• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಊಹಾಪೋಹಗಳಿಗೆ ತೆರೆ: ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್

|

ಸಿಯೋಲ್, ಮೇ 2: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಕುರಿತು ಇದ್ದ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಸತತ 23 ದಿನಗಳ ಬಳಿಕ ಜನರ ಕಣ್ಣೆದುರು ಬಂದು ನಿಂತಿದ್ದಾರೆ. ಫರ್ಟಿಲೈಜರ್ ಕಾರ್ಖಾನೆಯೊಂದರ ಸಮಾರಂಭದಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎಂದು ಕೆಸಿಎನ್‌ಎ ವರದಿ ಮಾಡಿದೆ.

ರಾಜಧಾನಿ ಪ್ಯೋಂಗ್ಯಾಂಗ್ ಸಮೀಪವಿರುವ ಸಾನ್‌ಚೂನ್‌ನಲ್ಲಿರುವ ಕಾರ್ಯಕ್ರಮದಲ್ಲಿ ಕಿಮ್ ಶುಕ್ರವಾರ ಪಾಲ್ಗೊಂಡಿದ್ದರು. ಸುಮಾರು 3 ವಾರಗಳ ಕಾಲ ಅವರು ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಪಿಟ್ಸ್ ಬರ್ಗ್ ನಲ್ಲಿ ಏಪ್ರಿಲ್ 11 ರಂದು ನಡೆದಿದ್ದ ಆಡಳಿತಾರೂಢ ಕಾರ್ಮಿಕ ಪಕ್ಷದ ಪೊಲಿಟ್ ಬ್ಯುರೊ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಿಮ್ ಕೊನೆಯ ಬಾರಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು.

ವಿದೇಶಿ ಮುಖಂಡರಿಗೆ ಸಂದೇಶಗಳನ್ನು ಕಳುಹಿಸುವಂತಹ ವ್ಯವಹಾರಗಳನ್ನು ಅವರು ನಿರ್ವಹಿಸುವ ಬಗ್ಗೆ ರಾಜ್ಯ ಮಾಧ್ಯಮಗಳು ವರದಿಗಳನ್ನು ನೀಡಿವೆ, ಆದರೆ ಅವರ ಯಾವುದೇ ಫೋಟೋ ಅಥವಾ ವಿಡಿಯೋ ಬಿಡುಗಡೆಯಾಗಿಲ್ಲ ಎಂದು ಸಿಯೋಲ್ ಮೂಲದ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಅವರ ಸಹೋದರಿ ಯೋ ಕೂಡ ಪಾಲ್ಗೊಂಡಿದ್ದರು ಎಂದು ಹೇಳಲಾಗಿದ್ದು, ಫೋಟೊವನ್ನು ರಿಲೀಸ್ ಮಾಡಲು ಒಪ್ಪಲಿಲ್ಲ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎರಡನೇ ಬಾರಿಗೆ ಪ್ರತ್ಯಕ್ಷ

ಉತ್ತರ ಕೊರಿಯಾ ರಾಷ್ಟ್ರ ನಿರ್ಮಾತೃ ಹಾಗೂ ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೂ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. 2011ರಲ್ಲಿ ಕಿಂಗ್ ಜಾನ್ ಉನ್ ಅಧಿಕಾರಕ್ಕೆ ಬಂದಾಗಿನಿಂದಲೂ ಏಪ್ರಿಲ್ 15 ರಂದು ನಡೆಯುವ ವಾರ್ಷಿಕೋತ್ಸವ ಸಮಾರಂಭಕ್ಕೆ ಗೈರು ಹಾಜರು ಆಗಿರಲಿಲ್ಲ.

ಶಸ್ತ್ರ ಚಿಕಿತ್ಸೆಯ ನಂತರ ಕಿಮ್ ಜಾಂಗ್ ಉನ್ ತೀವ್ರ ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದು ಗುಪ್ತಚರ ಮಾಹಿತಿಯಿಂದ ತಿಳಿದುಬಂದ ವಿಚಾರವಾಗಿತ್ತು.ಸಿಎನ್ ಎನ್ ಕಳೆದ ವಾರ ವರದಿ ಭಿತ್ತರಿಸಿದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡವು.

ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿರುವುದು ಅಪರೂಪವಲ್ಲ, 2014 ಸೆಪ್ಟೆಂಬರ್ ನಲ್ಲಿ ಕೂಡಾ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು. ಕಿಮ್ ಜಾನ್ ಉನ್ ಅವರ ಕಾಲಿನಿಂದ ಉಣ್ಣನ್ನು ತೆಗೆಯಲಾಯಿತು ಎಂದು ಎಷ್ಟೋ ದಿನದ ನಂತರ ಸಿಯೋಲ್ ಗುಪ್ತಚರ ಸಂಸ್ಥೆಗಳು ಹೇಳಿಕೆ ನೀಡಿದ್ದವು.

