ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3ನೇ ಮಹಾಯುದ್ಧಕ್ಕೆ ಸರ್ವಾಧಿಕಾರಿ ಆಹ್ವಾನ? ಮತ್ತೆ ಮಿಸೈಲ್ ಹಾರಿಸಿದ್ದೇಕೆ ಉ. ಕೊರಿಯಾ?

|
Google Oneindia Kannada News

'ಕಿಮ್ ಜಾಂಗ್ ಉನ್' ಬಹುಶಃ ಸದ್ಯದ ಮಟ್ಟಿಗೆ ಭೂಮಿ ಮೇಲೆ ಇಷ್ಟು ಚಿರಪರಿಚಿತ ಹೆಸರು ಮತ್ತೊಂದಿಲ್ಲ ಎನ್ನಬಹುದು. ಏಕೆಂದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ತನ್ನ ನ್ಯೂಕ್ಲಿಯರ್ ಬಾಂಬ್‌ಗಳಿಂದ ಈ ಜಗತ್ತಿನಲ್ಲಿ ಫೇಮಸ್ ಆದವನು. ಇದೇ ಸರ್ವಾಧಿಕಾರಿ ಇದೀಗ ಮತ್ತೊಂದು ಮಿಸೈಲ್ ಹಾರಿಸಿದ್ದಾನೆ. ಕ್ಷಿಪಣಿ ಚಿಕ್ಕದಾದರೂ ಕಿಮ್ ನೀಡಿರುವ ಸಂದೇಶ ದೊಡ್ಡದಿದೆ.

ಯಾವುದೇ ಸಮಯದಲ್ಲೂ ಯದ್ಧಕ್ಕೆ ಸಿದ್ಧ ಎಂಬಂತೆ ಮೆಸೇಜ್ ಕೊಟ್ಟಿದ್ದಾನೆ ಕ್ರೂರ ಸರ್ವಾಧಿಕಾರಿ. ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪ್ರಯೋಗ ಮಾಡಿದ ವಿಚಾರವನ್ನ ಅಮೆರಿಕ ಅಧ್ಯಕ್ಷ ಬೈಡನ್ ಅವರ ಹಿರಿಯ ಅಧಿಕಾರಿಗಳು ಹಾಗೂ ದಕ್ಷಿಣ ಕೊರಿಯಾ ಸ್ಪಷ್ಟವಾಗಿ ತಿಳಿಸಿದೆ.

ಅದರಲ್ಲೂ ಕಿಮ್ ತಂಗಿ ಅಮೆರಿಕ ಮಿಲಿಟರಿಗೆ ವಾರ್ನಿಂಗ್ ಕೊಟ್ಟ ಕೆಲವೇ ದಿನಗಳಲ್ಲಿ ಈ ಮಿಸೈಲ್ ಟೆಸ್ಟ್ ನಡೆಸಿದೆ ಉತ್ತರ ಕೊರಿಯಾ. ಅಷ್ಟಕ್ಕೂ ದಕ್ಷಿಣ ಕೊರಿಯಾ ಜೊತೆಗೆ ಅಮೆರಿಕ ಜಂಟಿಯಾಗಿ ಮಿಲಿಟರಿ ಡ್ರಿಲ್ ನಡೆಸಿದ ಬಳಿಕ ಕಿಮ್ ತಂಗಿ ರೊಚ್ಚಿಗೆದ್ದು ವಾರ್ನಿಂಗ್ ಕೊಟ್ಟ ವಿಷಯ ಸಂಚಲನ ಸೃಷ್ಟಿಸಿತ್ತು. ಎಚ್ಚರಿಕೆ ನೀಡಿ ಕೆಲವೇ ದಿನಗಳಲ್ಲಿ ಉತ್ತರ ಕೊರಿಯಾ ನೇರಾನೇರ ಮಿಸೈಲ್ ಟೆಸ್ಟ್ ಮಾಡಿಬಿಟ್ಟಿದೆ.

