• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಐಎ ಬಂಧನದಲ್ಲಿ ಕಿಮ್ ಜಾಂಗ್ ಉನ್ ಮಲಸೋದರಳಿಯ

|

ಪ್ಯಾಂಗಾಂಗ್, ನವೆಂಬರ್ 18: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಮಲಸೋದರಳಿಯ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ (ಸಿಐಎ) ಬಂಧನದಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ. 2017ರಲ್ಲಿ ಕಣ್ಮರೆಯಾಗಿದ್ದ ಕಿಮ್ ಹಾನ್-ಸೊಲ್, ಸಿಐಎ ವಶದಲ್ಲಿ ಇದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.

1948ರಲ್ಲಿ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾವನ್ನು ಸ್ಥಾಪಿಸಿದ ಕಿಮ್ ಇಲ್-ಸುಂಗ್ ಅವರ ಮೊಮ್ಮಗ ಹಾಗೂ ಕಿಮ್ ಜಾಂಗ್ ಇಲ್ ಅವರ ಹಿರಿಯ ಮಗ ಮತ್ತು ದಿ. ಕಿಮ್ ಜಾಂಗ್ ನಮ್ ಅವರ ಮಗ ಕಿಮ್ ಹಾನ್-ಸೊಲ್, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಕಟು ಟೀಕಾಕಾರರಾಗಿದ್ದು, ಸ್ವಯಂ ಗಡಿಪಾರಿಗೆ ಒಳಗಾಗಿ ಚೀನಾದ ಮಕಾವು ಪ್ರದೇಶದಲ್ಲಿ ನೆಲೆಸಿದ್ದರು. ಚೀನಾ, ಸಿಂಗಪುರ ಮತ್ತು ಮಲೇಷ್ಯಾದ ನಡುವೆ ಅವರು ಆಗಾಗ್ಗೆ ಪ್ರಯಾಣಿಸುತ್ತಿದ್ದರು.

ದೇಶದ ಜನತೆ ಎದುರು ನನ್ನನ್ನು ಕ್ಷಮಿಸಿ ಎಂದು ಕಣ್ಣೀರಿಟ್ಟ ಕಿಮ್ ಜಾಂಗ್ ಉನ್

2017ರ ಫೆಬ್ರವರಿಯಲ್ಲಿ ಕಿಮ್ ಹಾನ್ ಸೊಲ್ ಅವರ ತಂದೆ ಕಿಮ್ ಜಾಂಗ್ ನಮ್ ಅವರನ್ನು ಮಲೇಷ್ಯಾದ ಜನನಿಬಿಡ ವಿಮಾನ ನಿಲ್ದಾಣದಲ್ಲಿ ಹಾಡ ಹಗಲಿನಲ್ಲಿಯೇ ಇಬ್ಬರು ಮಹಿಳೆಯರು ವಿಷ ಪ್ರಾಶನ ಮಾಡಿ ಹತ್ಯೆ ಮಾಡಿದ್ದರು. ಇದು ಉತ್ತರ ಕೊರಿಯಾ ಸರ್ಕಾರದ್ದೇ ಕೃತ್ಯ ಎಂಬ ಅನುಮಾನ ವ್ಯಕ್ತವಾಗಿತ್ತು. ಕಿಮ್ ಜಾಂಗ್ ನಮ್ ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳದ್ದು ಮುಂದಿನ ಸರದಿ ಎಂದು ಅನೇಕರು ಊಹಿಸಿದ್ದರು. ಮುಂದೆ ಓದಿ.

