ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲೇ ಕೊರೊನಾ ಸೋಂಕು ಹುಟ್ಟು, ಚೀನಾ ಗಂಭೀರ ಆರೋಪ

|
Google Oneindia Kannada News

ಬೀಜಿಂಗ್, ನವೆಂಬರ್ 28: ಕೊರೊನಾ ಸೋಂಕು ಭಾರತದಲ್ಲೇ ಹುಟ್ಟಿದ್ದು ಎಂದು ಚೀನಾವು ಗಂಭೀರ ಆರೋಪ ಮಾಡಿದೆ.

ಕೊರೊನಾ ಹುಟ್ಟಿರುವುದು ಚೀನಾದ ವುಹಾನ್ ನಗರದಲ್ಲಿ ಎಂದು ಇಡೀ ಜಗತ್ತಿಗೆ ಗೊತ್ತಿದೆ. ಆದರೆ ಚೀನಾ ಈಗ ಹೊಸ ವರಸೆ ತೆಗೆದಿದ್ದು, ಕೊರೊನಾ ವೈರಸ್ ಹುಟ್ಟಿದ್ದೇ ಭಾರತದಲ್ಲಿ ಎಂದು ಹೇಳುತ್ತಿದೆ.

ಝೈಕೋವ್-ಡಿ ಲಸಿಕೆ ಉತ್ಪಾದನೆ ವೀಕ್ಷಿಸಿದ ಪ್ರಧಾನಿ ಮೋದಿಝೈಕೋವ್-ಡಿ ಲಸಿಕೆ ಉತ್ಪಾದನೆ ವೀಕ್ಷಿಸಿದ ಪ್ರಧಾನಿ ಮೋದಿ

ಕೆಲವು ತಿಂಗಳುಗಳ ಹಿಂದಷ್ಟೇ ಚೀನಾವು ಅಮೆರಿಕದ ಮೇಲೆ ಕೆಲವು ಆಪಾದನೆಗಳನ್ನು ಆಡಿತ್ತು. ಚೀನಾ ಸಂಶೋಧಕರು ಕೊರೊನಾ ವೈರಸ್ ಹುಟ್ಟಿದ್ದು, ಭಾರತದಲ್ಲಿ ಎನ್ನುವ ಹೊಸ ವಾದವನ್ನು ಹುಟ್ಟುಹಾಕಿದ್ದಾರೆ.

 ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಹೇಳುವುದೇನು?

ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಹೇಳುವುದೇನು?

ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ನ ಒಂದು ತಂಡದ ವಾದದ ಪ್ರಕಾರ 2019ರ ಬೇಸಿಗೆ ಕಾಲದಲ್ಲಿ ವೈರಸ್ ಭಾರತದಲ್ಲಿ ಹುಟ್ಟಿದೆ. ಕಲುಷಿತ ನೀರಿನ ಮೂಲಕ ಪ್ರಾಣಿಗಳಿಂದ ಮಾನವನಿಗೆ ಹರಡಿದೆ ಇದಾದ ಬಳಿಕ ವುಹಾನ್‌ಗೆ ವ್ಯಕ್ತಿಯೊಬ್ಬರ ಪ್ರಯಾಣದ ಮೂಲಕ ಹರಡಿದ್ದು, ಅದನ್ನು ಮೊದಲಿಗೆ ಪತ್ತೆ ಹೆಚ್ಚಲಾಯಿತು ಎಂದು ಹೇಳಿದೆ.

 ಚೀನಾ ಭಾರತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ

ಚೀನಾ ಭಾರತ ಗಡಿಯಲ್ಲಿ ಉದ್ವಿಗ್ನ ಸ್ಥಿತಿ

ಚೀನಾ ಹಾಗೂ ಭಾರತದ ನಡುವೆ ಗಡಿ ವಿವಾದ ಉಲ್ಬಣಗೊಂಡಿದ್ದು, ಸ್ಥಿತಿ ಉದ್ವಿಗ್ನವಾಗಿದೆ. ಚೀನಾದ ಪ್ರಮುಖ ಅಪ್ಲಿಕೇಷನ್‌ಗಳನ್ನು ಭಾರತದ ರದ್ದು ಮಾಡಿದೆ. ಅಲ್ಲದೆ, ವಿದೇಶಿ ನೀತಿಯಲ್ಲೂ ಕೆಲ ಬದಲಾವಣೆಗಳನ್ನು ಮಾಡುವ ಮೂಲಕ ಚೀನಾ, ಭಾರತ ತಿರುಗೇಟು ನೀಡುತ್ತಿದ್ದು, ಇದರ ನಡುವೆಯೂ ಅರೋಪ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 ಚೀನಾದ ಆರೋಪ ಮೊದಲಲ್ಲ

ಚೀನಾದ ಆರೋಪ ಮೊದಲಲ್ಲ

ಚೀನಾ ಅರೋಪ ಇದೇ ಮೊದಲಲ್ಲ, ಈ ಮೊದಲು ಅಮೆರಿಕ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದ ಚೀನಾ, ಅಮೆರಿಕ, ಯೋಧರ ಮೂಲಕ ಕೊರೊನಾ ವೈರಸ್‌ನ್ನು ಚೀನಾ ನೆಲಕ್ಕೆ ತಂದುಬಿಟ್ಟಿದೆ ಎಂದು ಆರೋಪಿಸಿತ್ತು. ಬಳಿಕ ಇಟಲಿ ವಿರುದ್ಧವೂ ದೋಷಾರೋಪ ಮಾಡಿತ್ತು, ಆದರೆ ಯಾವುದೇ ಸಾಕ್ಷ್ಯಗಳನ್ನು ನೀಡಿರಲಿಲ್ಲ.

 ಗ್ಲಾಸ್ಕೋ ವಿಶ್ವವಿದ್ಯಾಲಯ ಹೇಳಿದ್ದಿಷ್ಟು

ಗ್ಲಾಸ್ಕೋ ವಿಶ್ವವಿದ್ಯಾಲಯ ಹೇಳಿದ್ದಿಷ್ಟು

ಆದರೆ ಚೀನಾದ ಆರೋಪವನ್ನು ಸ್ಕಾಟ್‌ಲೆಂಡ್‌ನ ಗ್ಲಾಸ್ಕೋ ವಿಶ್ವವಿದ್ಯಾಲಯದ ಪರಿಣಿತ ಸಂಶೋಧಕರ ಡೇವಿಡ್ ರಾಬರ್ಟ್ ಸನ್ ಅಲ್ಲಗಳೆದಿದ್ದಾರೆ. ಸಂಶೋಧನೆ ದೋಷಪೂರಿತವಾಗಿವೆ ಎಂದಿರುವ ಅವರು, ಕೊರೊನಾ ವೈರಸ್ ಬಗೆಗಿನ ನಮ್ಮ ತಿಳಿವಳಿಕೆಗೆ ಏನನ್ನೂ ಸೇರಿಸುವುದಿಲ್ಲ ಎಂದಿದ್ದಾರೆ.

English summary
Chinese researchers have claimed that coronavirus originated in India, in the latest attempt by academics to pin blame for the pandemic outside their borders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X