ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾ: ಕಿಮ್ ಜಾಂಗ್ ಉನ್ ಉತ್ತರಾಧಿಕಾರಿ ಯಾರಾಗಬಹುದು?

|
Google Oneindia Kannada News

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಂಮ್ ಜಾಂಗ್ ಉನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸ್ಥಿತಿ ಚಿಂತಾಜನಕವಾಗಿ ಎಂಬ ಮಾಹಿತಿ ಲಭ್ಯವಾಗಿದ್ದು ಉತ್ತರಾಧಿಕಾರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಈ ಪಟ್ಟಿಯಲ್ಲಿ ಶಕ್ತಿಶಾಲಿ ಮಹಿಳೆ ಎಂದೇ ಪ್ರಖ್ಯಾತಿ ಹೊಂದಿರುವ ಕಿಮ್ ಯೋ ಜಾಂಗ್ ಹೆಸರು ಮುಂಚೂಣಿಯಲ್ಲಿದೆ.ಕಳೆದ ಕೆಲ ದಿನಗಳ ಹಿಂದಷ್ಟೇ ಕಿಮ್ ಕಿರಿಯ ತಂಗಿ ಯೋ ಜಾಂಗ್‌ರನ್ನು ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಮಿತಿಗೆ ಮರು ನೇಮಕವನ್ನೂ ಮಾಡಲಾಗಿತ್ತು. ಹೀಗಾಗಿ ಈಕೆಯೇ ಮುಂದಿನ ಉತ್ತರಾಧಿಕಾರಿಯಾಗಬಹುದೆಂಬ ಶಂಕೆ ಹುಟ್ಟಿಕೊಂಡಿದೆ.

ಅಲ್ಲದೆ ದೇಶಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವನ್ನೂ ಆಕೆ ತೆಗೆದುಕೊಳ್ಳಲಾರಂಭಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಕಿಮ್ ಯೋ ಜಾಂಗ್ ತನ್ನ ಅಣ್ಣ ಕಿಮ್ ಜಾಂಗ್ ಉನ್ ಗೆ ದೀರ್ಘ ಕಾಲದಿಂದ ಆತ್ಮೀಯ ಸಲಹೆಗಾರ್ತಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಅವರನ್ನು ಮತ್ತೊಂದು ಬಾರಿ ಕೇಂದ್ರೀಯ ಸಮಿತಿಯ ಪೊಲಿಟಿಕಲ್ ಬ್ಯೂರೋನ ಸದಸ್ಯರನ್ನಾಗಿ ನೇಮಿಸಲಾಗಿದೆ.

North Korea Kim Jong-Un’s Sister Becoming His Alter Ego

ತಂಗಿಯನ್ನು ನೇಮಕ ಮಾಡುವ ನಿರ್ಧಾರವನ್ನು ಕಿಮ್ ಜಾಂಗ್ ಉನ್ ಅಧ್ಯಕ್ಷತೆಯ ಸಭೆಯಲ್ಲೇ ತೆಗೆದುಕೊಳ್ಳಲಾಗಿತ್ತು. ಆದರೆ ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕಿಂಗ್ ಜಾಂಗ್ ಉನ್ ನಡುವೆ ನಡೆದ ಭೇಟಿ ವಿಫಲವಾದ ಹಿನ್ನೆಲೆಯಲ್ಲಿ ಆಕೆಯನ್ನು ಸ್ಥಾನದಿಂದ ತೆಗೆದುಹಾಕಲಾಗಿತ್ತು.

ಕಿಮ್ ಯೋ ಜಾಂಗ್ 2018ರಲ್ಲಿ ವಿಂಟರ್ ಒಲಿಂಪಿಕ್ ನಲ್ಲಿ ತನ್ನ ಅಣ್ಣನ ಸ್ಥಾನದಲ್ಲಿ ಇವರೇ ಉತ್ತರ ಕೊರಿಯಾವನ್ನು ಪ್ರತಿನಿಧಿಸಿದ್ದರು.ಕಿಮ್ ಜಾಂಗ್ ಉನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಎನ್ನುವ ವರದಿಯನ್ನು ಸರ್ಕಾರ ತಳ್ಳಿ ಹಾಕಿದೆ. ಆದರೆ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿರುವುದೇ ಸುಳ್ಳು ಅಂದೇನೂ ಅವರು ಹೇಳುತ್ತಿಲ್ಲ.

English summary
Dictator Kim Jong-un’s little sister is fast becoming his “alter ego” and is tightening her grip on the country, the world has been warned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X