ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ತೈಲ ಸೋರಿಕೆ: ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

|
Google Oneindia Kannada News

ರಷ್ಯಾ, ಜೂನ್ 5: ಆರ್ಕ್ಟಿಕ್ ವೃತ್ತದೊಳಗಿನ ನದಿಗೆ 20,000 ಟನ್ ಡೀಸೆಲ್ ತೈಲ ಸೋರಿಕೆಯಾದ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಮೇ 29 ರಂದು ಸೈಬೀರಿಯನ್ ನಗರದ ನೊರಿಲ್ಸ್ಕ್ ಬಳಿಯ ವಿದ್ಯುತ್ ಸ್ಥಾವರವೊಂದರಲ್ಲಿ ಇಂಧನ ಟ್ಯಾಂಕ್ ಕುಸಿದು ಸೋರಿಕೆ ಸಂಭವಿಸಿದೆ ಎಂದು ಬಿಬಿಸಿ ವರದಿ ತಿಳಿಸಿದೆ. ಅಧ್ಯಕ್ಷ ಪುಟಿನ್ ಈ ಘಟನೆಯ ಬಗ್ಗೆ ಕಿಡಿ ಕಾರಿದ್ದು, ದೂರದರ್ಶನದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಂಪನಿಯ ಮುಖ್ಯಸ್ಥರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟಕವು ನೊರಿಲ್ಸ್ಕ್ ನಿಕಲ್ ಅವರ ಅಂಗಸಂಸ್ಥೆಯ ಒಡೆತನದಲ್ಲಿದೆ, ಇದು ವಿಶ್ವದ ಪ್ರಮುಖ ನಿಕಲ್ ಮತ್ತು ಪಲ್ಲಾಡಿಯಮ್ ಉತ್ಪಾದಕ ಕಂಪನಿಯಾಗಿದೆ.

 ಕೊವಿಡ್ ಹೊಸ ಕೇಸ್‌ಗಳ ಪಟ್ಟಿ: ಆತಂಕದೆಡೆಗೆ ಭಾರತದ ನಡಿಗೆ ಕೊವಿಡ್ ಹೊಸ ಕೇಸ್‌ಗಳ ಪಟ್ಟಿ: ಆತಂಕದೆಡೆಗೆ ಭಾರತದ ನಡಿಗೆ

ಈ ಸೋರಿಕೆ 350 ಚದರ ಕಿ.ಮೀ ಪ್ರದೇಶವನ್ನು ಕಲುಷಿತಗೊಳಿಸಿದೆ ಎಂದು ಬಿಬಿಸಿ ರಾಜ್ಯ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ಅಧ್ಯಕ್ಷ ಪುಟಿನ್ ಆದೇಶಿಸಿದ್ದಾರೆ.

Oil Spill IN Russia:President Putin Declares State Of Emergency

ವರದಿಗಳ ಪ್ರಕಾರ, ವಿದ್ಯುತ್ ಸ್ಥಾವರದಲ್ಲಿ ಇಂಧನ ಟ್ಯಾಂಕ್ ಗೆ ಆಧಾರವಾಗಿರುವ ಕಂಬಗಳು ಮುಳುಗಲು ಪ್ರಾರಂಭಿಸಿದಾಗ ಈ ಅಪಘಾತ ಸಂಭವಿಸಿದೆ. ಈ ಪ್ರದೇಶವು ಪರ್ಮಾಫ್ರಾಸ್ಟ್ನಲ್ಲಿ ನಿರ್ಮಿಸಲ್ಪಟ್ಟಿದೆ, ಇದು ಹವಾಮಾನವು ಬೆಚ್ಚಗಾಗುತ್ತಿದ್ದಂತೆ ಕರಗುತ್ತಿದೆ. ಸೋರಿಕೆಯಾದ ತೈಲವು ಅಪಘಾತದ ಸ್ಥಳದಿಂದ ಸುಮಾರು 12 ಕಿ.ಮೀ ದೂರದಲ್ಲಿ ಚಲಿಸಿದ್ದು, ಅಂಬರ್ನಾಯಾ ನದಿಯ ನೀರನ್ನು ಕೆಂಪು ಬಣ್ಣಕ್ಕೆ ತಿರುಗಿಸಿತು.

ವಿದ್ಯುತ್ ಸ್ಥಾವರ ನಿರ್ದೇಶಕ ವ್ಯಾಚೆಸ್ಲಾವ್ ಸ್ಟಾರ್ಸ್ಟಿನ್ ಅವರನ್ನು ಜುಲೈ 31 ರವರೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ರಷ್ಯಾದ ತನಿಖಾ ಸಮಿತಿ (ಎಸ್‌ಕೆ) ಮಾಲಿನ್ಯ ಮತ್ತು ನಿರ್ಲಕ್ಷ್ಯದ ಬಗ್ಗೆ ಕ್ರಿಮಿನಲ್ ಮೊಕದ್ದಮೆ ಹೂಡಿದೆ ಎಂದು ವರದಿ ತಿಳಿಸಿದೆ.

English summary
Arctic Circle turned red after over 20,000 tonnes of diesel fuel leaked from a damaged fuel plant. Russian President Vladimir Putin has declared a state of emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X