ಯುರೋಪ್ ಹಾದಿ ಹಿಡಿಯಲು ನಿರ್ಧಾರ

ಯುರೋಪ್ ಹಾದಿ ಹಿಡಿಯಲು ನಿರ್ಧಾರ

ಆಗ ಮಕಾವುದಲ್ಲಿ ನೆಲೆಸಿದ್ದ ಅವರ ಕುಟುಂಬ ಪಶ್ಚಿಮ ದೇಶಗಳಿಗೆ ತೆರಳಿ ಅಲ್ಲಿ ರಾಜಕೀಯ ಆಶ್ರಯ ಕೋರಲು ನಿರ್ಧರಿಸಿದ್ದವು. ಅವರ ರಾಜಕೀಯ ಹತ್ಯೆಯಿಂದ ತಪ್ಪಿಸಿಕೊಳ್ಳಲು ಕಿಮ್ ಜಾಂಗ್ ನಮ್ ಅವರ ಕುಟುಂಬದವರು ಪರಸ್ಪರ ದೂರವಾಗಿ ಯುರೋಪ್‌ನ ಬೇರೆ ಬೇರೆ ದೇಶಗಳ ದಾರಿ ಹಿಡಿಯಲು ಉದ್ದೇಶಿಸಿದ್ದರು.

3rd World War Fix: ಸರ್ವಾಧಿಕಾರಿ ಕಿಮ್ ತಂದಿದ್ದಾನೆ ವಿನಾಶಕ ಅಸ್ತ್ರ..!

ಕಿಮ್ ವಿರೋಧಿ ಗುಂಪಿನ ನೆರವು

ಕಿಮ್ ವಿರೋಧಿ ಗುಂಪಿನ ನೆರವು

ಕಿಮ್ ಜಾಂಗ್ ನಮ್ ಅವರ ಹಿರಿಯ ಮಗ ಕಿಮ್ ಹಾನ್ ಸೊಲ್, ಉತ್ತರ ಕೊರಿಯಾದ ಬಂಡಾಯ ಗುಂಪು ಚೆಯೊಲ್ಲಿಮಾ ಸಿವಿಲ್ ಡಿಫೆನ್ಸ್ ಅಥವಾ ಫ್ರೀ ಜೋಸೆನ್ ಎಂದು ಕರೆದುಕೊಳ್ಳುವ ಗುಂಪಿನಿಂದ ರಕ್ಷಣೆ ಕೋರಿದ್ದರು. ಕಿಮ್ ಜಾನ್ ಉಂಗ್ ಅವರ ಸರ್ವಾಧಿಕಾರಿ ಆಡಳಿತವನ್ನು ಪ್ರಶ್ನಿಸುವವರನ್ನು ಬೆಂಬಲಿಸುವ ಈ ಗುಂಪಿನ ಸದಸ್ಯರು ಕಿಮ್ ಅವರ ಕುಟುಂಬವು ಪಶ್ಚಿಮದ ದೇಶಗಳಲ್ಲಿ ನೆಲೆಯೂರಲ್ಲಿ ಸಹಾಯ ಮಾಡಿದ್ದರು. ಇದಕ್ಕೆ ಚೀನಾ, ಅಮೆರಿಕ ಮತ್ತು ಹೊಲಾಂಡ್ ನೆರವು ನೀಡಿದ್ದವು ಎನ್ನಲಾಗಿದೆ.

