ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಸ್ತ್ರಾಸ್ತ್ರ ಪರೀಕ್ಷಿಸುವ ಹಕ್ಕು ನಮಗಿದೆ ಎಂದ ಉತ್ತರ ಕೊರಿಯಾ

|
Google Oneindia Kannada News

ಶಸ್ತ್ರಾಸ್ತ್ರ ಪರೀಕ್ಷಿಸುವ ಹಕ್ಕು ನಮಗಿದೆ ಎಂದು ಉತ್ತರ ಕೊರಿಯಾವು ವಿಶ್ವಸಂಸ್ಥೆ ಮುಂದೆ ಹೇಳಿದೆ.
ಪೂರ್ವ ಸಮುದ್ರದತ್ತ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ. ಆದರೆ ಕ್ಷಿಪಣಿಯು ಯಾವ ಮಾದರಿಯದ್ದು, ಸಾಮರ್ಥ್ಯವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ದಕ್ಷಿಣ ಕೊರಿಯಾ ಸೇನೆ ತಿಳಿಸಿತ್ತು.

ಇನ್ನು ಶಸ್ತ್ರಾಸ್ತ್ರ ಪರೀಕ್ಷಿಸುವ ಹಕ್ಕನ್ನು ಇದನ್ನೂ ಯಾರೂ ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಗುರುತಿಸಲಾಗದ ಕ್ಷಿಪಣಿಯೊಂದರ ಪರೀಕ್ಷೆಯನ್ನು ಉತ್ತರ ಕೊರಿಯಾ ನಡೆಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು, ಶಾಂತಿ ನೆಲೆಗೊಳಿಸಲು ಹಾಗೂ ರಾಷ್ಟ್ರಕ್ಕೆ ಭದ್ರತೆ ಒದಗಿಸಲು ಈಗಷ್ಟೇ ರಕ್ಷಣಾ ಪಡೆಯನ್ನು ಈಗಷ್ಟೇ ಕಟ್ಟುತ್ತಿದ್ದೇವೆ ಎಂದು ತಿಳಿಸಿದೆ.

ಕಿಮ್ ಜಾಂಗ್ ಆರೋಗ್ಯದ ಬಗ್ಗೆ ಅನುಮಾನ ಹುಟ್ಟಿಸಿದ ತಲೆಯಲ್ಲಿರುವ ಪಟ್ಟಿಕಿಮ್ ಜಾಂಗ್ ಆರೋಗ್ಯದ ಬಗ್ಗೆ ಅನುಮಾನ ಹುಟ್ಟಿಸಿದ ತಲೆಯಲ್ಲಿರುವ ಪಟ್ಟಿ

ಅಮೆರಿಕಾ ಜೊತೆಗಿನ ಶೀತಲಸಮರದ ನಡುವೆಯೇ ಉತ್ತರ ಕೊರಿಯಾ ದೂರಗಾಮಿ ಕ್ರೂಸ್​ ಕ್ಷಿಪಣಿಗಳನ್ನು ಪ್ರಯೋಗಾರ್ಥವಾಗಿ ಉಡಾಯಿಸಿದೆ.

North Korea Tells UN It Has Right To Test Weapons

ಅಮೆರಿಕಾ ಜೊತೆಗೆ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಉತ್ತರ ಕೊರಿಯಾದ ಸೇನಾ ಬತ್ತಳಿಕೆಯಲ್ಲಿ ತುಂಬಿಸುತ್ತಾ ಬಂದಿರುವ ಸರ್ವಾಧಿಕಾರಿ ಕಿಮ್​ ಜಾಂಗ್ ಉನ್ ಇತ್ತೀಚೆಗೆ ಸೇನಾ ಚಟುವಟಿಕೆ ವಿಷಯದಲ್ಲಿ ಸ್ವಲ್ಪಮಟ್ಟಿಗೆ ಸೈಲೆಂಟ್​ ಮೋಡ್​ಗೆ ಹೋಗಿದ್ದರು. ಇದಕ್ಕೆ ಅವರ ಆರೋಗ್ಯವೂ ಕಾರಣವಾಗಿತ್ತು ಎನ್ನಲಾಗಿದೆ.

