ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಣ್ವಸ್ತ್ರ ಹೊಂದಿದ ಎರಡು ದೇಶಗಳ ಮಧ್ಯೆ ಕದನ ಆತ್ಮಹತ್ಯೆಗೆ ಸಮ'

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಜನವರಿ 8: ಅಣ್ವಸ್ತ್ರ ಹೊಂದಿದ ಯಾವುದೇ ಎರಡು ದೇಶಗಳ ಮಧ್ಯದ ಯುದ್ಧವು ಪರಸ್ಪರರ ಪಾಲಿಗೆ "ಆತ್ಮಹತ್ಯೆ ಮಾಡಿಕೊಂಡಂತೆ" ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ಶಾಂತಿ ಮಾತುಕತೆಗೆ ಭಾರತ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೂಡ ಮಾಡಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನೀಡಿದ ಮಾಹಿತಿ ಪ್ರಕಾರ, ಭಾರತದ ಜತೆಗೆ ಮತ್ತೆ ಮಾತುಕತೆ ನಡೆಸಲು ಬಯಸಿದ್ದಾರೆ. ಶೀತಲ ಸಮರ ಕೂಡ ಎರಡೂ ದೇಶಗಳ ಪಾಲಿಗೆ ಒಳ್ಳೆಯದಲ್ಲ ಎಂದು ಇಮ್ರಾನ್ ಖಾನ್ ಅಭಿಪ್ರಾಯ ಪಟ್ಟಿದ್ದಾರೆ.

ಜೋಳಿಗೆ ಹಿಡಿದ ಇಮ್ರಾನ್ ಖಾನ್ 'ತುಂಡಾದ' ಪಾಕಿಸ್ತಾನದ ಕೊನೆ ಪ್ರಧಾನಿಯೇ?ಜೋಳಿಗೆ ಹಿಡಿದ ಇಮ್ರಾನ್ ಖಾನ್ 'ತುಂಡಾದ' ಪಾಕಿಸ್ತಾನದ ಕೊನೆ ಪ್ರಧಾನಿಯೇ?

ಅಣ್ವಸ್ತ್ರ ಹೊಂದಿದ ಎರಡು ದೇಶಗಳು ಯುದ್ಧ ಇರಲಿ, ಶೀತಲ ಸಮರದ ಬಗ್ಗೆ ಕೂಡ ಆಲೋಚನೆ ಮಾಡಬಾರದು. ಏಕೆಂದರೆ ಇದರಿಂದ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದ್ದರಿಂದ ದ್ವಿಪಕ್ಷೀಯ ಮಾತುಕತೆಯೇ ಇದಕ್ಕೆ ಪರಿಹಾರ. ಅಣ್ವಸ್ತ್ರ ಹೊಂದಿದರ ಎರಡು ರಾಷ್ಟ್ರಗಳ ಮಧ್ಯದ ಕದನ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಇಮ್ರಾನ್ ಖಾನ್ ಹೇಳಿರುವುದಾಗಿ ಅವರ ಪಕ್ಷವು ಮಾಹಿತಿ ನೀಡಿದೆ.

Nuclear armed nations at war is like suicide, said Imran Khan

ಶಾಂತಿ ಮಾತುಕತೆಗೆ ಭಾರತ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಇಮ್ರಾನ್ ಹೇಳಿದ್ದರೆ, ಇತ್ತ ಭಾರತವು, ಭಯೋತ್ಪಾದನೆ ಹಾಗೂ ಮಾತುಕತೆ ಎರಡೂ ಒಟ್ಟಿಗೇ ಸಾಗಲು ಸಾಧ್ಯವಿಲ್ಲ ಎಂದಿದೆ.

ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್

ಭಾರತವು ಮಾತುಕತೆ ವಿಚಾರವಾಗಿ ಒಂದು ಹೆಜ್ಜೆ ಇಡುವುದಾಗಿ ಹೇಳಿದಾಗ ಪಾಕಿಸ್ತಾನವು ಎರಡು ಹೆಜ್ಜೆ ಮುಂದಿರಿಸಿದೆ. ಆದರೆ ಪಾಕಿಸ್ತಾನದ ಮಾತುಕತೆ ಪ್ರಸ್ತಾವವನ್ನು ಹಿಂದೂಸ್ತಾನ ಹಲವು ಸಲ ತಿರಸ್ಕರಿಸಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

English summary
Pakistan Prime Minister Imran Khan has accused India of not responding to his peace overtures and said that any war between two nuclear-armed nations would be "suicidal" for both nations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X