ವಿಮಾನದಿಂದ ಬರಲೇ ಇಲ್ಲ

ವಿಮಾನದಿಂದ ಬರಲೇ ಇಲ್ಲ

ಆದರೆ ಕಿಮ್ ಜಾಂಗ್ ನಮ್ ಅವರ ಪತ್ನಿ ಮತ್ತು ಕಿರಿಯ ಮಗ ಅವರಿಗೆ ಯುರೋಪ್‌ಗೆ ತೆರಳಲು ಸಾಧ್ಯವಾಗಿರಲಿಲ್ಲ. ಅವರು ಎಲ್ಲಿ ಇದ್ದಾರೆ ಎಂಬ ಮಾಹಿತಿಯೂ ಇಲ್ಲ. ಕಿಮ್ ಹಾನ್ ಸೊಲ್ ಅವರು ಚೆಯೊಲ್ಲಿಮಾ ಸಿವಿಲ್ ಡಿಫೆನ್ಸ್ ಸದಸ್ಯರ ಸಹಾಯದಿಂದ ಮಕಾವುದಿಂದ ತೈವಾನ್‌ಗೆ ಪ್ರಯಾಣಿಸಿದ್ದರು. ಅಲ್ಲಿಂದ ಆರ್ಮ್‌ಸ್ಟರ್‌ಡಮ್‌ನ ಸ್ಕಿಫೋಲ್ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಅವರಿಗೆ ಚೆಯೊಲ್ಲಿಮಾ ಸಿವಿಲ್ ಡಿಫೆನ್ಸ್ ಸದಸ್ಯರು ಹಾಗೂ ಡಚ್ ಅಧಿಕಾರಿಗಳು ಕಾದು ಕುಳಿತಿದ್ದರೆ, ಅವರು ವಿಮಾನದ ಪ್ರವೇಶ ದ್ವಾರಕ್ಕೆ ಬಂದಿರಲೇ ಇಲ್ಲ. ಈಗಿನ ಹೊಸ ವರದಿಗಳ ಪ್ರಕಾರ ಕಿಮ್ ಹಾನ್ ಸೊಲ್ ಅವರನ್ನು ಅಮೆರಿಕದ ಸಿಐಎ ಅಧಿಕಾರಿಗಳು ತೈವಾನ್‌ನಲ್ಲಿಯೇ ಅಡ್ಡಗಟ್ಟಿದ್ದರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಚಿಕ್ಕಪ್ಪನ ತಲೆ ಕತ್ತರಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಸರ್ವಾಧಿಕಾರಿ..!

ಅಕ್ರಮ ಹಣದ ಮೂಲ

ಅಕ್ರಮ ಹಣದ ಮೂಲ

ಕಿಮ್ ಹಾನ್ ಸೊಲ್ ಅವರು ಈಗಲೂ ಅಮೆರಿಕದ ವಶದಲ್ಲಿಯೇ ಇದ್ದಾರೆ. ಆದರೆ ಉತ್ತರ ಕೊರಿಯಾದಿಂದ ಗಡಿಪಾರಿನ ಭಾಗವಾಗಿ ಅವರು ಸ್ವಯಂ ವ್ಯವಸ್ಥೆ ಮಾಡಿಕೊಂಡಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಅವರ ತಾಯಿ ಮತ್ತು ತಮ್ಮ ಕೂಡ ಅವರೊಂದಿಗೆ ಇದ್ದಾರೆಯೇ ಎನ್ನುವುದು ಸಹ ತಿಳಿದುಬಂದಿಲ್ಲ. ಮಕಾವುದಲ್ಲಿದ್ದ ಕಿಮ್ ಜಾಂಗ್ ನಮ್ ಅವರಿಗೆ ಉತ್ತರ ಕೊರಿಯಾದ ಸರ್ಕಾರವೊಂದರಿಂದ ಹಣದ ನೆರವು ಬರುತ್ತಿತ್ತು. ಹೆಚ್ಚಿನ ಹಣವು ಅಕ್ರಮ ಮೂಲಗಳಿಂದ ಬರುತ್ತಿತ್ತು ಎನ್ನಲಾಗಿದೆ. ಆ ಹಣದ ವಹಿವಾಟಿನಲ್ಲಿ ಕಿಮ್ ಹಾನ್ ಸೊಲ್ ಸ್ವತಃ ಭಾಗಿಯಾಗಿದ್ದರು. ಹೀಗಾಗಿ ಅವರ ಬಗ್ಗೆ ಸಿಐಎ ಆಸಕ್ತಿ ತೋರಿಸಿತ್ತು ಎಂದು ಹೇಳಲಾಗಿದೆ.

English summary
North Korea leader Kim Jong Un's half nephew, elder son of late Kim Jong nam, Kim Han Sol is in the custody of America's CIA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X