• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಸ್ಕ್‌ ಧರಿಸದಿದ್ರೆ ಉತ್ತರ ಕೊರಿಯಾದಲ್ಲಿ ಏನು ಶಿಕ್ಷೆ ಗೊತ್ತಾ?

|

ಫ್ಯೂಗ್ಯಾಂಗ್, ಜುಲೈ 23: ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕು ಹೆಚ್ಚುತ್ತಲೇ ಸಾಗಿದ್ದು, ಸೋಂಕು ಹರಡುವಿಕೆ ತಡೆಗಟ್ಟಲು ನಾನಾ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಹೀಗೆ ನಾನಾ ಕ್ರಮಗಳನ್ನು ಕಠಿಣವಾಗಿ ಜಾರಿಗೊಳಿಸಿದೆ.

ಅನೇಕ ರಾಷ್ಟ್ರಗಳು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದವರಿಗೆ ನಾನಾ ರೀತಿಯಲ್ಲಿ ದಂಡ, ಶಿಕ್ಷೆ ವಿಧಿಸುತ್ತಿದೆ. ಹಾಗಿದ್ದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾಸ್ಕ್‌ ಧರಿಸದವರಿಗೆ ಏನು ಶಿಕ್ಷೆ ವಿಧಿಸುತ್ತಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗದೇ ಇರದು.

ಮಾಸ್ಕ್‌ ಧರಿಸದಿದ್ದರೆ 1 ಲಕ್ಷ ರುಪಾಯಿ ದಂಡ, 2 ವರ್ಷ ಜೈಲು: ಜಾರ್ಖಂಡ್ ಸರ್ಕಾರ ಆದೇಶ

ಅಮೆರಿಕದ ಸುದ್ದಿ ತಾಣ ರೇಡಿಯೊ ಫ್ರೀ ಏಷ್ಯಾ (ಆರ್‌ಎಫ್‌ಎ) ಪ್ರಕಾರ ಉತ್ತರ ಕೊರಿಯನ್ನರು ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಈಗ ಮಾಸ್ಕ್‌ ಧರಿಸದವರು 3 ತಿಂಗಳು ಕಷ್ಟಪಟ್ಟು ದುಡಿಯಬೇಕಾಗುತ್ತದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರದ ಈ ಆದೇಶ ಜನರಲ್ಲಿ ಭೀತಿ ಹುಟ್ಟಿಸಿದೆ.

ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಉತ್ತರ ಕೊರಿಯಾ ಆಡಳಿತದಿಂದ ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಜನರ ಮೇಲೆ ನಿಗಾ ಇಡುತ್ತವೆ ಮತ್ತು ಮಾಸ್ಕ್ ಧರಿಸದೇ ಇರುವವರನ್ನು ಕಂಡರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಉತ್ತರ ಕೊರಿಯಾದಲ್ಲಿನ ಕೊರೊನಾವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲದಿದ್ದರೂ , ಈ ಕ್ರಮಗಳು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭಯಭೀತರಾಗಿರುವಂತೆ ಕಾಣುತ್ತಿವೆ.

English summary
North Koreans will reportedly be subjected to three months of hard labour for not wearing Covid-19 face masks under tough new rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X