ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾ: ಸ್ಕ್ವಿಡ್ ಗೇಮ್ ಶೋ ಪ್ರತಿ ವಿತರಿಸಿದ ವ್ಯಕ್ತಿಗೆ ಮರಣದಂಡನೆ

|
Google Oneindia Kannada News

ನೆಟ್‌ಫ್ಲಿಕ್ಸ್‌ನ ಸ್ಕ್ವಿಡ್ ಗೇಮ್ ಶೋನ ಪ್ರತಿ ವಿತರಣೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಉತ್ತರ ಕೊರಿಯಾ ಸರ್ಕಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಬಡತನವನ್ನು ಹೊಡೆದೋಡಿಸಿ ಇದ್ದಕ್ಕಿದ್ದಂತೆ ಶ್ರೀಮಂತರಾಗೋದು ಈ ವೆಬ್ ಸೀರೀಸ್‌ನ ಮೂಲಕ ಕತೆ. ಆದರೆ ಆ ಶ್ರೀಮಂತಿಕೆ ಪಡೆಯಲು ಅಲ್ಲಿರುವ ಜನರು ಆಟವಾಡಬೇಕು. ಆಟ ಅಂದರೆ ಬಹಳ ಕಷ್ಟಕರ ಆಟವಲ್ಲ, ಕೇವಲ ಮಕ್ಕಳ ಆಟ ಆದರೆ ಹೆಚ್ಚು ಕಡಿಮೆ ಆದರೆ ಎಲಿಮಿನೇಷನ್ ಹೆಸರಿನಲ್ಲಿ ಪ್ರಾಣವೇ ಹೋಗಿಬಿಡುತ್ತದೆ.

2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕಿಮ್‌ ಜಾಂಗ್ ಉನ್ ಮನವಿ2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕಿಮ್‌ ಜಾಂಗ್ ಉನ್ ಮನವಿ

ಆಟವಾಡಲು ಒಂದು ಬೇರೆಯ ಜಗತ್ತನ್ನೇ ಸೃಷ್ಟಿ ಮಾಡಿರುತ್ತಾರೆ ನಿರ್ದೇಶಕರು, ಅದರಲ್ಲಿ ವಿವಿಧ ಆಟಿಕೆಗಳು, ಆಟವಾಡಲು ಮೈದಾನ ಎಲ್ಲವೂ ವಿಭಿನ್ನ. ಇನ್ನು ಆಟವಾಡಿಸುವ ಜನರ ವಿಷಯಕ್ಕೆ ಬಂದರೆ ಯಾರ ಮುಖ ಪರಿಚಯವಾಗುವುದೇ ಇಲ್ಲ ಕೈಯಲ್ಲಿ ಶಸ್ತ್ರಾಸ್ತ್ರ ಮಾತ್ರ ಇರುತ್ತದೆ.

North Korean Man Gets Death For Selling Netflixs Squid Game

ಈ ಸ್ಕ್ವಿಡ್​ ಗೇಮ್​​ ಒಂಭತ್ತು ಎಪಿಸೋಡ್​ಗಳ ಶೋ ಆಗಿದ್ದು, ಒಂದು ಕುತೂಹಲಕಾರಿ, ಆಸಕ್ತಿದಾಯಕ ಕಥಾವಸ್ತುವನ್ನು ಒಳಗೊಂಡಿದೆ. ಭಾರಿ ನಗದು ಬಹುಮಾನ ಗೆಲ್ಲುವ ಆಸೆಯಿಂದ ಒಂದಷ್ಟು ಜನರು, ಮಕ್ಕಳ ನಿಗೂಢ ಆಟಗಳನ್ನು ಆಡಲು ಸೈನ್​ಅಪ್​ ಆಗುವ ಕಥೆಯನ್ನು ಈ ಒಂಭತ್ತು ಎಪಿಸೋಡ್​ಗಳು ಹೇಳುತ್ತವೆ. ಅಂದಹಾಗೆ ಇದು ದಕ್ಷಿಣ ಕೊರಿಯಾದ ಡ್ರಾಮಾ ಶೋ.

ಇದೀಗ ಈ ಶೋವನ್ನು ಖರೀದಿಸಿ ಉಳಿದವರಿಗೆ ವಿತರಿಸಿ ಮರಣದಂಡನೆಗೆ ಒಳಗಾದವನು ವಿದ್ಯಾರ್ಥಿಯಾಗಿದ್ದಾನೆ. ಇನ್ನು ಈತ ಓದುತ್ತಿದ್ದ ಶಾಲೆ ಶಿಕ್ಷಕರು ಮತ್ತು ನಿರ್ವಾಹಕರನ್ನೂ ಕೆಲಸದಿಂದ ತೆಗೆದುಹಾಕಲಾಗಿದ್ದು, ಕೆಲಸ ಮಾಡುವಂತೆ ಗಣಿಗಳಿಗೆ ಕಳಿಸಲಾಗಿದೆ.

