ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡಣ್ಣಾವ್ರು ಟ್ವಿಟ್ಟರಿಗೆ ಬಂದರು ದಾರಿ ಬಿಡಿ!

By Mahesh
|
Google Oneindia Kannada News

ಬೆಂಗಳೂರು, ಮೇ.19: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಕೊನೆಗೂ ತಮ್ಮದೇ ಆದ ಸ್ವಂತ ಟ್ವಿಟ್ಟರ್ ಖಾತೆ ಸಿಕ್ಕಿದೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅತ್ಯಂತ ಜನಪ್ರಿಯ ಜನಪ್ರತಿನಿಧಿ ಎನಿಸಿರುವ ಒಬಾಮಾ ಅವರು ಟ್ವಿಟ್ಟರಿಗೆ ಭರ್ಜರಿಯಾಗಿ ರೀ ಎಂಟ್ರಿ ಕೊಟ್ಟಿದ್ದಾರೆ.

ಒಬಾಮಾ ಅವರು ಟ್ವಿಟ್ಟರ್ ಐಡಿ (@POTUS) ಮೂಲಕ ಮೊದಲ ಟ್ವೀಟ್ ಮಾಡಿ ಆರು ವರ್ಷಗಳ ನಂತರ ನನ್ನದೇ ಆದ ಐಡಿ ಸಿಕ್ಕಿದೆ ಎಂದು ಹೇಳಿದ್ದಾರೆ. ಟ್ವಿಟ್ಟರ್ ಗೆ ಹಲೋ ಹೇಳಿದ್ದಾರೆ. ಹೊಸ ಖಾತೆಗೆ ಸುಮಾರು 1.7 ಮಿಲಿಯನ್ ಹಿಂಬಾಲಕರು ಸಿಕ್ಕಿದ್ದಾರೆ.

Obama Borrows iPhone to Post First Ever Tweet From New Account

ಐಫೋನ್ ಬಳಕೆ?: ಅಧ್ಯಕ್ಷ ಒಬಾಮಾ ಅವರಿಗೆ ಜನಪ್ರಿಯ ಮೊಬೈಲ್ 'ಐಫೋನ್' ಬಳಕೆ ನಿರ್ಬಂಧಿಸಲಾಗಿದೆ. ಅದರೆ, ನಿಯಮ ಮೀರಿ ಐಫೋನ್ ಹೇಗೆ ಬಳಸಲು ಸಾಧ್ಯ ಎಂಬ ಪ್ರಶ್ನೆ ಕೇಳಿ ಬಂದಿದೆ.

ಅದರೆ, ಅಧ್ಯಕ್ಷರ ಕಾರ್ಯಕಾರಿ ಕಚೇರಿಯಲ್ಲಿ ಮಾತ್ರ ಬಳಕೆಯಾಗುವ ಐಫೋನ್ ಬಳಸಿ ಒಬಾಮಾ ಅವರು ಟ್ವೀಟ್ ಮಾಡಿದ್ದಾರೆ ಎಂದು ಶ್ವೇತ ಭವನ ಪ್ರಕಟಿಸಿದೆ. ದೊಡ್ಡಣ್ಣ ಇನ್ಮುಂದೆ 59.3 ಮಿಲಿಯನ್ ಮಂದಿ ಹಿಂಬಾಲಕರನ್ನು ಹೊಂದಿರುವ ಅಧಿಕೃತ ಐಡಿ (@BarackObama) ಹಾಗೂ ಹೊಸ ಐಡಿ ಎರಡರಲ್ಲೂ ಸಕ್ರಿಯರಾಗಿ ಜನತೆಗೆ ಇನ್ನಷ್ಟು ಹತ್ತಿರವಾಗುತ್ತಾರಂತೆ. ನೋಡೋಣ ಏನೇನು ಮಾಡ್ತಾರೆ ಅಂತಾ! (ಎಎನ್ಐ)

English summary
United States President Barack Obama has finally got his own Twitter account and has attracted over a million followers within few hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X