ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಜನತೆ ಎದುರು ನನ್ನನ್ನು ಕ್ಷಮಿಸಿ ಎಂದು ಕಣ್ಣೀರಿಟ್ಟ ಕಿಮ್ ಜಾಂಗ್ ಉನ್

|
Google Oneindia Kannada News

ಸಿಯೋಲ್, ಅಕ್ಟೋಬರ್ 13:ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ.

ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ದೇಶದ ಜನರ ಜೊತೆ ತನಗೆ ಇರಲು ಸಾಧ್ಯವಾಗಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

3rd World War Fix: ಸರ್ವಾಧಿಕಾರಿ ಕಿಮ್ ತಂದಿದ್ದಾನೆ ವಿನಾಶಕ ಅಸ್ತ್ರ..! 3rd World War Fix: ಸರ್ವಾಧಿಕಾರಿ ಕಿಮ್ ತಂದಿದ್ದಾನೆ ವಿನಾಶಕ ಅಸ್ತ್ರ..!

ತಮ್ಮ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ 75ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ಉತ್ತರ ಕೊರಿಯಾ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ನನಗೆ ನಡೆದುಕೊಳ್ಳಲು ಸಾಧ್ಯವಾಗಿಲ್ಲ,ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು.

North Koreas Kim Jong Un Tearfully Thanks Troops

ಈ ಹಿಂದೆ ದೇಶದ ಚುಕ್ಕಾಣಿ ಹಿಡಿದಿದ್ದ ತನ್ನ ತಂದೆ ಮತ್ತು ಅಜ್ಜನನ್ನು ಕಿಮ್ ತನ್ನ ಭಾಷಣದಲ್ಲಿ ಉಲ್ಲೇಖಿಸಿದರು. ನನ್ನ ದೇಶದ ಜನರು ನನ್ನ ಮೇಲೆ ಆಕಾಶದಷ್ಟು ಎತ್ತರಕ್ಕೆ ಸಮುದ್ರದಷ್ಟು ಆಳವಾದ ನಂಬಿಕೆ ಇಟ್ಟಿದ್ದಾರೆ. ಆದರೆ ಜನರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಅವರ ಕಷ್ಟದ ಸಂದರ್ಭದಲ್ಲಿ ಅವರೊಂದಿಗಿರಲು ಆಗಲಿಲ್ಲ ಎಂದು ಕಣ್ಣೀರಿಟ್ಟರು.

ಖಂಡಾಂತರ ಕ್ಷಿಪಣಿ ಮತ್ತು ಇತರೆ ಮಿಟಿಟರಿ ಯುದ್ಧೋಪಕರಣಗಳ ಪ್ರದರ್ಶನ ಪಕ್ಷದ 75ನೇ ಸಂಸ್ಥಾಪನಾ ದಿನದ ಭಾಷಣವನ್ನು ಕಿಮ್ ಜನರ ಸಹಾನುಭೂತಿ ಪಡೆಯಲು ಬಳಸಿಕೊಂಡಿದ್ದಾರೆ.

ಕಮಾಂಡರ್‌ಗಳಾಗಿದ್ದ ಕಿಮ್ ಇಲ್ ಸುಂಗ್ ಮತ್ತು ಕಿಮ್ ಜಾಂಗ್ ಇಲ್ ಅವರ ಆದರ್ಶಗಳನ್ನು ಎತ್ತಿಹಿಡಿಯಲು, ಈ ದೇಶವನ್ನು ಮುನ್ನಡೆಸುವ ಪ್ರಮುಖ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು.

Recommended Video

AB DE Villiers ಆಟಕ್ಕೆ ಭಾರತದ ಕೋಚ್ ಫುಲ್ ಫಿದಾ | Oneindia Kannada

ಎಲ್ಲ ಜನರ ನಂಬಿಕೆಗೆ ಧನ್ಯವಾದ, ಆದರೆ ಸಂಕಷ್ಟದ ಸಮಯದಲ್ಲಿ ಅನಿವಾರ್ಯವಾಗಿ ನಾನು ದೂರ ಉಳಿಯಬೇಕಾಯಿತು ಎಂಬುದನ್ನು ಪುನರುಚ್ಚರಿಸಿದರು.

English summary
North Korean leader Kim Jong Un became visibly emotional during a speech at a military parade over the weekend as he thanked troops for their sacrifices and apologised to citizens for failing to improve their lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X