ವಿದ್ಯಾರ್ಥಿ ತಾನು ಚೀನಾದಿಂದ ತಂದು ಇಲ್ಲಿ ತನ್ನ ಆಸಕ್ತಿ ಇರುವ ಸ್ನೇಹಿತರಿಗೆ ವಿತರಿಸಿದ್ದ. ಆದರೆ ಉತ್ತರ ಕೊರಿಯಾದಲ್ಲಿ ಇತ್ತೀಚೆಗಷ್ಟೇ ಅಂಗೀಕರಿಸಲ್ಪಟ್ಟ ಪ್ರತಿಕ್ರಿಯಾತ್ಮಕ ಚಿಂತನೆ ಮತ್ತು ಸಂಸ್ಕೃತಿ ನಿರ್ಮೂಲನೆ ವಿರೋಧಿ ಕಾನೂನಿನ ಅನ್ವಯ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಲಾಗಿದ್ದು, ಮರಣದದಂಡನೆಗೆ ಗುರಿಪಡಿಸಲಾಗಿದೆ.

ಈ ಕಾನೂನಿನ ಅನ್ವಯ ಉತ್ತರ ಕೊರಿಯಾದಲ್ಲಿ ವಿದೇಶಗಳ ಅದರಲ್ಲೂ ವಿಶೇಷವಾಗಿ ಯುಎಸ್​ ಮತ್ತು ದಕ್ಷಿಣ ಕೊರಿಯಾದ ಶೋಗಳನ್ನು ವೀಕ್ಷಿಸುವುದು, ಅದರ ಕಾಪಿಗಳನ್ನು ಇಟ್ಟುಕೊಳ್ಳುವುದು ಮತ್ತು ಇತರರಿಗೆ ವಿತರಿಸುವುದು ಬಹುದೊಡ್ಡ ಅಪರಾಧವಾಗಿದ್ದು, ಮರಣದಂಡನೆಯವರೆಗೂ ಶಿಕ್ಷೆ ನೀಡಬಹುದಾಗಿದೆ. ಉತ್ತರ ಕೊರಿಯಾದಲ್ಲಿ ಇತ್ತೀಚೆಗೆಷ್ಟೇ ಸೌತ್ ಕೊರಿಯಾದ ಪಾಪ್​ ಸಂಗೀತ ನಿಷೇಧಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

ಸ್ಕ್ವಿಡ್‌ ಗೇಮ್‌ ವೆಬ್‌ ಸೀರೀಸ್‌ನ ಪೆನ್‌ಡ್ರೈವ್ , ಎಸ್‌ಡಿ ಕಾರ್ಡ್‌ಗಳಲ್ಲಿ ಜನರು ವೀಕ್ಷಣೆ ಮಾಡುತ್ತಾ ಇದ್ದಾರೆ. ಆದರೆ ಸರ್ಕಾರದ ಆದೇಶ ಮೀರಿ ಆ ವೆಬ್‌ ಸರಣಿಯನ್ನು ವೀಕ್ಷಿಸಿದವರಿಗೆ ಉಗ್ರ ಶಿಕ್ಷೆ ನೀಡಲಾಗುತ್ತಿದೆ.

ವೆಬ್‌ಸೀರೀಸ್ ಕಾಪಿ ಮಾರಾಟ ಮಾಡುತ್ತಿದ್ದ ಯುವಕನನ್ನು ಕಿಮ್ ಸರ್ಕಾರ ಕ್ರೂರವಾಗಿ ಹತ್ಯೆ ಮಾಡಿದೆ. ಜತೆಗೆ ಸ್ಕ್ವಿಡ್ ಗೇಮ್ ನೋಡಿದ ಕೆಲ ವಿದ್ಯಾರ್ಥಿಗಳನ್ನೂ ಜೈಲು ಶಿಕ್ಷೆಗೆ ಗುರಿಪಡಿಸಲಾಗಿದೆ. ಒಬ್ಬ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಮತ್ತೊಬ್ಬ ವಿದ್ಯಾರ್ಥಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಉತ್ತರ ಕೊರಿಯಾದಲ್ಲಿ ತನ್ನ ದೇಶದ ಜನರಿಗೆ ಬಟ್ಟೆ ವಿಚಾರದಲ್ಲೂ ಬೌಂಡರಿ ಹಾಕಿಬಿಟ್ಟಿದ್ದಾನೆ ಕಿಮ್ ಜಾಂಗ್ ಉನ್. ಉತ್ತರ ಕೊರಿಯಾದಲ್ಲಿ ಎಷ್ಟೇ ಮೈಕೊರೆಯುವ ಚಳಿ ಇದ್ದರೂ ಇನ್ನುಮುಂದೆ ಅಲ್ಲಿನ ಜನರು ಲೆದರ್ ಜಾಕೆಟ್ ಧರಿಸುವ ಹಾಗಿಲ್ಲ.

ಕಿಮ್ ಜಾಂಗ್ ಉನ್ ತನ್ನ ದೇಶದ ಜನರಿಗೆ ಉಸಿರುಗಟ್ಟಿಸುವ ನಿಯಮಗಳನ್ನು ಹೇರಿರುವುದು ಇದೇ ಮೊದಲಲ್ಲ, ಹಲವು ವರ್ಷಗಳಿಂದ ನಿಯಮಗಳ ಹೆಸರಿನಲ್ಲಿ ಉತ್ತರ ಕೊರಿಯಾ ಪ್ರಜೆಗಳ ಮೇಲೆ ಶೋಷಣೆ ನಡೆಸುತ್ತಲೇ ಇದ್ದಾರೆ.

English summary
South Korean survival drama Squid Game became Netflix’s most-watched original series ever after it was released in September this year. The series took the world by storm but the little hermit country North Korea banned it publicly declaring the show an indictment of South Korea’s capitalist system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X