ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾದ ಗಡಿಯಲ್ಲಿ ಕಾಣಿಸಿಕೊಂಡ ಸೋಂಕು, ಲಾಕ್ಡೌನ್ ಜಾರಿ

|
Google Oneindia Kannada News

ಕಯಿಸಾಂಗ್, ಜುಲೈ 26: ಉತ್ತರ ಹಾಗೂ ದಕ್ಷಿಣ ಕೊರಿಯಾದ ಗಡಿಭಾಗದಲ್ಲಿರುವ ಕಯಿಸಾಂಗ್(Kaesong) ಸಮೀಪ ಮತ್ತೊಮ್ಮೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದ್ದು, ತಕ್ಷಣವೇ ಆ ಪ್ರದೇಶದಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ.

Recommended Video

Indian Spy Satellite EMISAT Passes Over Tibet To Observe Chinese Army | Oneindia Kannada

ಈ ನಗರದಲ್ಲಿ ಶುಕ್ರವಾರದಂದು ವ್ಯಕ್ತಿಯೊಬ್ಬನಿಗೆ ಕೊರೊನಾವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ರೋಗದ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಶ್ವದ ಭಯಾನಕ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾವಿಶ್ವದ ಭಯಾನಕ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ

ಸರಿ ಸುಮಾರು ಮೂರು ವರ್ಷಗಳ ಹಿಂದೆ ದಕ್ಷಿಣ ಕೊರಿಯಾಕ್ಕೆ ಪರಾರಿಯಾಗಿದ್ದ ಈ ವ್ಯಕ್ತಿ ಅಕ್ರಮವಾಗಿ ಗಡಿ ದಾಟಿ ಈ ಭಾಗಕ್ಕೆ ಬಂದಿದ್ದಾನೆ ಎಂದು ತಿಳಿದು ಬಂದಿದೆ. ಈತನಿಗೆ ಇರುವ ಸೋಂಕು ದೃಢಪಟ್ಟರೆ, ಉತ್ತರ ಕೊರಿಯಾದ ಮೊದಲ ದೃಢಪಟ್ಟ ಪ್ರಕರಣ ಎಂದು ಘೋಷಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾದ ಮುಖಂಡರ ಹೇಳಿಕೆಯನ್ನು Korean Central News Agency ಕೆಸಿಎನ್ಎ ಉಲ್ಲೇಖಿಸಿದೆ.

North Korea Declares State of Emergency After First Suspected COVID-19 Case

ಚೀನಾದ ವುಹಾನ್ ಪ್ರಾಂತ್ಯದಿಂದ ಕೊರೊನಾವೈರಸ್ ಹರಡುತ್ತಿರುವ ಸುದ್ದಿ ಬರುತ್ತಿದ್ದಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರು ತಮ್ಮ ದೇಶದ ಗಡಿ ಭಾಗವನ್ನು ಬಂದ್ ಮಾಡಿಸಿದ್ದರು. ಜನವರಿ ತಿಂಗಳಿನಿಂದ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ದೇಶದೊಳಗೆ ಸೋಂಕು ಪ್ರವೇಶಿಸಿಲ್ಲ, ಹರಡಿಲ್ಲ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.

ಅಂತಾರಾಷ್ಟ್ರೀಯ ವಿಮಾನಯಾನ, ರೈಲುಮಾರ್ಗ ಬಂದ್ ಮಾಡಲಾಗಿದೆ. ಶಾಲೆ, ಕಾಲೇಜು, ಕಚೇರಿ ಇನ್ನೂ ಆರಂಭಗೊಂಡಿಲ್ಲ, ವಿದೇಶಿ ಪ್ರವಾಸಿಗರು ಕ್ವಾರಂಟೈನ್ ನಲ್ಲಿದ್ದಾರೆ

ಈ ನಡುವೆ ಉತ್ತರ ಕೊರಿಯಾದ ವಿಜ್ಞಾನ ಸಂಶೋಧನಾ ಸಮಿತಿಯು ಕೊರೊನಾವೈರಸ್ ತಡೆಗಟ್ಟಲು ಲಸಿಕೆ ಅಭಿವೃದ್ಧಿಪಡಿಸುತ್ತಿರುವುದಾಗಿ ಘೋಷಿಸಿತ್ತು. ಸದ್ಯ ಈ ಲಸಿಕೆಯು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಪಕ್ಕದ ದೇಶ ದಕ್ಷಿಣ ಕೊರಿಯಾದಲ್ಲಿ 14,150 ಪ್ರಕರಣಗಳಿದ್ದು, 298 ಮಂದಿ ಮೃತಪಟ್ಟಿದ್ದಾರೆ. ವಿಶ್ವದಲ್ಲಿ 16,202,387 ಕೊವಿಡ್ 19 ಪ್ರಕರಣಗಳಿದ್ದು,648,445 ಮಂದಿ ಮೃತರಾಗಿದ್ದಾರೆ.

English summary
North Korean authorities have imposed a lockdown in the city of Kaesong near the border with South Korea after discovering their first ‘suspected’ COVID19 case, reported news agency AFP on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X