 3ನೇ ಮಹಾಯುದ್ಧಕ್ಕೆ ತಯಾರಿ..?

3ನೇ ಮಹಾಯುದ್ಧಕ್ಕೆ ತಯಾರಿ..?

ಕಿಮ್ ಜಾಂಗ್ ಉನ್ ಎಷ್ಟು ರಾಕ್ಷಸ ಪ್ರವೃತ್ತಿ ಪ್ರದರ್ಶನ ಮಾಡುತ್ತಿದ್ದಾನೋ, ಅಷ್ಟೇ ತಿಕ್ಕಲು ಸ್ವಭಾವದ ವ್ಯಕ್ತಿ ಎನ್ನಬಹುದು. ಏಕೆಂದರೆ ಕೆಲವು ತಿಂಗಳ ಹಿಂದೆ 'ಈ ಜಗತ್ತಿನಲ್ಲಿ ಇನ್ನು ಮುಂದೆ ಯುದ್ಧಗಳು ನಡೆಯುವುದಿಲ್ಲ' ಎಂದು ಹೇಳಿಕೆ ಕೊಟ್ಟವನು ಇದೀಗ ಮಿಸೈಲ್‌ಗಳ ಹಿಂದೆ ಬಿದ್ದಿದ್ದಾನೆ. ಅದರಲ್ಲೂ ಜೋ ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದ ವಿರುದ್ಧ ಕಿಮ್ ಕಿಡಿಕಾರುವುದು ಹೆಚ್ಚಾಗುತ್ತಲೇ ಇದೆ. ಬೈಡನ್ ಅಧಿಕಾರ ಸ್ವೀಕಾರಕ್ಕೆ ಇನ್ನೂ ಒಂದು ವಾರ ಬಾಕಿ ಇದ್ದಂತೆ ಮಿಸೈಲ್ ಪರೇಡ್ ನಡೆಸಿ ಸಂಚಲನ ಸೃಷ್ಟಿಸಿದ್ದ. ಇದೀಗ ಕಿಮ್‌ನ ತಂಗಿ ಅಮೆರಿಕ ಸೇನೆಗೆ ವಾರ್ನಿಂಗ್ ಕೊಟ್ಟು 1 ವಾರದೊಳಗೆ ಕ್ಷಿಪಣಿ ಪ್ರಯೋಗ ನಡೆಸಿದೆ ಉತ್ತರ ಕೊರಿಯಾ.

4 ವರ್ಷ ಚೆನ್ನಾಗಿ ನಿದ್ದೆ ಮಾಡಬೇಕು ಅಂತಿದ್ರೆ... ಬೈಡನ್‌ಗೆ ಕಿಮ್ ಜಾಂಗ್ ಸಹೋದರಿಯ ಎಚ್ಚರಿಕೆ4 ವರ್ಷ ಚೆನ್ನಾಗಿ ನಿದ್ದೆ ಮಾಡಬೇಕು ಅಂತಿದ್ರೆ... ಬೈಡನ್‌ಗೆ ಕಿಮ್ ಜಾಂಗ್ ಸಹೋದರಿಯ ಎಚ್ಚರಿಕೆ

ಬಾಂಬ್ ಪರೇಡ್‌ಗೆ ಸರ್ವಾಧಿಕಾರಿ ಸಾಕ್ಷಿ

ಬಾಂಬ್ ಪರೇಡ್‌ಗೆ ಸರ್ವಾಧಿಕಾರಿ ಸಾಕ್ಷಿ

ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್‌ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್‌ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್‌ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

ಕಿಮ್ ಬಗ್ಗೆ ಬೈಡನ್ ಬೈದಿದ್ದರು..!

ಕಿಮ್ ಬಗ್ಗೆ ಬೈಡನ್ ಬೈದಿದ್ದರು..!

