ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣುಪರೀಕ್ಷೆಗೆ ತಿಲಾಂಜಲಿ ಹಾಡಿದ ಉತ್ತರ ಕೊರಿಯಾ: ಟ್ರಂಪ್ ಶ್ಲಾಘನೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 21: ಅಣು ಪರೀಕ್ಷೆಯನ್ನು ನಿಲ್ಲಿಸುವ ಉತ್ತರ ಕೊರಿಯಾದ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಕ್ತ ಮನದಿಂದ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಟ್ರಂಪ್ "ನ್ಯೂಕ್ಲಿಯರ್ ಪರೀಕ್ಷೆಯನ್ನು ನಿಲ್ಲಿಸಲು ಉತ್ತರ ಕೋರಿಯ ಒಪ್ಪಿಕೊಂದಿರುವುದು ನಿಜಕ್ಕೂ ಸಂತಸದ ಸುದ್ದಿ. ಇದು ಪ್ರಗತಿಯ ಸಂಕೇತ" ಎಂದಿದ್ದಾರೆ.

ಕಿಮ್ ಜಾಂಗ್ ಮೇಲೆ ಟ್ರಂಪ್ ತಿರುಗೇಟಿನ ನ್ಯೂಕ್ಲಿಯರ್ ಬಾಂಬ್! ಕಿಮ್ ಜಾಂಗ್ ಮೇಲೆ ಟ್ರಂಪ್ ತಿರುಗೇಟಿನ ನ್ಯೂಕ್ಲಿಯರ್ ಬಾಂಬ್!

ಉತ್ತರ ಕೋರಿಯಾದ ವರ್ಕರ್ಸ್ ಪಾರ್ಟಿ ಆಫ್ ಕೋರಿಯಾ ಪೂರ್ಣ ಕೇಂದ್ರ ಸಮಿತಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

North Korea suspending nuclear tests is big progress: Trump

ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಭೇಟಿಯಾಗಲಿದ್ದು, ಭೇಟಿಗೂ ಮುನ್ನ ಉನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಏಪ್ರಿಲ್ 21 ರ ನಂತರ ಉತ್ತರ ಕೊರಿಯಾ ಎಲ್ಲಾ ಅಣುಪರೀಕ್ಷೆಯನ್ನೂ ನಿಲ್ಲಿಸಲಿದೆ ಎಂದು ಅಧಿಕೃತ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ.

ತನ್ನ ಬಳ ವಿಶ್ವವನ್ನೇ ನಾಶ ಮಾಡುವಂಥ ನ್ಯೂಕ್ಲಿಯರ್ ಬಾಂಬ್ ಇದೆ, ಹೈಡ್ರೋಜನ್ ಬಾಂಬ್ ಇದೆ ಎಂದು ಹೇಳುತ್ತಲೇ ಉತ್ತರ ಕೊರಿಯಾ ಇಡೀ ಜಗತ್ತನ್ನೂ ಆತಂಕದಲ್ಲಿ ದೂಡುತ್ತ ಬಂದಿತ್ತು. ಆದರೆ ಇದೀಗ ಅಣುಪರೀಕ್ಷೆಗಳನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿರುವ ಉತ್ತರ ಕೋರಿಯಾ ನಡೆಯನ್ನು ಜಗತ್ತಿನ ಇತರ ರಾಷ್ಟ್ರಗಳು ಸ್ವಾಗತಿಸಿವೆ.

English summary
United States President Donald Trump on Saturday welcomed the move by North Korea to suspend its nuclear and missile tests and shut down a nuclear test site, calling it a 'big progress' for the country and the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X