ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ ಕಡಿಮೆಯಾದ ಕೊರೊನಾ ಸೋಂಕು: ವೈದ್ಯರು ಏನಂತಾರೆ?

|
Google Oneindia Kannada News

ರೋಮ್, ಜೂನ್ 1: ಇಟಲಿಯಲ್ಲಿ ಕೊರೊನಾ ವೈರಸ್ ಹಾವಳಿ ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Recommended Video

ಕಾರೆಹೊಂಡ ಗ್ರಾಮಸ್ತರ ಜೊತೆ ಕಾಲಕಳೆದ ಕುಮಾರ್ ಬಂಗಾರಪ್ಪ | Oneindia Kannada

ಇಟಲಿಯಲ್ಲಿ ಈಗ ಕೊರೊನಾ ವೈರಸ್ ಅಸ್ತಿತ್ವದಲ್ಲೇ ಇಲ್ಲ. ಫೆಬ್ರವರಿ 21ರ ಬಳಿಕ ಇಲ್ಲಿಯವರೆಗೆ ಇಟಲಿಯಲ್ಲಿ 33,415 ಮಂದಿ ಕೊರೊನಾವೈರಸ್‌ನಿಂದ ಸಾವನ್ನಪ್ಪಿದ್ದರು. 2.33 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಅಷ್ಟಾದರೂ ಕೂಡ ಸೋಂಕು ಹರಡುವಿಕೆ ಮತ್ತು ಸಾವು ಸಂಭವಿಸುತ್ತಿರುವ ಪ್ರಮಾಣ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Novel Coronavirus Losing Potency Top Italian Doctor Says

ಇಟಲಿಯಲ್ಲಿ ಈಗ ಕೊರೊನಾ ವೈರಸ್ ಅಸ್ತಿತ್ವದಲ್ಲಿ ಇಲ್ಲ ಎಂದು ಇಟಲಿಯಲ್ಲಿನ ಮಿಲನ್‌ನಲ್ಲಿರುವ ಸ್ಯಾನ್ ರಾಫೆಲ್ ಆಸ್ಪತ್ರೆ ಮುಖ್ಯಸ್ಥ ಆಲ್ಬರ್ಟೊ ಜಾಂಗ್ರಿಲ್ಲೊ ತಿಳಿಸಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ ನಡೆಸಲಾದ ಪರೀಕ್ಷೆಗಳು ಮತ್ತು ಒಂದು ಅಥವಾ ಎರಡು ತಿಂಗಳ ಹಿಂದೆ ನಡೆಸಿದ ಪರೀಕ್ಷೆಗಳನ್ನು ಹೋಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಕೊರೊನಾ ವಿರುದ್ಧ ಇಟಲಿ ಗೆಲುವು ಸಾಧಿಸಿದೆ. ಸೋಂಕಿನ ಎರಡನೆಯ ಅಲೆಯ ಬಗ್ಗೆ ತಜ್ಞರು ತುಂಬಾ ಎಚ್ಚರವಹಿಸಿದ್ದಾರೆ. ಹೊಸ ವಾಸ್ತವವನ್ನು ರಾಜಕಾರಣಿಗಳು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ . ದೇಶವನ್ನು ಸಹಜಸ್ಥಿತಿಗೆ ಮರಳಿ ತರಬೇಕಿದೆ ಎಂದು ಅವರು ಹೇಳಿದ್ದಾರೆ.

English summary
The new coronavirus is losing its potency and has become much less lethal, a senior Italian doctor said on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X