ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದ ನಡುವೆಯೇ 16 ಮಂದಿ ಸಹೋದ್ಯೋಗಿಯನ್ನು ಕೊಂದ ಮೀನುಗಾರರು

|
Google Oneindia Kannada News

ಸಿಯೋಲ್, ನವೆಂಬರ್ 7: ತಮ್ಮ ಜತೆಗಾರ 16 ಮೀನುಗಾರರನ್ನು ಕೊಂದು ಪರಾರಿಯಾಗಿದ್ದ ಇಬ್ಬರನ್ನು ದಕ್ಷಿಣ ಕೊರಿಯಾ ಪೊಲೀಸರು ಉತ್ತರ ಕೊರಿಯಾಕ್ಕೆ ಮರಳಿ ಒಪ್ಪಿಸಿದ್ದಾರೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಸಮುದ್ರ ಗಡಿಯಲ್ಲಿ ಮೀನುಗಾರರ ಹಡಗು ಸಾಗುವ ವೇಳೆ ಇಬ್ಬರು ಮೀನುಗಾರರು ಮ್ಮ 16 ಸಹೋದ್ಯೋಗಿಗಳನ್ನು ಹತ್ಯೆ ಮಾಡಿ ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಿದ್ದರು ಎನ್ನಲಾಗಿದೆ.

50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ

ಸಾಮಾನ್ಯವಾಗಿ ಉತ್ತರ ಕೊರಿಯಾದಿಂದ ತಪ್ಪಿಸಿಕೊಂಡು ಬಂದು ರಾಜಕೀಯ ಆಶ್ರಯ ಕೋರಿದವರಿಗೆ ದಕ್ಷಿಣ ಕೊರಿಯಾ ಆಶ್ರಯ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಇಬ್ಬರು ದೇಶಭ್ರಷ್ಟರಾಗಿ ತಮ್ಮ ನೆಲಕ್ಕೆ ಬಂದಿಲ್ಲ. ಅವರು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿರುವವರು. ಹೀಗಾಗಿ ಅವರನ್ನು ಅಪರಾಧಿಗಳು ಎಂದು ಪರಿಗಣಿಸಿ ಉತ್ತರ ಕೊರಿಯಾಕ್ಕೆ ಮರಳಿ ಕಳುಹಿಸಲಾಗಿದೆ ಎಂದು ದಕ್ಷಿಣ ಕೊರಿಯಾ ತಿಳಿಸಿದೆ.

North Korean Fishermen Killed 16 Fellow Crew Members Fled To South

ಪ್ರಸಾದ ತಿಂದವನ ಕಥೆ ಅಷ್ಟೇ; ಎರಡು ತಿಂಗಳಿಗೊಂದು ಕೊಲೆ ಕಡ್ಡಾಯ! ಪ್ರಸಾದ ತಿಂದವನ ಕಥೆ ಅಷ್ಟೇ; ಎರಡು ತಿಂಗಳಿಗೊಂದು ಕೊಲೆ ಕಡ್ಡಾಯ!

ಮೀನುಗಾರಿಕೆಯ ದೋಣಿಯ ಮೂಲಕ ಗಡಿದಾಟಿ ಬಂದಿದ್ದ ಅವರನ್ನು ಎರಡು ದಿನಗಳ ಬಳಿಕ ದಕ್ಷಿಣ ಕೊರಿಯಾ ನೌಕಾಪಡೆ ವಶಕ್ಕೆ ಪಡೆದುಕೊಂಡಿತ್ತು. ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಕಾರಣ ತಮ್ಮ ದೋಣಿಯ ನಾಯಕನನ್ನು ಮತ್ತೊಬ್ಬನೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ಇಬ್ಬರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

22 ಇಂಚಿನ ರಂಧ್ರದ ಮೂಲಕ ಜೈಲಿನಿಂದ ಕೊಲೆ ಆರೋಪಿಗಳು ಎಸ್ಕೇಪ್22 ಇಂಚಿನ ರಂಧ್ರದ ಮೂಲಕ ಜೈಲಿನಿಂದ ಕೊಲೆ ಆರೋಪಿಗಳು ಎಸ್ಕೇಪ್

ಆ ಕೊಲೆಗೆ ವಿರೋಧ ವ್ಯಕ್ತಪಡಿಸಿದ ಒಬ್ಬೊಬ್ಬರನ್ನೇ ಬಳಿಕ ಕೊಲೆ ಮಾಡಿದ್ದರು. ಅವರ ದೇಹಗಳನ್ನು ಸಮುದ್ರಕ್ಕೆ ಎಸೆದಿದ್ದರು. ಮೂವರು ಕೊಲೆಗಾರರಲ್ಲಿ ಒಬ್ಬ ಆರಂಭದಲ್ಲಿಯೇ ಉತ್ತರ ಕೊರಿಯಾಕ್ಕೆ ಮರಳಿದ್ದರೆ, ಉಳಿದಿಬ್ಬರು ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಲು ನಿರ್ಧರಿಸಿದ್ದರು.

English summary
South Korea handed back two suspects to North Korea who killed their 16 colleagues before fleeing to South for aslyum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X