• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ

|

ರಾವಲ್ಪಿಂಡಿ(ಪಾಕಿಸ್ತಾನ), ಫೆಬ್ರವರಿ 27 : ಪಾಕಿಸ್ತಾನದ ನೆಲದಲ್ಲಿ ಯಾವುದೇ ದಾಳಿ ನಡೆದಿಲ್ಲ. ಬಾಲಕೋಟ್ ಸರ್ಜಿಕಲ್ ಸ್ಟ್ರೈಕ್ ಸುಳ್ಳು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಮೂಲಗಳು ಹೇಳಿವೆ. ಆದರೆ, 21 ನಿಮಿಷಗಳ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದ ಭಾರತವು ನಮ್ಮ ಅಚ್ಚರಿಯನ್ನು ಎದುರಿಸಲು ಸಿದ್ಧವಾಗಲಿ ಎಂದು ಪಾಕಿಸ್ತಾನ ಡಿಜಿಐಎಸ್ ಪಿಆರ್ ಮೇಜರ್ ಜನರಲ್ ಆಸಿಫ್ ಗಫೂರ್ ಪ್ರತಿಕ್ರಿಯಿಸಿದ್ದಾರೆ.

ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ನಿಯಮಗಳನ್ನು ಭಾರತ ಉಲ್ಲಂಘಿಸಿದೆ. ಪಾಕಿಸ್ತಾನದ ವೈಮಾನಿಕ ಪ್ರದೇಶದಲ್ಲಿ ತನ್ನ ಯುದ್ಧ ವಿಮಾನವನ್ನು ಹಾರಿಸಿದೆ. 21 ನಿಮಿಷಗಳ ಕಾಲದ ಕಾರ್ಯಾಚರಣೆಗೆ ಪಾಕಿಸ್ತಾನ ಪ್ರತ್ಯುತ್ತರ ನೀಡಲಿದೆ ಎಂದು ಮೇಜರ್ ಜನರಲ್ ಆಸಿಫ್ ಗಫೂರ್ ಗುಡುಗಿದ್ದಾರೆ.

ಫೆಬ್ರವರಿ 26ರಂದು ಭಾರತದ ಪ್ರತೀಕಾರದ ಸಂಪೂರ್ಣ ಸುದ್ದಿಗಳ ಗುಚ್ಛ

ಸಣ್ಣ ತುಣುಕು ಪತ್ತೆಯಿಲ್ಲ: ನಾಲ್ಕರಿಂದ ಐದು ನಾಟಿಕಲ್ ಮೈಲುಗಳಷ್ಟು ನಮ್ಮ ಗಡಿ ಪ್ರದೇಶದಲ್ಲಿ ಭಾರತೀಯ ವಾಯುಸೇನೆ ನುಗ್ಗಿದ್ದವು. ಬಾಲಕೋಟ್ ನಲ್ಲಿ ನಡೆದಿದೆ ಎನ್ನಲಾದ ವೈಮಾನಿಕ ದಾಳಿ ಎಲ್ಲವೂ ಸುಳ್ಳು. ಘಟನಾ ಸ್ಥಳದಲ್ಲಿ ಯಾವುದೇ ಸ್ಫೋಟದ ನಂತರ ಸಿಗಬಹುದಾದ ತ್ಯಾಜ್ಯಗಳಿಲ್ಲ. ಆದರೆ, ಅವರು 350ಕ್ಕೂ ಅಧಿಕ ಮಂದಿ ಸಾವಿನ ಬಗ್ಗೆ ಮಾತನಾಡುತ್ತಿದ್ದಾರೆ. ರಕ್ತದ ಕಲೆಯೂ ಇಲ್ಲ, ಅಂತ್ಯ ಸಂಸ್ಕಾರವಿಲ್ಲದೆ ಶವವನ್ನು ಹಾಗೆ ಬಿಡುವುದಿಲ್ಲ, ಯಾರೊಬ್ಬರು ಪ್ರಾರ್ಥನೆ ಮಾಡುತ್ತಿರುವುದು ಕಂಡು ಬಂದಿಲ್ಲ, ಗಾಯಾಳುಗಳು ಎಲ್ಲಿದ್ದಾರೆ ಗೊತ್ತಿಲ್ಲ. ಆದರೆ, ಅವರಿಗೆ ಮಾತ್ರ 350 ಜನ ಸಾವಿನ ಸಂಖ್ಯೆ ಹೇಗೆ ಸಿಕ್ಕಿತ್ತೋ ಎಂದು ಪಾಕಿಸ್ತಾನದ ವಕ್ತಾರರು ಹೇಳಿದ್ದಾರೆ.

'ನಾವು ಭಾರತದ ದಾಳಿಯ ಕಥೆಯಿಂದ ವಿಚಲಿತರಾಗಿಲ್ಲ. ನಾವು ಇದಕ್ಕೆ ಪ್ರತ್ಯುತ್ತರ ನೀಡುವ ಸಮಯ ಬಂದಿದೆ. ನಮ್ಮ ಅಚ್ಚರಿಯ ನಡೆಯನ್ನು ಕಾಣುತ್ತೀರಿ. ಅದಕ್ಕೆ ಸಿದ್ಧರಾಗಿ ಎಂದಿದ್ದಾರೆ.

ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

ಈ ನಡುವೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ನಡೆಸಲಾಗಿದ್ದು, ಸಭೆಯಲ್ಲಿ ಅಣ್ವಸ್ತ್ರ ಪ್ರಯೋಗ ತಂಡದ ಮುಖ್ಯಸ್ಥರು ಇದ್ದರು. ಪಾಕಿಸ್ತಾನ ಗಡಿಯಲ್ಲಿ ಬಂದು ಭಾರತದ ವಾಯುಸೇನೆ ನಾಲ್ಕು ಬಾಂಬ್ ಹಾಕಿದೆ ಎಂಬುದನ್ನು ವಕ್ತಾರರು ಒಪ್ಪಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan's Director General Inter-Services Public Relations (DG ISPR) Major General Asif Ghafoor rubbished the Indian claims of being present inside the Pakistani airspace for 21 minutes during their Line of Control breach today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more