ಆದರೆ ಈಗ ದಿಢೀರನೆ ಪುಟಿದೆದ್ದಿರುವ ಉತ್ತರ ಕೊರಿಯಾದ ಸೇನೆಯು ದೂರಗಾಮಿ ಕ್ರೂಸ್​ ಕ್ಷಿಪಣಿಗಳನ್ನು ಪರೀಕ್ಷಿಸಿದ್ದು, ಜಗತ್ತಿಗೆ ಸಡ್ಡುಹೊಡೆದಿದೆ. ಈ ದೂರಗಾಮಿ ಕ್ರೂಸ್​ ಕ್ಷಿಪಣಿಗಳು 1,500 ಕಿಮೀ ದೂರದ (932 miles) ಶತ್ರು ನೆಲೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಬಲ್ಲದು ಎಂದು ಕೊರಿಯಾದ ವಾರ್ತಾ ಸಂಸ್ಥೆಗಳು ವರದಿ ಮಾಡಿವೆ.

ಅಣ್ವಸ್ತ್ರ ಹೊಂದಿರುವ ಉತ್ತರ ಕೊರಿಯಾ ಕ್ಷಿಪಣಿಯೊಂದನ್ನು ಉಡಾಯಿಸಿದೆ. ಆದರೆ ಅದು ಯಾವ ಮಾದರಿಯ ಕ್ಷಿಪಣಿಯೆಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ದಕ್ಷಿಣ ಕೊರಿಯಾದ ಸೇನೆ ಹೇಳಿತ್ತು.

ಪ್ಯಾಂಗಾಂಗ್‌ನಲ್ಲಿ ಒಂದು ದಿನದ ಹಿಂದಷ್ಟೇ ದೂರಗಾಮಿ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿತ್ತು ಎಂಬ ಮಾಹಿತಿಯನ್ನು ದ.ಕೊರಿಯಾ ಸೇನೆ ಹೇಳಿದೆ.

'ಗುರುತಿಸಲಾಗದ ಕ್ಷಿಪಣಿಯನ್ನು ಈಸ್ಟ್ ಸೀ(ಜಪಾನ್‌ ಸಾಗರ) ಕಡೆಗೆ ಉಡಾವಣೆ ಮಾಡಿದೆ' ಎಂದು ಸೋಲ್‌ನ ಸೇನಾ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎಫ್‌ಪಿ ವರದಿ ಮಾಡಿತ್ತು.

ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಕ್ಷಿಪಣಿಯು ಯಾವ ಮಾದರಿಯದ್ದು, ಎಷ್ಟು ದೂರ ಕ್ರಮಿಸಬಲ್ಲದು ಮತ್ತು ಒಂದಕ್ಕಿಂತ ಹೆಚ್ಚು ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಕಲೆ ಹಾಕಬೇಕಿದೆ ಎಂದು ಹೇಳಿತ್ತು.

ಉ.ಕೊರಿಯಾದ 'ಅಕಾಡೆಮಿ ಆಫ್‌ ನ್ಯಾಷನಲ್‌ ಡಿಫೆನ್ಸ್‌ ಸೈನ್‌' ಪ್ಯಾಂಗಾಂಗ್‌ನಲ್ಲಿ ನಡೆಸಿದ ಯಶಸ್ವಿ ದೂರಗಾಮಿ ಕ್ರೂಸ್‌ ಕ್ಷಿಪಣಿ ಪರೀಕ್ಷೆಯನ್ನು 'ಆಯಕಟ್ಟಿನ ತಂತ್ರಕುಶಲತೆ ಹೊಂದಿರುವ ಮಹತ್ವದ ಅಸ್ತ್ರ' ಎಂದು ಅಲ್ಲಿನ ಅಧಿಕೃತ ಮಾಧ್ಯಮ ಕೊರಿಯನ್‌ ಸೆಂಟ್ರಲ್‌ ನ್ಯೂಸ್‌ ಏಜೆನ್ಸಿ ಹೇಳಿತ್ತು.

ಕ್ಷಿಪಣಿಯು 2 ಗಂಟೆಯಲ್ಲಿ ಸುಮಾರು 1,500 ಕಿ.ಮೀ. ಕ್ರಮಿಸಿದೆ. ಉತ್ತರ ಕೊರಿಯಾದ ಪ್ರಾದೇಶಿಕ ಸಾಗರದ ಮೇಲೆ ಸಂಚರಿಸಿದ ಕ್ಷಿಪಣಿಯು ಗುರಿಯನ್ನು ತಲುಪಿದೆ ಎಂದು ಏಜೆನ್ಸಿ ವರದಿ ಮಾಡಿತ್ತು.

English summary
North Korea's ambassador told the UN General Assembly on Monday that "nobody can deny" the nuclear-armed country the right to test weapons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X