ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡದ ತಾಪವೇ ಹೆಚ್ಚುತ್ತಿದೆ

|
Google Oneindia Kannada News

ನವದೆಹಲಿ, ನವೆಂಬರ್ 13: ಹೊಸ ಅಧ್ಯಯನವೊಂದರ ಪ್ರಕಾರ ತಾಪಮಾನದ ಬಿಸಿ ಎದುರಿಸುತ್ತಿರುವ ಗ್ರಹದಲ್ಲಿ ಭೂಮಿ ಮಾತ್ರವಲ್ಲ, ಇಡೀ ಬ್ರಹ್ಮಾಂಡವೇ ಉಷ್ಣಾಂಶ ಏರಿಕೆಯನ್ನು ಎದುರಿಸುತ್ತಿದೆ.

ಓಹಿಯೋ ವಿಶ್ವವಿದ್ಯಾಲಯದ ಕಾಸ್ಮೋಲಜಿ ಮತ್ತು ಆಸ್ಟ್ರೋಪಾರ್ಟಿಕಲ್ ಫಿಸಿಕ್ಸ್ ಕೇಂದ್ರದ ಹೊಸ ಅಧ್ಯಯನವು, ಇಡೀ ಬ್ರಹ್ಮಾಂಡವೇ ತಾಪಮಾನ ಏರಿಕೆಯನ್ನು ಕಾಣುತ್ತಿದೆ. ಕಳೆದ 10 ಬಿಲಿಯನ್ ವರ್ಷಗಳಿಂದ ಬ್ರಹ್ಮಾಂಡದ ಉಷ್ಣ ಇತಿಹಾಸವನ್ನು ನಿರಂತರವಾಗಿ ಪರಿಶೀಲನೆ ನಡೆಸುತ್ತಿರುವ ನಡುವೆ ವಿಜ್ಞಾನಿಗಳಿಗೆ ಈ ಮಹತ್ವದ ವಾಸ್ತವ ಗೊತ್ತಾಗಿದೆ.

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

ವರದಿಯೊಂದರ ಪ್ರಕಾರ, ಈ ಅಧ್ಯಯನವು ಕಳೆದ 10 ಬಿಲಿಯನ್ ವರ್ಷಗಳಿಂದ ಇದುವರೆಗೂ ಬ್ರಹ್ಮಾಂಡದ ತಾಪಮಾನವು 10 ಪಟ್ಟಿಗಿಂತಲೂ ಅಧಿಕವಾಗಿದೆ. ಉಷ್ಣಾಂಶವು ಇಂದಿಗೆ ಸುಮಾರು 2 ಮಿಲಿಯನ್ ಡಿಗ್ರಿ ಕೆಲ್ವಿನ್ ತಲುಪಿದೆ. ಆದರೆ ಭೂಗ್ರಹದಲ್ಲಿನ ತಾಪಮಾನ ಏರಿಕೆಗೂ ಬ್ರಹ್ಮಾಂಡದ ತಾಪಮಾನ ಏರಿಕೆಗೂ ಸಂಬಂಧವಿಲ್ಲ.

Not Only Earth, Whole Planet Is Getting Hotter: New Study

ಈ ಅಧ್ಯಯನದ ನೇತೃತ್ವ ವಹಿಸಿದ್ದ ವಿಶ್ವವಿದ್ಯಾಲಯದ ಯಿ ಕುವಾನ್ ಚಿಯಾಂಗ್, ಹೊಸ ತಿಳಿವಳಿಕೆಗಳು 2019ರ ಭೌತಶಾಸ್ತ್ರ ನೊಬೆಲ್ ವಿಜೇತ ಜಿಮ್ ಪೀಬಲ್ಸ್ ಅವರ ಕಾರ್ಯಗಳಿಂದ ಪ್ರಭಾವಿತಗೊಂಡು ನಡೆಸಿದ ಅಧ್ಯಯನದಿಂದ ಸಿಕ್ಕಿವೆ. ಬ್ರಹ್ಮಾಂಡದಲ್ಲಿನ ಬೃಹತ್ ಪ್ರಮಾಣದ ಸಂರಚನೆಗಳು ಹೇಗೆ ಹುಟ್ಟಿಕೊಂಡವು ಎಂಬುದರ ಬಗ್ಗೆ ಪೀಬಲ್ಸ್ ಅವರು ಸಿದ್ಧಾಂತವನ್ನು ಸೃಷ್ಟಿಸಿದ್ದರು ಎಂದಿದ್ದಾರೆ.

ನರಕದಂತಹ ಗ್ರಹ ಪತ್ತೆಹಚ್ಚಿದ ಭಾರತ ಮೂಲದ ವಿಜ್ಞಾನಿಗಳುನರಕದಂತಹ ಗ್ರಹ ಪತ್ತೆಹಚ್ಚಿದ ಭಾರತ ಮೂಲದ ವಿಜ್ಞಾನಿಗಳು

ಬ್ರಹ್ಮಾಂಡದ ಉಗಮದೊಂದಿಗೆ ಗುರುತ್ವವು ಬಾಹ್ಯಾಕಾಶದ ಕತ್ತಲು ಮತ್ತು ಅನಿಲವನ್ನು ಗ್ಯಾಲಕ್ಸಿಗಳು ಮತ್ತು ಗ್ಯಾಲಕ್ಸಿಗಳ ಗುಚ್ಛದೊಳಗೆ ಒಟ್ಟಾಗಿ ಎಳೆದುಕೊಂಡಿತ್ತು. ಇದು ಎಷ್ಟು ತೀವ್ರವಾಗಿತ್ತೆಂದರೆ ಹೆಚ್ಚು ಹೆಚ್ಚು ಅನಿಲವನ್ನು ಎಳೆದುಕೊಂಡಂತೆ ಅದು ಬಿಸಿಯಾಗುತ್ತಿತ್ತು. ಈಗ ವಿಜ್ಞಾನಿಗಳು ಭೂಮಿಯಿಂದ ಒಂದಷ್ಟು ದೂರದಲ್ಲಿ ಇರುವ ಅನಿಲದ ತಾಪಮಾನವನ್ನು ಅಳೆಯಲು ಹೊಸ ಮಾದರಿಯನ್ನು ಬಳಸಿದ್ದಾರೆ. ಪ್ರಸ್ತುತದ ಸಂದರ್ಭದಲ್ಲಿ ಭೂಮಿಗೆ ಸಮೀಪ ಇರುವ ಅನಿಲಗಳ ಮಾಪನವನ್ನು ಸಂಶೋಧನೆ ವೇಳೆ ಹೋಲಿಸಲಾಗುತ್ತಿದೆ.

ಕಾಸ್ಮಿಕ್ ಸಂರಚನೆಯ ಗುರುತ್ವ ಕುಸಿತದಿಂದಾಗಿ ಬ್ರಹ್ಮಾಂಡವು ಕಾಲಕ್ರಮೇಣ ಬಿಸಿಯಾಗುತ್ತಿದ್ದು, ಇದು ಮುಂದುವರಿಯಬಹುದು ಎಂದು ಸಂಶೋಧನೆ ತಿಳಿಸಿದೆ.

English summary
A new study by Ohio State University has revealed Earth is not the only planet, but entire universe has been observing rise in temperature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X