ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ವಂಚನೆ: ಡೊನಾಲ್ಡ್ ಟ್ರಂಪ್ ವಿರುದ್ಧ ಗುರುತರ ಆರೋಪ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 03: ತೆರಿಗೆ ವಂಚನೆಗೆ ತಮ್ಮ ಪಾಲಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರವು ನೀಡಿದ್ದರು ಎಂಬ ಗುರುತರ ಆರೋಪ ಕೇಳಿಬಂದಿದೆ.

1990 ರಲ್ಲಿ ವಿವಾದ ಸೃಷ್ಟಿಸಿದ್ದ ತೆರಿಗೆ ಅಕ್ರಮಗಳಿಗೆ ಸಂಬಂಧಿಸಿದಂತೆ ತಮ್ಮ ತಂದೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಫ್ರೆಡ್ ಟ್ರಂಪ್ ಅವರಿಗೆ ಡೊನಾಲ್ಡ್ ಟ್ರಂಪ್ ನೆರವು ನೀಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ನ್ಯೂಯಾರ್ಕ್ ಟೈಮ್ಸ್ ಬಯಲಿಗೆಳೆದಿದೆ.

ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್ಭಾರತದ ವ್ಯಾಪಾರ ಒಪ್ಪಂದ ಉತ್ಸುಕತೆ ಹಿಂದಿನ ರಹಸ್ಯ ಬಿಚ್ಚಿಟ್ಟ ಟ್ರಂಪ್

ಪಾಲಕರಿಗೆ ತೆರಿಗೆ ವಂಚನೆಗೆ ನೆರವು ನೀದಿದ್ದ ಟ್ರಂಪ್, ತಂದೆಯಿಂದ ಅದಕ್ಕಾಗಿ ಆರ್ಥಿಕ ನೆರವನ್ನೂ ಪಡೆದಿದ್ದರು. ಕಡಿಮೆ ತೆರಿಗೆ ನೀಡುವ ಸಲುವಾಗಿ ತಮ್ಮ ಆಸ್ತಿಯ ಮೌಲ್ಯವನ್ನು ಟ್ರಂಪ್ ಕಡಿಮೆ ತೋರಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

NYT alleges Donald Trump frauds income tax department for his parents

ತಾವು ತಂದೆಯಿಂದ ಹಣಕಾಸಿನ ನೆರವು ಪಡೆಯುತ್ತಿದ್ದುದನ್ನು ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ಹಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್

ನ್ಯೂಯಾರ್ಕ್ ಟೈಮ್ಸ್ ನ ಆರೋಪಗಳಗೆ ಪ್ರತಿಕ್ರಿಯೆ ನೀಡಿದ ಡೊನಾಲ್ಡ್ ಟ್ರಂಪ್ ಪರ ವಕೀಲರು, 'ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಟ್ರಂಪ್ ಯಾವುದೇ ರೀತಿಯಲ್ಲಿಯೂ ತೆರಿಗೆ ವಂಚನೆ ಮಾಡಿಲ್ಲ. ಅವರದ್ದು ಪಾರದರ್ಶಕ ವ್ಯವಹಾರ' ಎಂದಿದೆ.

English summary
The New York times alleges that America president Donald Trump fruads Income Tax department to help his parents to pay minimum Tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X