ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಪ್ಟೋಕರೆನ್ಸಿ ಕದ್ದ ಉತ್ತರ ಕೊರಿಯಾ: ವಿಶ್ವಸಂಸ್ಥೆ ಹೇಳಿದ್ದೇನು?

|
Google Oneindia Kannada News

ಸೋಲ್,ಫೆಬ್ರವರಿ 10:ಉತ್ತರ ಕೊರಿಯಾವು ಸೈಬರ್ ದಾಳಿ ಮೂಲಕ 300 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಕ್ರಿಪ್ಟೋಕರೆನ್ಸಿ ಕದ್ದಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಅಣ್ವಸ್ತ್ರ ಪರೀಕ್ಷೆ ಹಾಗೂ ಆಧುನಿಕ ಕ್ಷಿಪಣಿ ಅಭಿವೃದ್ಧಿಗೆ ಬೆಂಬಲ ನೀಡಲು ಸೈಬರ್ ದಾಳಿ ಮೂಲದ ಕರೆನ್ಸಿ ಲೂಟಿ ಮಾಡಿದೆ.

2019ರ ನವೆಂಬರ್‌ನಿಂದ 2020ರವರೆಗೆ ಒಟ್ಟು 316.4 ಮಿಲಿಯನ್ ಡಾಲರ್‌ನಷ್ಟು ವರ್ಚುವಲ್ ಆಸ್ತಿಯ ಕಳ್ಳತನವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಭಾರತ-ಇಸ್ರೇಲ್ ಜಂಟಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷೆ ಯಶಸ್ವಿಭಾರತ-ಇಸ್ರೇಲ್ ಜಂಟಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪರೀಕ್ಷೆ ಯಶಸ್ವಿ

ಕ್ರಿಪ್ಟೋಕರೆನ್ಸಿ ಎನ್ನುವುದು ಡಿಜಿಟಲ್ ಹಣಕಾಸು ವ್ಯವಸ್ಥೆಯಾಗಿದ್ದು, ಭೌತಿಕ ಅಸ್ತಿತ್ವ ಇಲ್ಲದ ಕಾರಣ ಇದಕ್ಕೆ ಯಾವುದೇ ರಾಷ್ಟ್ರದ ಕಾನೂನಾತ್ಮಕ ಮನ್ನಣೆ ಇರುವುದಿಲ್ಲ.

North Korea Stole $300 Million In Crypto To Fund Nukes: UN Experts

ಹೀಗಾಗಿ ಇದನ್ನು ಡಿಜಿಟಲ್ ಸ್ವರೂಪದಲ್ಲಿಯೇ ಬಳಸಬೇಕಾಗುತ್ತದೆ. ಹಾಗೆಂದು ಇದನ್ನು ಸೃಷ್ಟಿಸಲು ಸಾಧ್ಯವಿಲ್ಲ. ಮುಖ್ಯವಾಹಿನಿಯ ಹಣಕಾಸು ವ್ಯವಸ್ಥೆಗೆ ಪರ್ಯಾಯವಾಗಿ ಬಳಕೆಯಾಗುವ ಕ್ರಿಪ್ಟೋಕರೆನ್ಸಿ ವ್ಯವಸ್ಥೆಗೆ ಪ್ರವೇಶ ಪಡೆಯಲು ಮುಖ್ಯವಾಹಿನಿ ಹಣವೇ ಬೇಕಾಗುತ್ತದೆ.

ಹಣಕಾಸು ಸಂಸ್ಥೆಗಳು ಮತ್ತು ವಿನಿಮಯ ಕೇಂದ್ರಗಳ ವರ್ಚುವಲ್ ವ್ಯವಹಾರಗಳನ್ನು ಹ್ಯಾಕ್ ಮಾಡುವ ಮೂಲಕ ಕ್ರಿಪ್ಟೋಕರೆನ್ಸಿ ಕಳ್ಳತನ ಮಾಡಲಾಗಿದೆ.

ಜಲಾಂತರ್ಗಾಮಿಗಳಿಂದ ಚಿಮ್ಮುವ ಆಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಮಿಲಿಟರಿಯಲ್ಲಿ ಬಳಸುವ ಹಾರ್ಡ್‌ವೇರ್ಅಭಿವೃದ್ಧಿಗೆ ಮುಂದಾಗುವುದಾಗಿ ಹೇಳಿರುವ ಉತ್ತರ ಕೊರಿಯಾ, ಇಲ್ಲಿ ನಡೆದ ಪರೇಡ್‌ನಲ್ಲಿ ತನ್ನ ಈ ಕಾರ್ಯಕ್ರಮಗಳನ್ನು ಅನಾವರಣಗೊಳಿಸಿತ್ತು.

ಉತ್ತರ ಕೊರಿಯಾ ಪರಮಾಣು ಕಾರ್ಯಕ್ರಮಗಳ ಚಟುವಟಿಕೆ ಸ್ಥಗಿತಗೊಳಿಸಿರುವ ಯಾವುದೇ ಸುಳಿವು ದೊರೆತಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಈ ಹಿಂದೆ ಹೇಳಿತ್ತು.

English summary
North Korea has stolen more than $300 million worth of cryptocurrencies through cyberattacks in recent months to support its banned nuclear and ballistic missile programmes, a confidential UN report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X