ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಡನ್‌ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!

|
Google Oneindia Kannada News

ಉತ್ತರ ಕೊರಿಯಾ ಬದಲಾಗಿಲ್ಲ, ಅದರಲ್ಲೂ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಬದಲಾಗುವ ಲಕ್ಷಣ ಕಾಣಿಸುತ್ತಲೇ ಇಲ್ಲ. ಏಕೆಂದರೆ ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಿಸುವುದಾಗಿ ಕಿಮ್‌ ಘೋಷಿಸಿದ ಬೆನ್ನಲ್ಲೇ, ಉತ್ತರ ಕೊರಿಯಾ ಮಿಲಿಟರಿ ತನ್ನ ನ್ಯೂಕ್ಲಿಯರ್ ಬಾಂಬ್‌ಗಳನ್ನ ಪ್ರದರ್ಶಿಸಿದೆ.

ಈ ಮೂಲಕ ಶತ್ರು ರಾಷ್ಟ್ರಗಳಿಗೆ ಅದರಲ್ಲೂ ಪ್ರಮುಖವಾಗಿ ಅಮೆರಿಕದ ನಾಯಕರಿಗೆ ಉತ್ತರ ಕೊರಿಯಾ ವಾರ್ನಿಂಗ್ ರವಾನಿಸಿದೆ. ಸಬ್‌ಮರೀನ್‌ಗಳ ಮೂಲಕ ಹಾರಬಲ್ಲ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಹಲವು ಅತ್ಯಾಧುನಿಕವಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿದೆ. ಅಮರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಉತ್ತರ ಕೊರಿಯಾದ ಈ ನಡೆ ಸಾಕಷ್ಟು ಆತಂಕ ಮೂಡಿಸಿದೆ.

3rd World War Fix: ಸರ್ವಾಧಿಕಾರಿ ಕಿಮ್ ತಂದಿದ್ದಾನೆ ವಿನಾಶಕ ಅಸ್ತ್ರ..! 3rd World War Fix: ಸರ್ವಾಧಿಕಾರಿ ಕಿಮ್ ತಂದಿದ್ದಾನೆ ವಿನಾಶಕ ಅಸ್ತ್ರ..!

ಅಲ್ಲದೆ ಅಮೆರಿಕನ್ನರಲ್ಲಿ ನ್ಯೂಕ್ಲಿಯರ್ ದಾಳಿಯ ಭಯವನ್ನು ಹುಟ್ಟುಹಾಕಿದೆ. ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಮಾತುಕತೆ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಸ್ನೇಹ ಮೂಡುವ ಲಕ್ಷಣ ಕಂಡುಬಂದಿತ್ತು. ಆದರೆ ಈಗ ಬೈಡನ್ ಅಧ್ಯಕ್ಷರಾಗುತ್ತಿದ್ದು, ಕಿಮ್ ಜಾಂಗ್ ಉನ್ ತನ್ನ ಮೊಂಡಾಟ ಮುಂದುವರಿಸಿದ್ದಾನೆ.

ಬಾಂಬ್ ಪರೇಡ್‌ಗೆ ಸರ್ವಾಧಿಕಾರಿ ಸಾಕ್ಷಿ

ಬಾಂಬ್ ಪರೇಡ್‌ಗೆ ಸರ್ವಾಧಿಕಾರಿ ಸಾಕ್ಷಿ

ಉತ್ತರ ಕೊರಿಯಾ ಕಾಲಮಾನ ಗುರುವಾರ ರಾತ್ರಿ (ಜನವರಿ 14) ನಡೆದ ಪರೇಡ್‌ ಜಗತ್ತಿನ ಗಮನಸೆಳೆದಿದೆ. ಈ ಮಧ್ಯೆ ಖುದ್ದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪರೇಡ್‌ ವೀಕ್ಷಿಸಿದ್ದಾನೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಈ ವೇಳೆ ಮಾತನಾಡಿರುವ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೆ ಮತ್ತು ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲಾಗುವುದು ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದಾನೆ.

ಕಿಮ್ ಬಗ್ಗೆ ಬೈಡನ್ ಬೈದಿದ್ದರು..!

ಕಿಮ್ ಬಗ್ಗೆ ಬೈಡನ್ ಬೈದಿದ್ದರು..!

