ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದ ಮೇಲೆ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

|
Google Oneindia Kannada News

ಉತ್ತರ ಕೊರಿಯಾವು ಜಪಾನ್ ಸಮುದ್ರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿದೆ ಎಂದು ಜಪಾನ್​ನ ಯೋನ್ಹಾಪ್ ನ್ಯೂಸ್ ವರದಿ ಮಾಡಿದೆ.

ಉತ್ತರ ಕೊರಿಯಾ ಈ ಹಿಂದೆ ಸಹ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪವೊಂದನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿತ್ತು. ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಚಿಂತಿತವಾಗಿದ್ದು, ಕಳವಳ ಕೂಡಾ ವ್ಯಕ್ತಪಡಿಸಿವೆ.

ಉತ್ತರ ಕೊರಿಯಾವು ಜಪಾನ್ ಸಮುದ್ರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿದೆ ಎಂದು ಜಪಾನ್​ನ ಯೋನ್ಹಾಪ್ ನ್ಯೂಸ್ ವರದಿ ಮಾಡಿದೆ.

North Korea Fires Unidentified Projectile To Sea Of Japan

ಉತ್ತರ ಕೊರಿಯಾ ಈ ಹಿಂದೆ ಸಹ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪವೊಂದನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿತ್ತು. ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಚಿಂತಿತವಾಗಿದ್ದು, ಕಳವಳ ಕೂಡಾ ವ್ಯಕ್ತಪಡಿಸಿವೆ.

ಈ ವರ್ಷ ಪಯೋಂಗ್ಯಾಂಗ್ ನಡೆಸಿದ ಆರನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ಚೀನಾ ಮತ್ತು ರಷ್ಯಾವು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಯತ್ನವನ್ನು ವಿಫಲಗೊಳಿಸಿದ ಬಳಿಕ, ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿ ಅಮೆರಿಕಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ ಎಂದು ಮಾಧ್ಯಮ ವರದಿ ಮಾಡಿವೆ.

ದೀರ್ಘಾವಧಿ ಪರಮಾಣು ಮಾತುಕತೆಗಳ ಮಧ್ಯೆ ಅಮೆರಿಕದ ಬೈಡನ್ ಆಡಳಿತದ ಒತ್ತಡ ಹೇರುವ ಸ್ಪಷ್ಟ ಪ್ರಯತ್ನದಲ್ಲಿ ಉತ್ತರ ಕೊರಿಯಾ ಇತ್ತೀಚೆಗೆ ತನ್ನ ಪರೀಕ್ಷಾ ಚಟುವಟಿಕೆಗಳನ್ನು ಹೆಚ್ಚಳ ಮಾಡಿದೆ.

ಅಮೆರಿಕವನ್ನು ಗುರಿಯಾಗಿಸಿಕೊಂಡು ಪರಮಾಣು ಸ್ಫೋಟಕಗಳು ಮತ್ತು ದೀರ್ಘ ಶ್ರೇಣಿಯ ಕ್ಷಿಪಣಿಗಳ ಪರೀಕ್ಷೆಯನ್ನು ಉತ್ತರ ಕೊರಿಯಾ ಪುನರಾರಂಭಿಸಿದೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ 2018ರಲ್ಲಿ ಅಮೆರಿಕ ಜತೆಗಿನ ರಾಜತಾಂತ್ರಿಕ ಮಾತುಕತೆಯನ್ನು ಕಡಿದುಕೊಂಡಿದ್ದರು.

ಇದು ಈ ತಿಂಗಳು ಉತ್ತರ ಕೊರಿಯಾ ನಡೆಸಿದ 6ನೇ ಉಡಾವಣೆಯಾಗಿದ್ದು, ಅದು ಖಂಡಾಂತರ ಕ್ಷಿಪಣಿಯೇ ಮತ್ತು ಎಷ್ಟು ದೂರ ಕ್ರಮಿಸಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿಲ್ಲ.

ಉತ್ತರ ಕೊರಿಯಾದ ಪ್ರಮುಖ ಮಿತ್ರ ಮತ್ತು ಆರ್ಥಿಕ ಜೀವನಾಡಿ ಚೀನಾದಲ್ಲಿ ಫೆ,4ರಿಂದ ಪ್ರಾರಂಭವಾಗುವ ಚಳಿಗಾಲದ ಒಲಿಂಪಿಕ್ಸ್‌ ನಂತರ ಉತ್ತರ ಕೊರಿಯಾವು ಶಸ್ತ್ರಾಸ್ತ್ರ ಪ್ರದರ್ಶನಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

Recommended Video

1921 ರಲ್ಲಿ Subhash Chandra Bose ಬರೆದ ರಾಜೀನಾಮೆ ಪತ್ರ ಸಿಕ್ಕಿದ್ದು ಹೇಗೆ? | Oneindia Kannada

ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದ ಮೇಲೆ ಅಮೆರಿಕದ ನಿರ್ಬಂಧಗಳು ಮತ್ತು ಸರ್ಕಾರದ ಅದಕ್ಷ ಆಡಳಿತದಿಂದಾಗಿ ದೇಶ ಜರ್ಜರಿತವಾಗಿದೆ. ಈ ಮಧ್ಯೆ, ಕೊರೊನಾ ಸಾಂಕ್ರಾಮಿಕ ರೋಗವು ಉತ್ತರ ಕೊರಿಯಾದ ಆರ್ಥಿಕತೆಯನ್ನು ಮತ್ತಷ್ಟು ಅಲುಗಾಡಿಸುತ್ತಿರುವುದರಿಂದ ಒತ್ತಡವು ಹೆಚ್ಚಾಗಿದೆ.

English summary
North Korea fired an "unidentified projectile" early Thursday, Seoul said, its sixth apparent weapons test this year as the nuclear-armed country flexes its military muscles and ignores Washington's offers of talks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X