ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ಸಾವಿರ ಜನರಿಗಂಟಿದ ಮಹಾಮಾರಿ ಎಬೋಲಾ

|
Google Oneindia Kannada News

ಜಿನೀವಾ, ಅ. 27: ಎಬೋಲಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸುತ್ತಲೇ ಇದೆ. ಇಲ್ಲಿಯವರೆಗೆ ಪ್ರಪಂಚದಾದ್ಯಂತ ದಾಖಾಲಾದ 10,141 ಪ್ರಕರಣಗಳಲ್ಲಿ 4,922 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ತಿಳಿಸಿದೆ.

ಕಳೆದ ಶನಿವಾರದವರೆಗಿನ ಅಂಕಿ ಅಂಶಗಳು ಇದಾಗಿದೆ. ಪಶ್ಚಿಮ ಆಫ್ರಿಕಾದ ಗಿನಿಯಾ, ಲಿಬೇರಿಯಾ, ಸಿರಿಯಾ ಲಿಯೋನ್ ನ 4,912 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಡಬ್ಲ್ಯುಎಚ್ ಒ ತಿಳಿಸಿದೆ.[ಅಮೆರಿಕದಲ್ಲೂ ಎಬೋಲಾ ಆರ್ಭಟ ಶುರುವಾಯಿತೆ?]

ebola

ನೈಜೀರಿಯಾದಲ್ಲಿಯೂ ಎಬೋಲಾ ತನ್ನ ರೌದ್ರ ರೂಪ ತೋರಿಸಿದ್ದು ಅನೇಕರನ್ನು ಬಲಿಪಡೆದಿದೆ. ಇದಲ್ಲದೇ ಸ್ಪೇನ್, ಅಮೆರಿಕದಲ್ಲೂ ಎಬೋಲಾ ಕಾಣಿಸಿಕೊಂಡಿದೆ. ಅಲ್ಲದೇ ಒಂದೊಂದು ಪ್ರಕರಣಗಳು ದಾಖಲಾಗಿವೆ.[ಮಹಾಮಾರಿ ಎಬೋಲಾಕ್ಕೆ ಕೆನಡಾ ಚುಚ್ಚುಮದ್ದು]

ಎಬೋಲಾ ಲಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಸಾವಿನ ಸಾಧ್ಯತೆಯೂ ಶೇ. 70 ರಷ್ಟಿದೆ ಎಂದು ಡಬ್ಲ್ಯುಎಚ್ ಒ ತಿಳಿಸಿದೆ. ಐವೊರಿ ಕಾಸ್ಟ್ ನೊಂದಿಗೆ ಗಡಿ ಹಂಚಿಕೊಂಡಿರುವ ಗಿನಿಯಾ ಮತ್ತು ಲಿಬೇರಿಯಾ ದೇಶಗಳ ಎಂಟು ಜಿಲ್ಲೆಗಳಲ್ಲಿ ಎಬೋಲಾ ಭೀತಿ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೇ ಆಫ್ರಿಕಾದ 15 ದೇಶಗಳ ತುಂಬೆಲ್ಲ ಮಹಾಮಾರಿ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅನೇಕ ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಯಾವ ಪ್ರಯೋಜನವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

English summary
The death toll from the Ebola epidemic rose to 4,922 out of 10,141 known cases in eight countries. The three worst-hit countries of West Africa — Guinea, Liberia and Sierra Leone — account for the bulk, recording 4,912 deaths out of 10,114 cases, the WHO said in its update.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X