ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ಬಯಸಿದಂತೆ ಒಳ್ಳೆದಿನಗಳು ಬರುತ್ತಿವೆ: ಮರ್ಯಮ್ ಷರೀಫ್

|
Google Oneindia Kannada News

ಲಂಡನ್, ಏಪ್ರಿಲ್ 03: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ವೇದಿಕೆ ಸಜ್ಜಾಗಿರುವ ಸಂದರ್ಭದಲ್ಲೇ ಮಾಜಿ ಪ್ರಧಾನಿ ನವಾಜ್ ಷರೀಪ್ ಮೇಲೆ ಹಲ್ಲೆಯಾಗಿದೆ ಎಂಬ ವರದಿ ಬಂದಿದೆ. ಇಮ್ರಾನ್ ಖಾನ್ ಬೆಂಬಲಿತ ಕಾರ್ಯಕರ್ತರಿಂದ ನವಾಜ್ ಷರೀಫ್ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆಯಾಗಿದೆ ಎಂದು ವರದಿಗಾರ ಅಹ್ಮದ್ ನೂರಾನಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ ಷರೀಫ್ ಅವರು ಟ್ವೀಟ್ ಮಾಡಿ, "ಹಣದುಬ್ಬರ, ಅಸಮರ್ಥತೆ, ಅದಕ್ಷತೆ ಮತ್ತು ಇತಿಹಾಸದ ಎಲ್ಲಾ ಅಂಶಗಳಲ್ಲಿ ಕೆಟ್ಟ ಸರ್ಕಾರವನ್ನು ತೊಡೆದುಹಾಕಲು ರಾಷ್ಟ್ರಕ್ಕೆ ಅಭಿನಂದನೆಗಳು! ಈಗ ಒಳ್ಳೆಯ ದಿನಗಳು ಬರುತ್ತವೆ, ದೇವರು ಬಯಸುತ್ತಾನೆ."

ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನ ಇಮ್ರಾನ್ ಹೇಳಿದ್ದೇನು? ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನ ಇಮ್ರಾನ್ ಹೇಳಿದ್ದೇನು?

ಹಲ್ಲೆ ಘಟನೆ ಕುರಿತು ಪ್ರತಿಕ್ರಿಯಿಸಿರುವ ನವಾಜ್ ಷರೀಫ್ ಪುತ್ರಿ ಮರ್ಯಮ್, ಹಿಂಸಾಚಾರ ನಡೆಸುತ್ತಿರುವ ಆಡಳಿತ ಪಕ್ಷದವರನ್ನು ಜೈಲಿಗೆ ಹಾಕಬೇಕು ಎಂದು ಹೇಳಿದ್ದಾರೆ.

ಇದಲ್ಲದೆ, ಪ್ರಚೋದನೆಮತ್ತು ದೇಶದ್ರೋಹಕ್ಕಾಗಿ ಇಮ್ರಾನ್ ಖಾನ್ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಅವರು ಹೇಳಿದರು.

Now good days will come, God willing, says Maryam Nawaz Sharif

"ಹಿಂಸಾಚಾರವನ್ನು ಆಶ್ರಯಿಸುವ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಸೃಷ್ಟಿಸುವ PTI ಕಾರ್ಯಕರ್ತರು, ಮುಖಂಡರನ್ನು ಬಂಧಿಸಬೇಕು ಮತ್ತು ಕಂಬಿಗಳ ಹಿಂದೆ ಹಾಕಬೇಕು, IK [ಇಮ್ರಾನ್ ಖಾನ್] ಸೇರಿದಂತೆ. IK ಯನ್ನು ಪ್ರಚೋದನೆ, ಪ್ರಚೋದನೆ ಮತ್ತು ದೇಶದ್ರೋಹಕ್ಕಾಗಿ ಪ್ರಕರಣ ದಾಖಲಿಸಬೇಕು. ಇನ್ಶಾ ಅಲ್ಲಾ. ಅವರಲ್ಲಿ ಯಾರನ್ನೂ ಬಿಡಬಾರದು. '' ಎಂದು ಮರ್ಯಮ್ ಪ್ರತಿಕ್ರಿಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಫ್ಯಾಕ್ಟ್ ಫೋಕಸ್ ಸುದ್ದಿ ಸಂಸ್ಥೆ ವರದಿಗಾರ ಅಹ್ಮದ್ ನೂರಾನಿ, ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಕಾರ್ಯಕರ್ತರು ನವಾಜ್ ಷರೀಫ್ ಮೇಲೆ ದಾಳಿ ನಡೆಸಿದ್ದಾನೆ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ವರದಿಯ ಪ್ರಕಾರ, ದಾಳಿಯಲ್ಲಿ ನವಾಜ್ ಷರೀಫ್ ಅವರ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ವಿಶ್ವಾಸ ಮತಯಾಚನೆಗೂ ಮುನ್ನ ಪ್ರತಿಭಟನೆಗೆ ಪಿಟಿಐ ಪಕ್ಷ ಕರೆ ನೀಡಿದೆ. ಇಮ್ರಾನ್ ಬೆಂಬಲಿಗರು ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ವರದಿ ಬಂದಿದೆ.

ಪಾಕಿಸ್ತಾನ ಸಂಸತ್ ಲೆಕ್ಕಾಚಾರ ಹೇಗಿದೆ?: ಪಾಕಿಸ್ತಾನದ ಸಂಸತ್ತಿನಲ್ಲಿ 342 ಸದಸ್ಯ ಬಲದ ಪೈಕಿ ಬಹುಮತಕ್ಕೆ 172 ಸದಸ್ಯರು ಬೆಂಬಲ ಬೇಕಾಗುತ್ತದೆ. ಈ ನಿರ್ಣಯವನ್ನು 172 ಸದಸ್ಯರು ಒಟ್ಟುಗೂಡಿ ಸರ್ಕಾರವನ್ನು ಉರುಳಿಸಲಿದ್ದಾರೆ ಎಂದು ಪ್ರತಿಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.

2018ರಲ್ಲಿ ಇಮ್ರಾನ್ ಖಾನ್ "ನಯಾ ಪಾಕಿಸ್ತಾನ" ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಆಡಳಿತ ನಿರ್ವಹಣೆಯಲ್ಲಿ ಅವರು ವಿಫಲವಾಗಿದ್ದಾರೆ. ಪ್ರತಿಪಕ್ಷಗಳು ಅವರ ಸರ್ಕಾರದ ವಿರುದ್ಧ ಸಿಡಿದೆದ್ದಿವೆ. 69 ವರ್ಷದ ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾರೆ. 155 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧಿಕಾರದಲ್ಲಿ ಉಳಿಯಲು ಕನಿಷ್ಠ 172 ಶಾಸಕರ ಅಗತ್ಯವಿದೆ. ಈ ಹಂತದಲ್ಲಿ ಯಾವುದೇ ಪಾಲುದಾರರು ಪಕ್ಷವನ್ನು ಬದಲಾಯಿಸಲು ನಿರ್ಧರಿಸಿದರೆ ಅವರನ್ನು ತೆಗೆದುಹಾಕಬಹುದು.

English summary
Now good days will come, God willing, says Maryam Nawaz Sharif. Former Pakistan PM Nawaz Sharif attacked in London by activist of Imran Khan's party: Report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X