ಒಂದ್ಕಡೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಕಿಮ್ ಜೊತೆ ಮಾತುಕತೆಗೆ ಮುಂದಾಗಿದ್ದಾಗ ಜೋ ಬೈಡನ್ ಅದನ್ನ ಟೀಕಿಸಿದ್ದರು. ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಬೈಡನ್ ಇದನ್ನ ಖಂಡಿಸಿದ್ದರು. ಕಿಮ್ ಜಾಂಗ್ ಉನ್ ರಾಕ್ಷಸನಂತೆ, ಕೊಲೆಗಡುಕ. ಆತನ ಜೊತೆಗೆ ಶಾಂತಿ ಮಾತುಕತೆ ಅವಶ್ಯಕತೆ ಏನಿತ್ತು? ಎಂದು ಬೈಡನ್ ಪ್ರಶ್ನಿಸಿದ್ದರು. ಆದರೆ ಬೈಡನ್ ಹೇಳಿದ್ದ ಈ ಮಾತುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಕಿಮ್ ಜಾಂಗ್ ಉನ್, ಬೈಡನ್ ಗೆಲುವು ಪಕ್ಕಾ ಆಗುತ್ತಿದ್ದಂತೆ ಅಮೆರಿಕ ಹಾಗೂ ಬೈಡನ್‌ಗೆ ವಾರ್ನಿಂಗ್ ಕೊಟ್ಟಿದ್ದ. ಇದೇ ಸೇಡನ್ನು ಈಗಲೂ ಮುಂದುವರಿಸಿಕೊಂಡು ಬರುತ್ತಿದ್ದಾನೆ ಈ ಸರ್ವಾಧಿಕಾರಿ.

ಬೈಡನ್‌ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!ಬೈಡನ್‌ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!

ಅಮೆರಿಕದ ಕ್ಷಿಪಣಿ ಕೇಂದ್ರ ಟಾರ್ಗೆಟ್..?

ಅಮೆರಿಕದ ಕ್ಷಿಪಣಿ ಕೇಂದ್ರ ಟಾರ್ಗೆಟ್..?

ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್‌ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ

ಕಿಮ್ ಒಬ್ಬ ಕಿರಾತಕ. ಆತ ಬರೀ ಮಿಸೈಲ್, ಮಿಲಿಟರಿ ಸಾಧನಗಳನ್ನಷ್ಟೇ ಪ್ರದರ್ಶನಕ್ಕೆ ಇಡೋನಲ್ಲ. ಈತ ಈ ಹಿಂದೆ ತನ್ನ ಚಿಕ್ಕಪ್ಪನ ತಲೆಯನ್ನೇ ಕತ್ತರಿಸಿ, ಉತ್ತರ ಕೊರಿಯಾ ಅಧಿಕಾರಿಗಳ ಮುಂದೆ ಪ್ರದರ್ಶನಕ್ಕಿಟ್ಟಿದ್ದ. ಅಲ್ಲದೆ ಉತ್ತರ ಕೊರಿಯಾದಲ್ಲಿ ಕೊರೊನಾ ಕಂಟ್ರೋಲ್‌ಗೆ ತರಲು ಕಿಮ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಜೊತೆಗೆ ಜಗತ್ತಿನ ಬಲಾಢ್ಯ ರಾಷ್ಟ್ರಗಳನ್ನು ಕಾಡುತ್ತಿದ್ದಾನೆ. ಅಕಸ್ಮಾತ್ ಕಿಮ್ ಹೀಗೆ ವರ್ತಿಸುತ್ತಿರುವುದಕ್ಕೆ ಅಮೆರಿಕದಿಂದ ಪ್ರತಿಕ್ರಿಯೆ ಬಂದರೆ ಇಲ್ಲವೇ ಮರುದಾಳಿ ನಡೆಸಿದರೆ 3ನೇ ಮಹಾಯುದ್ಧ ಫಿಕ್ಸ್ ಆದಂತೆ.

English summary
North Korea tests short-range missiles days after Kim Jong-un's sister warned US military.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X