• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಮಾದಲ್ಲಿ ಕಿಮ್ ಜಾಂಗ್ ಉನ್: ಸುಳ್ಳು ಸುದ್ದಿ ಎಂದ ಉತ್ತರ ಕೊರಿಯಾ

|

ಸೋಲ್, ಆಗಸ್ಟ್ 27: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕೋಮಾದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಉತ್ತರ ಕೊರಿಯಾ ಹಲವು ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಕೊರೊನಾ ಸೋಂಕಿಗೆ ಸಂಬಂಧಿಸಿದ ಸಭೆಯೊಂದರಲ್ಲಿ ಭಾಗಿಯಾಗಿದ್ದ ಕಿಮ್ ಜಾಂಗ್ ಉನ್ ಅವರ ಫೋಟೊವನ್ನು ಬಿಡುಗಡೆ ಮಾಡಿದ್ದು, ಕಿಮ್ ಜಾಂಗ್ ಉನ್‌ಗೆ ಏನೂ ಆಗಿಲ್ಲ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.

ಊಹಾಪೋಹಗಳಿಗೆ ತೆರೆ: ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್ ಜಾಂಗ್ ಉನ್ ಕೋಮಾಗೆ ಜಾರಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಕಿಮ್ ಜಾಂಗ್ ಸಹೋದರಿ ಕಿಮ್ ಯೊ ಜಾಂಗ್ ಅವರೇ ದೇಶದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ಹೆಲವು ಮಾಧ್ಯಮಗಳು ವರದಿ ಮಾಡಿದೆ.

ಕಿಮ್ ಜಾಂಗ್ ಉನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಕೋಮಾದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ವರದಿ ಮಾಡಿದೆ.

'ಕಿಮ್ ಜಾಂಗ್ ಉನ್ ಕೋಮಾದಲ್ಲಿದ್ದಾರೆ ಎಂದು ಭಾವಿಸಿದ್ದೇನೆ. ಸದ್ಯ ಉತ್ತರ ಕೊರಿಯಾದ ಆಡಳಿತ ಉನ್ ಸಹೋದರಿ ಕಿಮ್ ಯೊ ಜಾಂಗ್ ಕೈಯಲ್ಲಿದೆ' ಎಂದೂ ಅವರು ಹೇಳಿದ್ದಾರೆ. ಕಿಮ್ ಅವರು ಇತ್ತೀಚೆಗೆ ತಮ್ಮ ಸಹೋದರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುತ್ತಿದ್ದರು.

ಇದು ಅವರು ಅನಾರೋಗ್ಯಕ್ಕೀಡಾಗಿರುವುದರ ಸಂಕೇತ ಎಂದು ದಕ್ಷಿಣ ಕೊರಿಯಾದ ರಾಜ್ಯ ವ್ಯವಹಾರಗಳ ಮೇಲ್ವಿಚಾರಣಾ ಕಚೇರಿಯ ಮುಖ್ಯಸ್ಥರಾಗಿದ್ದ ಚಾಂಗ್ ಸಾಂಗ್ ಮಿನ್ ಹೇಳಿದ್ದಾರೆ.

ಯಾವುದೇ ಉತ್ತರ ಕೊರಿಯಾದ ನಾಯಕನು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ದಂಗೆಯ ಮೂಲಕ ತೆಗೆದುಹಾಕಲ್ಪಟ್ಟ ಹೊರತಾಗಿ ತನ್ನ ಅಧಿಕಾರವನ್ನು ಇನ್ನೊಬ್ಬ ವ್ಯಕ್ತಿಗೆ ವಹಿಸುವುದಿಲ್ಲ ಎಂದು ಚ್ಯಾಂಗ್ ಸೋಂಗ್ ಮಿನ್ ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಬೆಹುಗಾರಿಕಾ ಸಂಸ್ಥೆಯೂ ಉತ್ತರ ಕೊರಿಯಾದ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿರುವ ಬಗ್ಗೆ ಸುಳಿವು ನೀಡಿದೆ. ಆದಾಗ್ಯೂ, ಕಿಮ್ ಆರೋಗ್ಯ ಕ್ಷೀಣಿಸುತ್ತಿದೆ ಎಂಬುದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕೆಸಿಎನ್‌ಎ ಫೋಟೊ ಬಿಡುಗಡೆ ಮಾಡಿದ್ದು, ಆ ಫೋಟೊ ಯಾವ ದಿನ ತೆಗೆದಿದ್ದು ಎಂಬುದನ್ನು ತಿಳಿಸಿಲ್ಲ.

English summary
Days after a South Korean diplomat claimed that North Korean leader Kim Jong-Un was in a coma, the communist nation has issued new photos of the reclusive leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X