ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನತ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ

|
Google Oneindia Kannada News

ಸೋಲ್, ಜೂನ್ 01: ಡೊನಾಲ್ಡ್‌ ಟ್ರಂಪ್ ಮತ್ತು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ದ್ವಿಪಕ್ಷೀಯ ಮಾತುಕತೆ ವಿಫಲವಾದ ಬೆನ್ನಲ್ಲೆ ಕೆಲವು ಉನ್ನತ ಅಧಿಕಾರಿಗೆ ಕಿಮ್ ಜಾಂಗ್ ಉನ್ ಮರಣದಂಡನೆ ವಿಧಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ಕಿಮ್ ಜಾಂಗ್ ಉನ್ ನಡುವೆ ಪರಮಾಣು ಶಕ್ತಿ ಕುರಿತಾದ ಸಭೆ ಕೆಲ ತಿಂಗಳ ಹಿಂದೆ ನಡೆದಿತ್ತು, ಆದರೆ ಈ ಸಭೆಯು ಫಲಪ್ರದವಾಗಲಿಲ್ಲ ಇದರಿಂದ ಸಿಟ್ಟಾದ ಕಿಮ್ ಜಾಂಗ್ ಉನ್ ವಿಶೇಷ ವಿದೇಶಾಂಗ ಅಧಿಕಾರಿ ಸೇರಿ ಇನ್ನೂ ಕೆಲವರಿಗೆ ಮರಣ ದಂಡನೆ ವಿಧಿಸಿದ್ದಾರೆ ಎಂದು ಉತ್ತರ ಕೊರಿಯಾದ ಪ್ರಮುಖ ಪತ್ರಿಕೆ ವರದಿ ಮಾಡಿದೆ.

ಮತ್ತೊಮ್ಮೆ ದಿಗ್ಗಜರ ಭೇಟಿ? ಟ್ರಂಪ್ ಗೆ ಕಿಮ್ ಹೊಸ ಪತ್ರ ಮತ್ತೊಮ್ಮೆ ದಿಗ್ಗಜರ ಭೇಟಿ? ಟ್ರಂಪ್ ಗೆ ಕಿಮ್ ಹೊಸ ಪತ್ರ

ಸಭೆಯು ಫೆಬ್ರವರಿಯಲ್ಲಿ ನಡೆದಿತ್ತು, ಸಭೆ ನಡೆದು ಕೆಲವೇ ದಿನಗಳಲ್ಲಿ ಕಿಮ್ ಜಾಂಗ್ ಉನ್ ವಿಶೇಷ ವಿದೇಶಾಂಗ ಅಧಿಕಾರಿ ಕಿಮ್ ಹ್ಯಾಕ್ ಚೋಲ್ ಸೇರಿ ಇನ್ನೂ ಕೆಲವು ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲಿಸಿದ್ದರು.

North Korea dictatore Kim Jang Un exicuted top official

ಅಷ್ಟೆ ಅಲ್ಲದೆ, ಶೃಂಗಸಭೆಯಲ್ಲಿ ಕಿಮ್ ಜಾಂಗ್ ಉನ್ ಅವರು ಟ್ರಂಫ್ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಸರಿಯಾಗಿ ಭಾಷಾಂತರ ಮಾಡಿಲ್ಲವೆಂಬ ಆರೋಪದಲ್ಲಿ ಶಿನ್ ಹೈ ಯೋಂಗ್ ಎಂಬ ಮಹಿಳಾ ಅಧಿಕಾರಿಯನ್ನೂ ಸಹ ಕಿಮ್ ಜಾಂಗ್ ಉನ್ ಜೈಲಿಗಟ್ಟಿದ್ದಾರೆ.

ಮಾತು ಮುರಿದರೆ ಸಮರಾಭ್ಯಾಸ ಮತ್ತೆ ಶುರು: ಉ. ಕೊರಿಯಾಗೆ ಟ್ರಂಪ್ ಎಚ್ಚರಿಕೆ ಮಾತು ಮುರಿದರೆ ಸಮರಾಭ್ಯಾಸ ಮತ್ತೆ ಶುರು: ಉ. ಕೊರಿಯಾಗೆ ಟ್ರಂಪ್ ಎಚ್ಚರಿಕೆ

ಕಿಮ್ ಜಾಂಗ್ ಉನ್ ಅವರ ಈ ನಡೆಯು ಅಮೆರಿಕಾಕ್ಕೆ ದಿಗ್ಭ್ರಮೆ ಉಂಟು ಮಾಡಿದೆ. ಈ ಬಗ್ಗೆ ಅಮೆರಿಕದ ವಿದೇಶಾಂಗ ವ್ಯವಹಾರ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ.

English summary
North Korea dictatore Kim Jang Un exicuted top officials for faling to succes the meeting between Kim Jand Un and Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X