ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಪ್ರಶಸ್ತಿ ವಿಜೇತ ವಿಎಸ್ ನೈಪಾಲ್ ವಿಧಿವಶ

By Mahesh
|
Google Oneindia Kannada News

ಲಂಡನ್, ಆಗಸ್ಟ್ 12: ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ವಿಎಸ್ ನೈಪಾಲ್ ಅವರು ಶನಿವಾರದಂದು ಕೊನೆಯುಸಿರೆಳೆದಿದ್ದಾರೆ ಎಂದು ಬ್ರಿಟಿಷ್ ಪ್ರೆಸ್ ಅಸೋಸಿಯೇಷನ್ ಗೆ ನೈಪಾಲ್ ಅವರ ಪತ್ನಿ ಮಾಹಿತಿ ನೀಡಿದ್ದಾರೆ. ನೈಪಾಲ್ ಅವರಿಗೆ 85 ವರ್ಷ ವಯಸ್ಸಾಗಿತ್ತು.

2001ರಲ್ಲಿ 1ಮಿಲಿಯನ್ ಡಾಲರ್ ಮೊತ್ತದ ನೊಬೆಲ್ ಸಾಹಿತ್ಯ ಪಾರಿತೋಷಕವನ್ನು ಪಡೆದಿದ್ದ ಟ್ರಿನಿಡಾಡ್ ಸಂಜಾತ ನೈಪಾಲ್ ಅವರು, 1971ರಲ್ಲಿ ಬೂಕರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. 1990ರಲ್ಲಿ ಕ್ವೀನ್ ಎಲಿಜಬೆತ್ ಅವರು ನೈಪಾಲ್ ಅವರಿಗೆ 'ನೈಟ್ ಹುಡ್' ಗೌರವ ನೀಡಿದ್ದರು.

Nobel Prize-winning novelist V.S. Naipaul dies at 85

ಬೆಂಡ್ ಇನ್ ದಿ ರಿವರ್, ಎ ಹೌಸ್ ಆಫ್ ಮಿ. ಬಿಸ್ವಾಸ್ ಸೇರಿದಂತೆ 30ಕ್ಕೂ ಅಧಿಕ ಕೃತಿಗಳನ್ನು ಹೊರತಂದಿತ್ತರು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸ್ಕಾಲರ್ ಶಿಪ್ ಪಡೆದು ಇಂಗ್ಲೀಷ್ ಸಾಹಿತ್ಯ ಅಧ್ಯಯನ ಮಾಡಿದರು.

1966ರಲ್ಲಿ ಮೊದಲ ಪತ್ನಿ ಪ್ಯಾಟ್ ನಿಧನರಾದ ಬಳಿಕ ಪಾಕಿಸ್ತಾನಿ ಪತ್ರಕರ್ತ್ ನಾದಿರಾ ಅವರನ್ನು ಮದುವೆಯಾದರು. ಭಾರತದ ರಾಜಕೀಯ, ಭ್ರಷ್ಟಾಚಾರ, ಸಾಮ್ರಾಜ್ಯ ಶಾಹಿ ಬಗ್ಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಇರುವ ಅಭಿಪ್ರಾಯಗಳನ್ನು ತಮ್ಮ ಕೃತಿಗಳ ಮೂಲಕ ಪರಿಚಯಿಸಿದರು.

English summary
Nobel Prize-winning novelist V.S. Naipaul, who was born in Trinidad but lived most of his life in England, died in his London home Saturday, Britain's Press Association reported, citing Naipaul's wife. He was 85.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X