತೆಯಾಗಿದ್ದ ಪಾಕ್ ಪತ್ರಕರ್ತ ಸಾಜಿದ್ ಸ್ವೀಡನ್‌ನಲ್ಲಿ ಶವವಾಗಿ ಪತ್ತೆನಾಪತ್ತೆಯಾಗಿದ್ದ ಪಾಕ್ ಪತ್ರಕರ್ತ ಸಾಜಿದ್ ಸ್ವೀಡನ್‌ನಲ್ಲಿ ಶವವಾಗಿ ಪತ್ತೆ

ಓಲೊಫ್ ಪಾಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಕ್ರಿಸ್ಟರ್ ಪೀಟರ್ ಸನ್ ಮಾಹಿತಿ ನೀಡಿದ್ದಾರೆ. 20 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸ್ಟಿಗ್ ಎಂಗ್ ಸ್ಟ್ರೋಮ್ ಎಂಬಾತನ ಕೈವಾಡ ಇರುವುದು ಸ್ಪಷ್ಟವಾಗಿದೆ ಎಂದು ಪ್ರಾಸಿಕ್ಯೂಷನ್ ತಿಳಸಿದೆ.

ಪ್ರಧಾನಮಂತ್ರಿ ಹಂತಕನ ಬಗ್ಗೆ ಅಂತಿಮ ತೀರ್ಮಾನ

ಪ್ರಧಾನಮಂತ್ರಿ ಹಂತಕನ ಬಗ್ಗೆ ಅಂತಿಮ ತೀರ್ಮಾನ

ಸ್ವೀಡನ್ ಪ್ರಧಾನಮಂತ್ರಿ ಓಲೊಫ್ ಪಾಮ್ ಕೊಲೆಗೆ ಸಂಬಂಧಿಸಿದಂತೆ ನೂರಾರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ನಿರ್ದಿಷ್ಟವಾಗಿ ಹಂತಕರ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ಡಿಎನ್ಎ ಪರೀಕ್ಷೆ ಹಾಗೂ ಹತ್ಯೆಗೆ ಬಳಸಿದ ಆಯುಧಗಳು ಸಿಕ್ಕಿರಲಿಲ್ಲ. ಇದರ ನಡುವೆಯೂ ಪ್ರಾಸಿಕ್ಯೂಟರ್ಸ್ ನಿಜವಾದ ಅಪರಾಧಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮವಾಗಿ ಅಪರಾಧಿ ಯಾರು ಎನ್ನುವುದರ ಬಗ್ಗೆ ತೀರ್ಮಾನಕ್ಕೆ ಬರಲಾಗಿದೆ ಎಂದು ಹತ್ಯೆಯಾದ ಓಲೋಫ್ ಪಾಮ್ ಪುತ್ರ ಮಾರ್ಟೀನ್ ಪಾಮ್ ಸ್ವೀಡಿಶ್ ರೇಡಿಯೋ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹಂತಕನಿಗೆ ತನ್ನ ತಪ್ಪಿನ ಅರಿವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.

ಚಿತ್ರ ಕೃಪೆ: Metro Co.uk

ಪ್ರಧಾನಿ ಓಲೊಫ್ ಪಾಮ್ ರನ್ನು ಕೊಂದವನ ಹಿನ್ನೆಲೆ

ಪ್ರಧಾನಿ ಓಲೊಫ್ ಪಾಮ್ ರನ್ನು ಕೊಂದವನ ಹಿನ್ನೆಲೆ

ಸ್ವೀಡನ್ ಪ್ರಧಾನಿ ಓಲೊಫ್ ಪಾಮ್ ಕೊಲೆ ಪ್ರಕರಣದ ಅಪರಾಧಿ ಸ್ಟಿಗ್ ಎಂಗ್ ಸ್ಟ್ರೋಮ್ ಎಂದು ಪ್ರಾಸಿಕ್ಯೂಷನ್ ತಿಳಿಸಿದ್ದು ಆಗಿದೆ. ಸ್ಕಾಂಡಿಯಾ ಇನ್ಸೂರೆನ್ಸ್ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಪೊಲೀಸರು ಈತನನ್ನು ವಿಚಾರಣೆಗೆ ಒಳಪಡಿಸಿದ್ದು, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಬಿಡುಗಡೆ ಮಾಡಲಾಗಿತ್ತು. ಕೊಲೆ ನಡೆದು 14 ವರ್ಷಗಳ ನಂತರ ಮಾನಸಿಕವಾಗಿ ನೊಂದುಕೊಂಡ ಆರೋಪಿ ಸ್ಟಿಗ್ ಎಂಗ್ ಸ್ಟ್ರೋಮ್ ಸ್ವತಃ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಚಿತ್ರ ಕೃಪೆ: The Local Sweden

ಇತಿಹಾಸದಲ್ಲಿ ಮಾಯದ 'ಗಾಯ' ಮಾಡಿದ ಪ್ರಕರಣ

ಇತಿಹಾಸದಲ್ಲಿ ಮಾಯದ 'ಗಾಯ' ಮಾಡಿದ ಪ್ರಕರಣ

ಸ್ವೀಡನ್ ಪ್ರಧಾನಿ ಓಲೊಫ್ ಪಾಮ್ ಕೊಲೆ ಪ್ರಕರಣವು ದೇಶದ ಇತಿಹಾಸದ ಪಾಲಿಗೆ ಮಾಯದ ಗಾಯ ಎಂದು ವ್ಯಾಖ್ಯಾನಿಸಲಾಗಿದೆ. 130ಕ್ಕೂ ಅಧಿಕ ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಸೂಕ್ತ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದರು. ಹೀಗಾಗಿ ಅಪರಾಧಿ ಕಣ್ಣು ಎದುರಿಗಿದ್ದರೂ ಶಿಕ್ಷೆ ವಿಧಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂಬ ಆರೋಪಗಳು ಕೂಡಾ ಕೇಳಿ ಬರುತ್ತಿವೆ.

