ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ದೃಢಪಡಿಸಿದ ಜಪಾನ್

|
Google Oneindia Kannada News

ಸಿಯೋಲ್, ಅಕ್ಟೋಬರ್ 19: ಉತ್ತರ ಕೊರಿಯಾ ತನ್ನ ಪೂರ್ವ ಕರಾವಳಿಯಲ್ಲಿ ಕನಿಷ್ಠ ಒಂದು ಖಂಡಾಂತರ ಕ್ಷಿಪಣಿಯನ್ನು ಹಾರಿಸಿ ಪ್ರಯೋಗ ನಡೆಸಿದೆ ಎಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ಮಂಗಳವಾರ ದೃಢಪಡಿಸಿವೆ.

ಇತ್ತೀಚಿನ ವಾರಗಳಲ್ಲಿ ನಡೆದ ಶಸ್ತ್ರಾಸ್ತ್ರ ಪರೀಕ್ಷೆಗಳ ಸರಣಿಯಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ ಇದೆ ಮೊದಲ ಬಾರಿಗೆ ಆಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಿನ್ಪೋದಿಂದ ಉಡಾಯಿಸಲಾಯಿತು ಎಂದು ಸಿಯೋಲ್‌ನ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.

"ನಮ್ಮ ಸೇನೆಯು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಸಂಭಾವ್ಯ ಹೆಚ್ಚುವರಿ ಉಡಾವಣೆಗೆ ತಯಾರಿ ಮಾಡಲು ಯುನೈಟೆಡ್ ಸ್ಟೇಟ್ಸ್ ನ ನಿಕಟ ಸಹಕಾರದೊಂದಿಗೆ ಸನ್ನದ್ಧತೆವಾಗಿದೆ, ಇನ್ನಷ್ಟು ಉಡಾವಣೆ ನಿರೀಕ್ಷೆ ಇದೆ " ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಜಪಾನಿನ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿದಾ ಎರಡು ಖಂಡಾಂತರಿ ಕ್ಷಿಪಣಿಗಳನ್ನು ಹಾರಿಸಲಾಗಿದೆ, ಉತ್ತರ ಕೊರಿಯಾದ ಇತ್ತೀಚಿನ ಕ್ಷಿಪಣಿ ಪರೀಕ್ಷೆಗಳನ್ನು "ಅತ್ಯಂತ ವಿಷಾದನೀಯ" ಎಂದಿದ್ದಾರೆ.

ಇತ್ತೀಚಿನ ಕ್ಷಿಪಣಿ ಪರೀಕ್ಷೆ ಎಷ್ಟು ಮಹತ್ವದ್ದಾಗಿದೆ?
ಸಿನ್ಪೋ, ಪ್ರಮುಖ ನೌಕಾ ಹಡಗುಕಟ್ಟೆ, ಉತ್ತರದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ಇರಿಸಲಾಗುತ್ತದೆ ಮತ್ತು ಉಪಗ್ರಹ ಛಾಯಾಚಿತ್ರಗಳ ಪ್ರಕಾರ ಜಲಾಂತರ್ಗಾಮಿ-ಉಡಾವಣೆ ಮಾಡಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (ಎಸ್‌ಎಲ್‌ಬಿಎಂಎಸ್) ಪರೀಕ್ಷಿಸುವ ಸಾಧನವಾಗಿದೆ.

ಇತ್ತೀಚಿನ ಪರೀಕ್ಷೆಯ ಸರಣಿಯ ಭಾಗವಾಗಿ ಈ ಉಡಾವಣೆಯು ಸಂಭವಿಸಿದೆ. ಕ್ಷಿಪಣಿಯಲ್ಲಿ ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿ, ರೈಲು ಉಡಾಯಿಸುವ ಆಯುಧ, ಮತ್ತು ಹೈಪರ್ಸಾನಿಕ್ ಸಿಡಿತಲೆ ಇದೆ ಎಂದು ಉತ್ತರ ಕೊರಿಯಾ ಹೇಳಿದೆ.

Japan said its initial analysis suggested that North Korea fired two ballistic missiles

ಪ್ರಾದೇಶಿಕ ಶಸ್ತ್ರಾಸ್ತ್ರ ಸ್ಪರ್ಧೆಯು ನಡೆಯುತ್ತಿದೆ, ಕಳೆದ ತಿಂಗಳು ದಕ್ಷಿಣವು ತನ್ನ ಮೊದಲ ಎಸ್‌ಎಲ್‌ಬಿಎಮ್ ಅನ್ನು ಪರೀಕ್ಷಿಸುತ್ತಿತ್ತು, ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಸಾಬೀತಾಗಿರುವ ತಂತ್ರಜ್ಞಾನವನ್ನು ಪ್ರದರ್ಶಿಸಿದೆ.