ಯಾವುದೇ ಫೋಟೊ, ವಿಡಿಯೋ ಬಿಡುಗಡೆಯಾಗಿಲ್ಲ

ಯಾವುದೇ ಫೋಟೊ, ವಿಡಿಯೋ ಬಿಡುಗಡೆಯಾಗಿಲ್ಲ

ವಿದೇಶಿ ಮುಖಂಡರಿಗೆ ಸಂದೇಶಗಳನ್ನು ಕಳುಹಿಸುವಂತಹ ವ್ಯವಹಾರಗಳನ್ನು ಅವರು ನಿರ್ವಹಿಸುವ ಬಗ್ಗೆ ರಾಜ್ಯ ಮಾಧ್ಯಮಗಳು ವರದಿಗಳನ್ನು ನೀಡಿವೆ, ಆದರೆ ಅವರ ಯಾವುದೇ ಫೋಟೋ ಅಥವಾ ವಿಡಿಯೋ ಬಿಡುಗಡೆಯಾಗಿಲ್ಲ ಎಂದು ಸಿಯೋಲ್ ಮೂಲದ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಅವರ ಸಹೋದರಿ ಯೋ ಕೂಡ ಪಾಲ್ಗೊಂಡಿದ್ದರು ಎಂದು ಹೇಳಲಾಗಿದ್ದು, ಫೋಟೊವನ್ನು ರಿಲೀಸ್ ಮಾಡಲು ಒಪ್ಪಲಿಲ್ಲ.

ಕಿಮ್ ಇಲ್ ಸುಂಗ್ ಸ್ಮರಣೆಗೆ ಗೈರು

ಕಿಮ್ ಇಲ್ ಸುಂಗ್ ಸ್ಮರಣೆಗೆ ಗೈರು

ಉತ್ತರ ಕೊರಿಯಾ ರಾಷ್ಟ್ರ ನಿರ್ಮಾತೃ ಹಾಗೂ ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೂ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ. 2011ರಲ್ಲಿ ಕಿಂಗ್ ಜಾನ್ ಉನ್ ಅಧಿಕಾರಕ್ಕೆ ಬಂದಾಗಿನಿಂದಲೂ ಏಪ್ರಿಲ್ 15 ರಂದು ನಡೆಯುವ ವಾರ್ಷಿಕೋತ್ಸವ ಸಮಾರಂಭಕ್ಕೆ ಗೈರು ಹಾಜರು ಆಗಿರಲಿಲ್ಲ.

ಶಸ್ತ್ರ ಚಿಕಿತ್ಸೆ ಬಳಿಕ ಕಿಮ್ ಜಾಂಗ್ ಅಪಾಯದಲ್ಲಿ

ಶಸ್ತ್ರ ಚಿಕಿತ್ಸೆ ಬಳಿಕ ಕಿಮ್ ಜಾಂಗ್ ಅಪಾಯದಲ್ಲಿ

ಶಸ್ತ್ರ ಚಿಕಿತ್ಸೆಯ ನಂತರ ಕಿಮ್ ಜಾಂಗ್ ಉನ್ ತೀವ್ರ ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದು ಗುಪ್ತಚರ ಮಾಹಿತಿಯಿಂದ ತಿಳಿದುಬಂದ ವಿಚಾರವಾಗಿತ್ತು.ಸಿಎನ್ ಎನ್ ಕಳೆದ ವಾರ ವರದಿ ಭಿತ್ತರಿಸಿದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡವು.

ಕಿಮ್ ಜಾಂಗ್ ಕಣ್ಮರೆಯಾಗುವುದು ಅಪರೂಪವಲ್ಲ

ಕಿಮ್ ಜಾಂಗ್ ಕಣ್ಮರೆಯಾಗುವುದು ಅಪರೂಪವಲ್ಲ

ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿರುವುದು ಅಪರೂಪವಲ್ಲ, 2014 ಸೆಪ್ಟೆಂಬರ್ ನಲ್ಲಿ ಕೂಡಾ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು. ಕಿಮ್ ಜಾನ್ ಉನ್ ಅವರ ಕಾಲಿನಿಂದ ಉಣ್ಣನ್ನು ತೆಗೆಯಲಾಯಿತು ಎಂದು ಎಷ್ಟೋ ದಿನದ ನಂತರ ಸಿಯೋಲ್ ಗುಪ್ತಚರ ಸಂಸ್ಥೆಗಳು ಹೇಳಿಕೆ ನೀಡಿದ್ದವು.

English summary
North Korean leader Kim Jong Un has made his first public appearance since speculation about his health began last month, cutting the ribbon at the opening of a fertilizer factory, KCNA reported Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X