ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕೊರಿಯಾದಿಂದ ಯಶಸ್ವೀ 'ಅಣ್ವಸ್ತ್ರ ಪರೀಕ್ಷೆ', ಬೆಚ್ಚಿಬಿದ್ದ ವಿಶ್ವ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 3: ಉತ್ತರ ಕೊರಿಯಾ ಆರನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಜಗತ್ತನ್ನೇ ತಲ್ಲಣದಲ್ಲಿ ದೂಡಿದೆ. ಈ ಬಾಂಬ್ ಹಿರೋಶೀಮಾ ಮತ್ತು ನಾಗಸಾಕಿ ಮೇಲೆ ಹಾಕಿದ ಬಾಂಬ್ ಗಿಂತ 5 ಪಟ್ಟು ಹೆಚ್ಚಿನ ತೀವ್ರತೆಯ ಬಾಂಬ್ ಎಂದು ಉತ್ತರ ಕೊರಿಯಾ ಹೇಳಿದೆ.

'ಹೈಡ್ರೋಜನ್ ಬಾಂಬ'ನ್ನು ಉತ್ತರ ಕೊರಿಯಾ ಪರೀಕ್ಷೆಗೊಳಪಡಿಸಿದ್ದು, 6ನೇ ಬಾರಿಯ 'ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿದೆ' ಎಂದು ಅಲ್ಲಿನ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ. ಹೈಡ್ರೋಜನ್ ಬಾಂಬ್ ಅಣು ಬಾಂಬಿನ ಮತ್ತೊಂದು ವಿಧವಾಗಿದೆ.

ಅಣ್ವಸ್ತ್ರ ಪರೀಕ್ಷೆಯ ಪರಿಣಾಮ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ದಾಖಲಾಗಿದ್ದನ್ನು ಅಮೆರಿಕಾದ ಭೂಗರ್ಭ ಇಲಾಖೆ (ಯುಎಸ್'ಜಿಎಸ್) ಖಚಿತ ಪಡಿಸಿತ್ತು. ಈ ಭೂಕಂಪದ ಬೆನ್ನಿಗೆ ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಅಣ್ವಸ್ತ್ರ ಪರೀಕ್ಷೆಯ ಅನುಮಾನ ವ್ಯಕ್ತಪಡಿಸಿದ್ದವು. ಇದೀಗ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆಯನ್ನು ಖಚಿತಪಡಿಸಿದೆ.

ಖಂಡಾಂತರ ಕ್ಷಿಪಣಿಗೆ ಅಣ್ವಸ್ತ್ರ ಜೋಡಣೆ

ಖಂಡಾಂತರ ಕ್ಷಿಪಣಿಗೆ ಅಣ್ವಸ್ತ್ರ ಜೋಡಣೆ

ಈ ಅಣ್ವಸ್ತ್ರವನ್ನು ಖಂಡಾಂತರ ಕ್ಷಿಪಣಿಗೂ ಜೋಡಿಸಲು ಸಾಧ್ಯವಿದೆ ಎಂದು ಉತ್ತರ ಕೊರಿಯಾ ಪ್ರತಿಪಾದಿಸಿದ್ದು ಪಕ್ಕದ ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳನ್ನು ನಡುಗುವಂತೆ ಮಾಡಿದೆ. ಇತ್ತೀಚೆಗಷ್ಟೇ ಜಪಾನ್ ಕೊರಿಯಾದ ಮೇಲಿಂದ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಶ್ವಸಂಸ್ಥೆ ಒಪ್ಪಂದ ಉಲ್ಲಂಘಿಸಿದ ಕೊರಿಯಾ

ವಿಶ್ವಸಂಸ್ಥೆ ಒಪ್ಪಂದ ಉಲ್ಲಂಘಿಸಿದ ಕೊರಿಯಾ

ವಿಶ್ವಸಂಸ್ಥೆಯ ಒಪ್ಪಂದಗಳನ್ನು ಉಲ್ಲಂಘಿಸಿ ಉತ್ತರ ಕೊರಿಯಾ ಬಾಂಬ್ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯೊಂದಿಗೆ ಅಮೆರಿಕಾ ಮತ್ತು ಉತ್ತರ ಕೊರಿಯಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದೆ.

ಹಲವು ದೇಶಗಳಿಂದ ಖಂಡನೆ

ಹಲವು ದೇಶಗಳಿಂದ ಖಂಡನೆ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಉನ್ ಜಾಂಗ್ ನಡೆಗೆ ಪಕ್ಕದ ಜಪಾನ್ ಮತ್ತು ದಕ್ಷಿಣ ಕೊರಿಯಾ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲದೆ ತುರ್ತಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡುವಂತೆ ಒತ್ತಾಯಿಸಿವೆ.

ಇನ್ನು ಚೀನಾ, ಫ್ರಾನ್ಸ್, ರಷ್ಯಾ, ನ್ಯೂಜಿಲ್ಯಾಂಡ್ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಹಲವು ದೇಶಗಳು ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಯನ್ನು ಕಟುವಾಗಿ ಖಂಡಿಸಿವೆ.

ಹಿಂದಿನ ಐದು ಪರೀಕ್ಷೆಗಳು

ಹಿಂದಿನ ಐದು ಪರೀಕ್ಷೆಗಳು

ಅಕ್ಟೋಬರ್ 2006 - ಮೊದಲ ಅಣ್ವಸ್ತ್ರ ಪರೀಕ್ಷೆ ನಡೆದಿತ್ತು. ಅವತ್ತು 4.2 ತೀವ್ರತೆಯ ಭೂಕಂಪ ನಡೆದಿತ್ತು.

ಇದಾದ ನಂತರ 2009ರ ಮೇ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ 4.7 ತೀವ್ರತೆಯ ಭೂಕಂಪ, 2013ರ ಫೆಬ್ರವರಿಯಲ್ಲಿ 4.7 ಮತ್ತು 5.2ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ನಂತರ 2016 ಜನವರಿ ಮತ್ತು ಸೆಪ್ಟಂಬರ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಾಗ ಕ್ರಮವಾಗಿ 5.1 ಮತ್ತು 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇದೀಗ ಆರನೇ ಬಾರಿಗೆ ಪರೀಕ್ಷೆ ನಡೆಸಲಾಗಿದ್ದು 6.3 ತೀವ್ರತೆಯ ಭೂಕಂಪ ಸಂಭವಿಸಿದೆ.

English summary
North Korea carry out a sixth nuclear test today, with seismic monitors measuring an "explosion" of 6.3 magnitude near its main test site, sending tensions over its weapons ambitions to new heights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X