ಒಂದು ಕಡೆ ಡೊನಾಲ್ಡ್ ಟ್ರಂಪ್ ಕಿಮ್ ಜಾಂಗ್ ಉನ್ ಜೊತೆ ಮಾತುಕತೆಗೆ ಮುಂದಾಗಿದ್ದರೆ ಜೋ ಬೈಡನ್ ಅದನ್ನ ಟೀಕಿಸಿದ್ದರು. ವಿಪಕ್ಷ ನಾಯಕರಾಗಿದ್ದ ಸಂದರ್ಭದಲ್ಲಿ ಬೈಡನ್ ಇದನ್ನ ಖಂಡಿಸಿದ್ದರು. ಕಿಮ್ ಜಾಂಗ್ ಉನ್ ರಾಕ್ಷಸನಂತೆ, ಕೊಲೆಗಡುಕ. ಆತನ ಜೊತೆಗೆ ಶಾಂತಿ ಮಾತುಕತೆ ಅವಶ್ಯಕತೆ ಏನಿತ್ತು? ಎಂದು ಬೈಡನ್ ಪ್ರಶ್ನಿಸಿದ್ದರು. ಆದರೆ ಬೈಡನ್ ಹೇಳಿದ್ದ ಈ ಮಾತುಗಳನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಕಿಮ್ ಜಾಂಗ್ ಉನ್, ಬೈಡನ್ ಗೆಲುವು ಪಕ್ಕಾ ಆಗುತ್ತಿದ್ದಂತೆ ಅಮೆರಿಕ ಹಾಗೂ ಬೈಡನ್‌ಗೆ ವಾರ್ನಿಂಗ್ ಕೊಟ್ಟಿದ್ದ.

ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್ಯುದ್ಧದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸರ್ವಾಧಿಕಾರಿ ಕಿಮ್

ಅಮೆರಿಕದ ಕ್ಷಿಪಣಿ ಕೇಂದ್ರಗಳೇ ಟಾರ್ಗೆಟ್..?

ಅಮೆರಿಕದ ಕ್ಷಿಪಣಿ ಕೇಂದ್ರಗಳೇ ಟಾರ್ಗೆಟ್..?

ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್‌ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ

ಕಿಮ್ ಒಬ್ಬ ಕಿರಾತಕ. ಆತ ಬರೀ ಮಿಸೈಲ್, ಮಿಲಿಟರಿ ಸಾಧನಗಳನ್ನಷ್ಟೇ ಪ್ರದರ್ಶನಕ್ಕೆ ಇಡೋನಲ್ಲ. ಈತ ಈ ಹಿಂದೆ ತನ್ನ ಚಿಕ್ಕಪ್ಪನ ತಲೆಯನ್ನೇ ಕತ್ತರಿಸಿ, ಉತ್ತರ ಕೊರಿಯಾ ಅಧಿಕಾರಿಗಳ ಮುಂದೆ ಪ್ರದರ್ಶನಕ್ಕಿಟ್ಟಿದ್ದ. ಅಲ್ಲದೆ ಉತ್ತರ ಕೊರಿಯಾದಲ್ಲಿ ಕೊರೊನಾ ಕಂಟ್ರೋಲ್‌ಗೆ ತರಲು ಕಿಮ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಅಲ್ಲದೆ ಕೊರೊನಾ ಸೋಂಕಿತರನ್ನು ಬರ್ಬರವಾಗಿ ಕೊಲೆ ಮಾಡಿದ ಉದಾಹರಣೆಗಳೂ ಇವೆ. ಹೀಗೆ ಕಿಮ್ ತನ್ನ ದೇಶದ ಅಧಿಕಾರಿಗಳು ಸೇರಿದಂತೆ ಸಾವಿರಾರು ಅಮಾಯಕರ ಪ್ರಾಣ ತೆಗೆದಿದ್ದಾನೆ. ಜೊತೆಗೆ ಜಗತ್ತಿನ ಬಲಾಢ್ಯ ರಾಷ್ಟ್ರಗಳನ್ನು ಕಾಡುತ್ತಿದ್ದಾನೆ. ಅಕಸ್ಮಾತ್ ಕಿಮ್ ಹೀಗೆ ವರ್ತಿಸುತ್ತಿರುವುದಕ್ಕೆ ಅಮೆರಿಕದಿಂದ ಪ್ರತಿಕ್ರಿಯೆ ಬಂದರೆ ಇಲ್ಲವೇ ಮರುದಾಳಿ ನಡೆಸಿದರೆ 3ನೇ ಮಹಾಯುದ್ಧ ಫಿಕ್ಸ್ ಆದಂತೆ.

English summary
North Korea unveiled new type of submarine-launched missile. Kim Jong-un warns enemies in military parade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X