ಗುಪ್ತಚರ ಮುಖ್ಯಸ್ಥರು ಮಾತುಕತೆ ನಡೆಸಲಿದ್ದಾರೆ
ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾದ ಅವ್ರಿಲ್ ಹೈನ್ಸ್ ಅವರು ಮಂಗಳವಾರ ಸಿಯೋಲ್‌ಗೆ ಆಗಮಿಸಿದ್ದಾರೆ. ದಕ್ಷಿಣ ಕೊರಿಯಾದ ಮತ್ತು ಜಪಾನೀಸ್ ಅಧಿಕಾರಿಗಳೊಂದಿಗೆ ಮೂರು ದಿಕ್ಕಿನ ಸಭೆಯನ್ನು ನಡೆಸಲಿದ್ದು, ಶಸ್ತ್ರಾಸ್ತ್ರ ಪರೀಕ್ಷೆ ಮುಖ್ಯ ವಿಷಯವಾಗಲಿದೆ.

ವರದಿಗಳ ಪ್ರಕಾರ ಗುಪ್ತಚರ ಮುಖ್ಯಸ್ಥರು ಇತರ ಸಮಸ್ಯೆಗಳ ನಡುವೆ ಉತ್ತರ ಕೊರಿಯಾದೊಂದಿಗಿನ ನಿಲುವನ್ನು ಚರ್ಚಿಸಲು ನಿರ್ಧರಿಸಲಾಗುತ್ತದೆ.

ಉತ್ತರ ಕೊರಿಯಾದಲ್ಲಿ ಅಮೆರಿಕದ ವಿಶೇಷ ಪ್ರತಿನಿಧಿ ಸಂಗ್ ಕಿಮ್ ಮಾತುಕತೆಗೆ ವಾಷಿಂಗ್ಟನ್ ಸದಾ ಸಿದ್ಧ ಎಂದು ಪುನರುಚ್ಚರಿಸಿದ್ದಾರೆ. ಇದಾದ ಬಳಿಕವೇ ಗುಪ್ತಚರ ಮುಖ್ಯಸ್ಥ ಸಭೆ ಏರ್ಪಟ್ಟಿದೆ.

"ನಾವು (ಉತ್ತರ ಕೊರಿಯಾ) ಕಡೆಗೆ ಯಾವುದೇ ಪ್ರತಿಕೂಲ ಉದ್ದೇಶವನ್ನು ಹೊಂದಿಲ್ಲ ಮತ್ತು ಯಾವುದೇ ಷರತ್ತುಗಳಿಲ್ಲದೆ ಅವರನ್ನು ಭೇಟಿ ಮಾಡಲು ನಾವು ಆಶಿಸುತ್ತೇವೆ" ಎಂದು ಅವರು ವಾಷಿಂಗ್ಟನ್‌ನಲ್ಲಿ ಅವರ ದಕ್ಷಿಣ ಕೊರಿಯಾದ ಸಹವರ್ತಿ ಜೊತೆ ಮಾತುಕತೆ ನಡೆಸಿದ ನಂತರ ಹೇಳಿದರು.

ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ನಮಗೆ ಈ ರಾಷ್ಟ್ರಗಳಿಂದಲೇ ದೊಡ್ಡ ಬೆದರಿಕೆ ಇದೆ. ಹೀಗಾಗಿ ನಮ್ಮ ರಕ್ಷಣೆಗೆ ಅಗತ್ಯ ಇರುವ ಶಸ್ತ್ರಾಸ್ತ್ರ ತಯಾರಿಸಿಕೊಳ್ಳುವ ಹಕ್ಕು ನಮಗಿದೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಗುಡುಗಿದ್ದ.

ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್‌ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್‌ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್‌ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

ಉತ್ತರ ಕೊರಿಯಾದ ಸೇನೆಯು ದೂರಗಾಮಿ ಕ್ರೂಸ್​ ಕ್ಷಿಪಣಿಗಳನ್ನು ಪರೀಕ್ಷಿಸಿದ್ದು, ಜಗತ್ತಿಗೆ ಸಡ್ಡುಹೊಡೆದಿದೆ. ಈ ದೂರಗಾಮಿ ಕ್ರೂಸ್​ ಕ್ಷಿಪಣಿಗಳು 1,500 ಕಿಮೀ ದೂರದ (932 miles) ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು ಎಂದು ಕೊರಿಯಾದ ವಾರ್ತಾ ಸಂಸ್ಥೆಗಳು ವರದಿ ಮಾಡಿದ್ದವು. ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾ ಕ್ಷಿಪಣಿಯೊಂದನ್ನು ಉಡಾಯಿಸಿದೆ. ಆದರೆ ಅದು ಯಾವ ಮಾದರಿಯ ಕ್ಷಿಪಣಿಯೆಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾದ ಸೇನೆ ಹೇಳಿತ್ತು. ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿತ್ತು. ಕ್ಷಿಪಣಿಯು 2 ಗಂಟೆಯಲ್ಲಿ ಸುಮಾರು 1,500 ಕಿ.ಮೀ. ಕ್ರಮಿಸಿದೆ. ಉತ್ತರ ಕೊರಿಯಾದ ಪ್ರಾದೇಶಿಕ ಸಾಗರದ ಮೇಲೆ ಸಂಚರಿಸಿದ ಕ್ಷಿಪಣಿಯು ಗುರಿಯನ್ನು ತಲುಪಿದೆ ಎಂದು ಏಜೆನ್ಸಿ ವರದಿ ಮಾಡಿತ್ತು. (AFP, Reuters)

English summary
The military in South Korea has confirmed the projectile was a submarine-launched ballistic missile. It comes as intelligence chiefs from the US, South Korea and Japan meet in Seoul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X