ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರ್ವೆ ಪ್ರಧಾನಿಗೆ ವಿಧಿಸಿದ 1.71 ಲಕ್ಷ ರೂ. ದಂಡದ ಹಿಂದಿನ ಕುತೂಹಲಕಾರಿ ಕಾರಣ?

|
Google Oneindia Kannada News

ನವದೆಹಲಿ, ಏಪ್ರಿಲ್ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವುದಕ್ಕೆ ಸರ್ಕಾರಗಳೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತವೆ. ಆದರೆ ಈ ಸರ್ಕಾರವನ್ನು ನಡೆಸುವ ಜನಪ್ರತಿನಿಧಿಗಳೇ ಈ ನಿಯಮಗಳನ್ನು ಪಾಲಿಸುವುದನ್ನು ಮರೆತು ಬಿಡುತ್ತಾರೆ. ಹೀಗೆ ಕೊವಿಡ್-19 ಶಿಷ್ಟಾಚಾರವನ್ನು ತೊರೆದ ಪ್ರಧಾನಮಂತ್ರಿಗೆ ಈ ದೇಶದಲ್ಲಿ ದುಬಾರಿ ದಂಡ ವಿಧಿಸಲಾಗಿದೆ.
ಕೊರೊನಾವೈರಸ್ ಆತಂಕದ ನಡುವೆಯೂ ಕುಟುಂಬ ಸದಸ್ಯರೊಬ್ಬರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ನಾರ್ವೆ ಪ್ರಧಾನಮಂತ್ರಿ ಎರ್ನಾ ಸೋಲ್ಬರ್ಗ್ ಅವರಿಗೆ 2300 ಡಾಲರ್ (171867 ರೂಪಾಯಿ) ದಂಡ ವಿಧಿಸಲಾಗಿದೆ.
ಕಳೆದ ಶುಕ್ರವಾರ ಎರ್ನಾ ಸೋಲ್ಬರ್ಗ್ ಆಯೋಜಿಸಿದ ಭೋಜನ ಕೂಟದಲ್ಲಿ ಸರ್ಕಾರ ನಿಗದಿಗೊಳಿಸಿದ ಮಿತಿಗಿಂತಲೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವೇಳೆ ಸರ್ಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಂಡು ಬಂದಿದೆ.

ನಾರ್ವೇನಲ್ಲಿ ಲಸಿಕೆ ಪಡೆದ 23 ವಯೋವೃದ್ಧರ ಸಾವು; ಲಸಿಕೆ ಅಡ್ಡಪರಿಣಾಮ ಶಂಕೆ
"ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದ ಮೇಲೆ ಕಾನೂನಿನ ಮುಂದೆ ಎಲ್ಲರೂ ಒಂದೇ" ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೇ, ಎರ್ನಾ ಸೋಲ್ಬರ್ಗ್ ದೇಶದ ಅಗ್ರಗಣ್ಯ ಚುನಾಯಿತ ಪ್ರತಿನಿಧಿಯಾಗಿದ್ದು, ಸಾಂಕ್ರಾಮಿಕ ಪಿಡುಗನ್ನು ಎದುರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಹಂತದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳಲ್ಲಿ ಸೋಲ್ಬರ್ಗ್ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.

Norway Prime Minister Erna Solberg Has Been Fined 1.71 Lakh Rupees; Here Read The Reason.
ಹುಟ್ಟುಹಬ್ಬದ ಆಚರಣೆ ಮಾಡಿಕೊಂಡಿದ್ದು ಯಾವಾಗ?:
ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ನಾರ್ವೆ ಪ್ರಧಾನಮಂತ್ರಿ ಸೋಲ್ಬರ್ಗ್ ಅವರು ಕೊವಿಡ್-19 ಶಿಷ್ಟಾಚಾರ ಮತ್ತು ಮಾರ್ಗಸೂಚಿಯನ್ನು ಉಲ್ಲಂಘಿಸಿ ತಮ್ಮ 60ನೇ ಹುಟ್ಟಹಬ್ಬವನ್ನು ಕುಟುಂಬದ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದರು ಎಂದು ಎನ್ಆರ್ ಕೆ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ದೇಶದಲ್ಲಿ ಕೊವಿಡ್-19 ಶಿಷ್ಟಾಚಾರದ ಪ್ರಕಾರ, ಖಾಸಗಿ ಮತ್ತು ಸರ್ಕಾರಿ ಕೂಟಗಳಲ್ಲಿ 10ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಆದರೆ ಫೆಬ್ರವರಿ 25ರಂದು ನಡೆದ ಭೋಜನ ಕೂಟದಲ್ಲಿ ಪ್ರಧಾನಿ ಕುಟುಂಬ 13 ಮಂದಿ ಸದಸ್ಯರು ಭಾಗವಹಿಸಿದ್ದರು.
ದೇಶದ ಜನತೆ ಕ್ಷಮಾಪಣೆ ಕೋರಿದ ಪ್ರಧಾನಿ:
ಮಾರ್ಚ್ ತಿಂಗಳಿನಲ್ಲಿ ನಡೆದ ಭೋಜನ ಕೂಟದಲ್ಲಿ ಸ್ವತಃ ಪ್ರಧಾನಮಂತ್ರಿ ಎರ್ನಾ ಸೋಲ್ಬರ್ಗ್ ಅವರು ಭಾಗವಹಿಸಿರಲಿಲ್ಲ. ಕಣ್ಣಿನ ಸಮಸ್ಯೆಯಿಂದಾಗಿ ಅವರು ಆಸ್ಪತ್ರೆಗೆ ತೆರಳಿದ್ದರು. ಆದರೆ ಭೋಜನ ಕೂಟವನ್ನು ಆಯೋಜಿಸಿದ ಹಿನ್ನೆಲೆ ಕೊರೊನಾವೈರಸ್ ನಿಯಮಗಳ ಉಲ್ಲಂಘನೆಗೆ ಪ್ರಧಾನಿಯವರೇ ಹೊಣೆಯಾಗುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಕೊರೊನಾವೈರಸ್ ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕಾಗಿ ದೇಶದ ಪ್ರಜೆಗಳ ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಎರ್ನಾ ಸೋಲ್ಬರ್ಗ್ ಹೇಳಿದ್ದಾರೆ.
English summary
Norway Prime Minister Erna Solberg Has Been Fined 1.71 Lakh Rupees; Here Read The Reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X