ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾ ಈಗಲೂ ಕೊರೊನಾ ಸೋಂಕು ಮುಕ್ತ ದೇಶ

|
Google Oneindia Kannada News

ಸಿಯೋಲ್, ಜುಲೈ 30: ಉತ್ತರ ಕೊರಿಯಾ ಕೊರೊನಾ ಸೋಂಕು ಮುಕ್ತವಾಗಿಯೇ ಉಳಿದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಉತ್ತರ ಕೊರಿಯದಲ್ಲಿ ಯಾವುದೇ ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ ಎಂದು ಆಡಳಿತಾರೂಢ ಪಕ್ಷದ ಅಧಿಕೃತ ಪತ್ರಿಕೆಯಾದ ರೋಡೋಂಗ್‌ ಸಿನ್ಮುನ್‌ ವರದಿ ಮಾಡಿದೆ.

ಉತ್ತರ ಕೊರಿಯಾದ ಗಡಿಯಲ್ಲಿ ಕಾಣಿಸಿಕೊಂಡ ಸೋಂಕು, ಲಾಕ್ಡೌನ್ ಜಾರಿಉತ್ತರ ಕೊರಿಯಾದ ಗಡಿಯಲ್ಲಿ ಕಾಣಿಸಿಕೊಂಡ ಸೋಂಕು, ಲಾಕ್ಡೌನ್ ಜಾರಿ

ಆದರೆ, ಇನ್ನು ಮುಂದೆಯೂ ಈ ಮಾರಣಾಂತಿಕ ಸೋಂಕು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ದೇಶದ ಕೊರೋನಾ-ವೈರಸ್ ಮುಕ್ತ ಸ್ಥಾನ ಕಳೆದುಕೊಳ್ಳಬಹುದು ಎಂದಿದೆ.

North Korea Is Still Coronavirus Free Country

ದಕ್ಷಿಣ ಕೊರಿಯಾ ಮತ್ತು ಟರ್ಕ್‌ಮೆನಿಸ್ತಾನ್‌ ಮತ್ತು ಕೆಲ ದ್ವೀಪ ರಾಷ್ಟ್ರಗಳು ಸೇರಿದಂತೆ ಕೆಲ ದೇಶಗಳು ಕೂಡ ಇಲ್ಲಿಯವರೆಗೆ ಯಾವುದೇ ಕೋವಿಡ್‌ ಪ್ರಕರಣಗಳನ್ನು ವರದಿ ಮಾಡಿಲ್ಲ.

ಜುಲೈನಲ್ಲಿ ದಕ್ಷಿಣ ಕೊರಿಯಾದಿಂದ ಆಗಮಿಸಿದ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿತ್ತು. ತಕ್ಷಣ ಸರ್ಕಾರ ಇಡೀ ನಗರವನ್ನು ಸೀಲ್‌ಡೌನ್‌ ಮಾಡಿ, ಸೋಂಕು ಹರಡದಂತೆ ಕ್ರಮ ಕೈಗೊಂಡಿತ್ತು. ಆದರೆ, ನಂತರ ಆ ವ್ಯಕ್ತಿಯಲ್ಲಿ ಸೋಂಕು ಇಲ್ಲ ಎಂದು ತಿಳಿದುಬಂದಿತ್ತು. ಆ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಿ, ಆತನ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸಲಾಗಿತ್ತು.

ಚೀನಾದ ವುಹಾನ್ ಪ್ರಾಂತ್ಯದಿಂದ ಕೊರೊನಾವೈರಸ್ ಹರಡುತ್ತಿರುವ ಸುದ್ದಿ ಬರುತ್ತಿದ್ದಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು ತಮ್ಮ ದೇಶದ ಗಡಿ ಭಾಗವನ್ನು ಬಂದ್ ಮಾಡಿಸಿದ್ದರು.

ಜನವರಿ ತಿಂಗಳಿನಿಂದ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ದೇಶದೊಳಗೆ ಸೋಂಕು ಪ್ರವೇಶಿಸಿಲ್ಲ, ಹರಡಿಲ್ಲ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಅಂತಾರಾಷ್ಟ್ರೀಯ ವಿಮಾನಯಾನ, ರೈಲುಮಾರ್ಗ ಬಂದ್ ಮಾಡಲಾಗಿದೆ. ಶಾಲೆ, ಕಾಲೇಜು, ಕಚೇರಿ ಇನ್ನೂ ಆರಂಭಗೊಂಡಿಲ್ಲ, ವಿದೇಶಿ ಪ್ರವಾಸಿಗರು ಕ್ವಾರಂಟೈನ್ ನಲ್ಲಿದ್ದಾರೆ.

English summary
A DPRK official newspaper said on Thursday that the North Korea has no coronavirus cases, after reports said a man fled from the South and crossed the border showing symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X