ಚಿತ್ರ ಕೃಪೆ: The Local Sweden

100ಕ್ಕೂ ಹೆಚ್ಚು ಮಂದಿ ಪ್ರಧಾನಿ ಕೊಲೆಯ ಹೊಣೆ ಹೊತ್ತರು!

100ಕ್ಕೂ ಹೆಚ್ಚು ಮಂದಿ ಪ್ರಧಾನಿ ಕೊಲೆಯ ಹೊಣೆ ಹೊತ್ತರು!

ಸ್ವೀಡನ್ ಪ್ರಧಾನಮಂತ್ರಿ ಓಲೊಫ್ ಪಾಮ್ ಕೊಲೆಗೆ ಸಂಬಂಧಿಸಿದಂತೆ ಕ್ರಿಸ್ಟರ್ ಪೀಟರ್ ಸನ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಬಲಪಂಥೀಯ ಉಗ್ರವಾದಿ ಎಂದು ಗುರುತಿಸಿಕೊಂಡಿದ್ದ ಆರೋಪಿಯೇ ಪ್ರಧಾನಮಂತ್ರಿಯ ಕೊಲೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಸಾಮಾಜಿಕ ಪ್ರಜಾಪ್ರಭುತ್ವವಾದಿ ಆಗಿದ್ದ ಓಲೊಫ್ ಮಾಮ್ ಕೊಲೆಯ ಹೊಣೆಯನ್ನು ಹೊತ್ತುಕೊಳ್ಳಲು 100ಕ್ಕೂ ಹೆಚ್ಚು ಉಗ್ರಗಾಮಿಗಳು ಮುಂದೆ ಬಂದಿದ್ದರು. ಕ್ರಿಸ್ಟರ್ ಪೀಟರ್ ಸನ್ ವಿರುದ್ಧವೂ ಸಹ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮೂರು ಮೇಲ್ಮನವಿ ಸಲ್ಲಿಸಿದ ಆರೋಪಿ ತಕ್ಷಣದಲ್ಲೇ ಜೈಲಿನಿಂದ ಬಿಡುಗಡೆಯಾದನು. 2004ರಲ್ಲಿ ಈ ಆರೋಪಿ ಸಹ ಪ್ರಾಣ ಬಿಟ್ಟಿದ್ದನು.

ಸ್ವೀಡನ್ ಪ್ರಧಾನಿ ಓಲೊಫ್ ಪಾಮ್ ಕೊಲೆಯ ಹಿನ್ನೆಲೆ

ಸ್ವೀಡನ್ ಪ್ರಧಾನಿ ಓಲೊಫ್ ಪಾಮ್ ಕೊಲೆಯ ಹಿನ್ನೆಲೆ

1986ರ ಫೆಬ್ರವರಿ.28ರಂದು ಶುಕ್ರವಾರ ರಾತ್ರಿ ಸ್ವೀಡನ್ ಪ್ರಧಾನಮಂತ್ರಿ ಓಲೊಫ್ ಪಾಮ್ ಕೊಲೆ ನಡೆದಿತ್ತು. ಪತ್ನಿ ಲಿಸ್ಬೆಟ್, ಪುತ್ರ ಮಾರ್ಟಿನ್ ಹಾಗೂ ಆತನ ಗೆಳತಿ ಜೊತೆಗೆ ಸಿನಿಮಾ ನೋಡಿಕೊಂಡು ಮನೆ ವಾಪಸ್ ಆಗುತ್ತಿದ್ದ ವೇಳೆ ಹಿಂದಿನಿಂದ ಆಗಮಿಸಿದ ಹಂತಕರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. 357 ಮಗ್ನಮ್ ಹ್ಯಾಂಡ್ ಗನ್ ನಿಂದ ಗುಂಡಿನ ದಾಳಿ ನಡೆಸಿದ್ದು, ಮೃತದೇಹದಲ್ಲಿ ಸಿಕ್ಕ ಬುಲೆಟ್ ಗಳಿಂದ ಸಾಬೀತಾಗಿದೆ. ಆದರೆ ಇದುವರೆಗೂ ಹಂತಕರು ಬಳಸಿದ ಆ ಗನ್ ಪತ್ತೆ ಮಾಡುವುದಕ್ಕೆ ಆಗಿಲ್ಲ.

ಚಿತ್ರ ಕೃಪೆ: The Local Sweden

English summary
Olof Palme murder: Who Killed Sweden Prime Minister in 1986. After 34 years Prosecutor get clear picture about culprite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X