ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕವನ್ನು ನಾಶ ಮಾಡಬಲ್ಲ ಕ್ಷಿಪಣಿಯ ಪ್ರಯೋಗ ನಡೆಸಿದ ಉ.ಕೊರಿಯಾ

By Manjunatha
|
Google Oneindia Kannada News

ಉ.ಕೊರಿಯಾ, ನವೆಂಬರ್ 29: ಅಮೆರಿಕಾ ವಿರುದ್ಧ ಟೊಂಕಕಟ್ಟಿ ನಿಂತಿರುವ ಉತ್ತರ ಕೊರಿಯಾ ಮೇಲಿಂದ ಮೇಲೆ ಕ್ಷಿಪಣಿ ಪ್ರಯೋಗಗಳನ್ನು ನಡೆಸುತ್ತಲೆ ಇದೆ. ಕ್ಷಿಪಣಿ ಪ್ರಯೋಗಗಳ ಮೂಲಕ ಅಮೆರಿಕಕ್ಕೆ ಯದ್ದಾಹ್ವಾನವನ್ನು ನೀಡುತ್ತಲೆ ಇದೆ.

ಅಮೆರಿಕವನ್ನು ಗುರಿಯಾಗಿಟ್ಟುಕೊಂಡೆ ಕ್ಷಿಪಣಿಗಳನ್ನು ತಯಾರಿಸುತ್ತಿರುವ ಉ.ಕೊರಿಯಾ ಇದೀಗ ಹ್ವಾಸಾಂಗ್-15 ಖಂಡಾತರ ಕ್ಷಿಪಣಿಯನ್ನು ತಯಾರಿಸಿದ್ದು ಇದು ಸುಲಭವಾಗಿ ಅಮೆರಿಕವನ್ನು ತಲುಪಿ ಸ್ಪೋಟಗೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಉ.ಕೊರಿಯಾ ಹೇಳಿಕೊಂಡಿದೆ.

'ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಲಿದೆ''ಯಾವುದೇ ಕ್ಷಣದಲ್ಲಿ ಪರಮಾಣು ಯುದ್ಧ ಸಂಭವಿಸಲಿದೆ'

ಉ.ಕೊರಿಯಾ ಪರೀಕ್ಷೆ ನಡೆಸಿದ ಕ್ಷಿಪಣಿಯು ಜಪಾನ್ ನ ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿನ ಸಮುದ್ರದಲ್ಲಿ ಬಿದ್ದಿದೆ ಎಂದು ಜಪಾನ್ ನ ರಕ್ಷಣಾ ಸಚಿವಾಲಯ ಧೃಡಪಡಿಸಿರುವುದರಿಂದ, ಉ.ಕೊರಿಯಾದ ಕ್ಷಿಪಣಿ ಪರೀಕ್ಷೆ ಹೇಳಿಕೆಯನ್ನು ನಂಬಬಹುದಾಗಿದೆ.

North Korea tests its powerful missile, it can easily destroy America

ಉ.ಕೊರಿಯಾವು ಬುಧವಾರ (ನವೆಂಬರ್ 29) ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಇದು ಅಣ್ವಸ್ತ್ರ ರಾಷ್ಟ್ರ ಅಮೆರಿಕದ ಭೂಭಾಗವವನ್ನೂ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ದೇಶ ಗುರಿ ಸಾಧನೆ ಮಾಡಿದೆ ಎಂದು ಉ.ಕೊರಿಯಾ ಮಿಲಿಟರಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಈ ಕ್ಷಿಪಣಿಯು ಅಮೆರಿಕದ ವಾಷಿಂಗ್‌ಟನ್, ಅಮರಿಕಾದ ಸಮುದ್ರ ನೆಲೆಯನ್ನು ಪೂರ್ಣವಾಗಿ ಧ್ವಂಸಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ. ಪ್ರಯೋಗ ಸಮಯದಲ್ಲಿ ಕ್ಷಿಪಣಿಯು 4475 ಕಿ.ಮೀ ಎತ್ತರ ಹಾಗೂ 970 ಕಿ.ಮೀ ದೂರ ಕ್ರಮಿಸಿ ನಿಗದಿತ ಗುರಿಯನ್ನು ಸರಿಯಾಗಿ ತಲುಪಿದೆ ಎಂದು ಮಿಲಿಟರಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ನಿಮ್ಮ ವಿಮಾನ ಹೊಡೆದುರುಳಿಸುತ್ತೇವೆ, ಅಮೆರಿಕಾಕ್ಕೆ ಕೊರಿಯಾ ಎಚ್ಚರಿಕೆ!ನಿಮ್ಮ ವಿಮಾನ ಹೊಡೆದುರುಳಿಸುತ್ತೇವೆ, ಅಮೆರಿಕಾಕ್ಕೆ ಕೊರಿಯಾ ಎಚ್ಚರಿಕೆ!

ಈಗ ಪರೀಕ್ಷೆ ನಡೆಸಿರುವ ಹ್ವಾಂಸಾಂಗ್‌-15 ಖಂಡಾಂತರ ಕ್ಷಿಪಣಿಯು ಉತ್ತರ ಕೋರಿಯಾದ ಬಳಿ ಇರವ ಕ್ಷಿಪಣಿಗಳಲ್ಲೇ ಅತ್ಯಂತ ಪ್ರಬಲ ಹಾಗೂ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಅತಿ ದೂರ ಕ್ರಮಿಸಬಲ್ಲ ಸಾಮರ್ಥ್ಯದ ದೂರಗಾಮಿ ಕ್ಷಿಪಣಿ ಎನ್ನಲಾಗಿದೆ.

ಉತ್ತರ ಕೋರಿಯಾ ಈ ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, 'ನಾವು ಅದನ್ನು ನೋಡಿಕೊಳ್ಳುತ್ತೇವೆ' ಎನ್ನುವ ಮೂಲಕ, ಅಮೆರಿಕ ಎಲ್ಲ ರೀತಿಯ ದಾಳಿಗಳಿಗೂ ತಯಾರಿದೆ ಎಂಬ ಸಂದೇಶ ನೀಡಿದ್ದಾರೆ.

English summary
After 2.5 months of relative peace, North Korea launched its most powerful weapon yet early Wednesday, claiming a new type of intercontinental ballistic missile that some observers believe could put Washington and the entire eastern U.S. seaboard within range.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X