ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಬ್ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ತೈಲ ಬೆಲೆ ಏರಿಕೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 5: ಅರಬ್ ದೇಶಗಳಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾಗುತ್ತಿದ್ದಂತೆ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ.

ಇಂದು ಸೌದಿ ಅರೇಬಿಯಾ, ಬಹ್ರೇನ್, ಯುಎಇ ಮತ್ತು ಈಜಿಪ್ಟ್ ಕತಾರ್ ಜತೆಗೆ ತಮ್ಮ ರಾಜತಾಂತ್ರಿಕ ಸಂಬಂಧವನ್ನು ಮುರಿದುಕೊಂಡಿದೆ. ಬೆನ್ನಿಗೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡು ಬಂದಿದೆ.

ರಾಜತಾಂತ್ರಿಕ ಬಿಕ್ಕಟ್ಟಿನಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ಇದರಿಂದ ತೈಲ ಬೆಲೆ ಏರಿಕೆಯಾಗುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

Oil prices higher following rift in Middle East

ಯುರೋಪ್ ಮತ್ತು ಏಷ್ಯಾದ ಮಾರುಕಟ್ಟೆಯಲ್ಲಿ ಶೇಕಡಾ 1ರಷ್ಟು ಬೆಲೆ ಏರಿಕೆಯಾಗಿದೆ. ಆದರೆ 'ಮಾರ್ಕೆಟ್ ವಾಚ್ ಡಾಟ್ ಕಾಂ' ಮಾತ್ರ ಸದ್ಯದ ಬೆಳವಣಿಗೆಗಳು ತೈಲೋತ್ಪನ್ನಗಳು ಮತ್ತು ಅವುಗಳ ದರಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಿದೆ.

ಹೀಗಿದ್ದೂ ಎಲ್ಲರ ಕಣ್ಣು ಸದ್ಯ ಪೆಟ್ರೋಲಿಯಂ ರಫ್ತು ದೇಶಗಳ ಸದಸ್ಯ ದೇಶವಾಗಿರುವ ಕತಾರ್ ನತ್ತ ನೆಟ್ಟಿದೆ. ಕತಾರ್ ತನ್ನ ತೈಲ ಉತ್ಪಾದನೆಯನ್ನು ನಿಲ್ಲಿಸುತ್ತೋ ಇಲ್ಲವೋ ಗೊತ್ತಿಲ್ಲ. ಒಂದೊಮ್ಮೆ ತೈಲ ಉತ್ಪಾದನೆ ನಿಲ್ಲಿಸಿದಲ್ಲಿ ತೈಲದರಗಳು ಏರಿಕೆಯಾಗಲಿವೆ.

ಇನ್ನು ಕಳೆದ ವಾರ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲದರಗಳು ಶೇಕಡಾ 4ರಷ್ಟು ಕುಸಿತ ಕಂಡಿತ್ತು. ಈ ಮೂಲಕ ಮೇ ನಂತರ ಅ಻ತೀ ದೊಡ್ಡ ಕುಸಿತ ದಾಖಲಾಗಿತ್ತು. ಆದರೆ ಸದ್ಯ ಏರಿಕೆಯ ಹಾದಿಗೆ ತೈಲ ದರಗಳು ಬಂದು ನಿಂತಿವೆ.

English summary
The political rift in the Middle East saw crude futures rise. Saudi Arabia and three other countries severed diplomatic ties with Qatar accusing it of supporting terrorism and meddling in internal affairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X