ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಘೋಷಣೆ

|
Google Oneindia Kannada News

ಸ್ಟಾಕ್‌ಹೋಮ್, ಅಕ್ಟೋಬರ್ 5: ಅಮೆರಿಕದ ಹಾರ್ವಿ ಜೆ ಅಲ್ಟರ್ ಮತ್ತು ಚಾರ್ಲ್ಸ್ ಎಂ ರೈಸ್ ಹಾಗೂ ಬ್ರಿಟಿಷ್ ವಿಜ್ಞಾನಿ ಮಿಖಾಯಲ್ ಹೌಟನ್ ಅವರಿಗೆ ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್ (ಫಿಸಿಯಾಲಜಿ) ಪುರಸ್ಕಾರ ಒಲಿದಿದೆ. ಹೆಪಟೈಟಿಸ್ ಸಿ ವೈರಸ್‌ನ ಪತ್ತೆಯಲ್ಲಿ ನಡೆಸಿದ ಮಹತ್ವದ ಸಂಶೋಧನೆಗಾಗಿ ಈ ಮೂವರಿಗೆ ನೊಬೆಲ್ ಗೌರವ ಸಿಕ್ಕಿದೆ.

ಸ್ಟಾಕ್‌ ಹೋಮ್‌ನಲ್ಲಿ ಸೋಮವಾರ ನೊಬೆಲ್ ಪುರಸ್ಕಾರ ಪ್ರಕಟಿಸಿದ ನೊಬೆಲ್ ಸಮಿತಿ, ಈ ಮೂವರು ವಿಜ್ಞಾನಗಳ ಕಾರ್ಯವು ಹೆಪಟೈಟಿಸ್ ಎ ಮತ್ತು ಹೆಪಟೈಟಿಸ್ ಬಿ ಯಿಂದ ವಿವರಿಸಲು ಸಾಧ್ಯವಾಗದ ರಕ್ತದಲ್ಲಿ ಜನಿಸುವ ಹೆಪಟೈಟಿಸ್‌ನ ಪ್ರಮುಖ ಮೂಲವನ್ನು ವಿವರಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದೆ.

ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸು!

ರಕ್ತ ಪರೀಕ್ಷೆ ಹಾಗೂ ಹೊಸ ಔಷಧಗಳು ಲಕ್ಷಾಂತರ ಜೀವಗಳನ್ನು ಉಳಿಸಲು ಅವರ ಸಂಶೋಧನೆ ನೆರವಾಗಿದೆ ಎಂದು ಸಮಿತಿ ತಿಳಿಸಿದೆ.

Nobel Prize In Physiology Or Medicine 2020 Jointly Awarded To Harvey J Alter, Michael Houghton, Charles M Rice

'ಅವರ ಆವಿಷ್ಕಾರಕ್ಕೆ ಧನ್ಯವಾದಗಳು. ಈಗ ವೈರಸ್‌ಗಳಿಗೆ ಅಧಿಕ ಸಂವೇದನಾಶೀಲ ರಕ್ತ ಪರೀಕ್ಷೆಗಳು ಲಭ್ಯವಾಗಿವೆ ಮತ್ತು ಇವುಗಳು ಜಗತ್ತಿನ ಅನೇಕ ಭಾಗಗಳಲ್ಲಿ ಹೆಪಟೈಟಿಸ್ ಪೂರ್ವದ ವರ್ಗಾವಣೆಗಳನ್ನು ನಿರ್ಮೂಲನೆ ಮಾಡಲು ಬಹಳ ಅಗತ್ಯವಾಗಿವೆ. ಇದರಿಂದ ಜಾಗತಿಕ ಆರೋಗ್ಯ ದೊಡ್ಡ ಮಟ್ಟದಲ್ಲಿ ಸುಧಾರಿಸಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಅವರ ಆವಿಷ್ಕಾರದಿಂದ ಹೆಪಟೈಟಿಸ್‌ ಸಿ-ಗೆ ಅಗತ್ಯವಾದ ಆಂಟಿ ವೈರಲ್ ಔಷಧದ ತ್ವರಿತ ಅಭಿವೃದ್ಧಿಗೆ ಅವಕಾಶ ನೀಡಿತ್ತು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಾಗಿದೆ. ಇದರಿಂದ ಜಾಗತಿಕ ಜನಸಂಖ್ಯೆಯಲ್ಲಿನ ಹೆಪಟೈಟಿಸ್ ಸಿ ವೈರಸ್ ಅನ್ನು ನಿರ್ಮೂಲನೆ ಮಾಡುವ ಭರವಸೆಯನ್ನು ಹೆಚ್ಚಿಸಿದೆ.

ಭಾರತೀಯ ಉಡುಗೆಯಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಬ್ಯಾನರ್ಜಿ!ಭಾರತೀಯ ಉಡುಗೆಯಲ್ಲಿ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಬ್ಯಾನರ್ಜಿ!

ಪ್ರತಿಷ್ಟಿತ ನೊಬೆಲ್ ಪುರಸ್ಕಾರವು ಚಿನ್ನದ ಪದಕ ಮತ್ತು 10 ಮಿಲಿಯನ್ ಸ್ವೀಡಿಶ್ ಕ್ರೋನೊರ್ (1,118,000 ಡಾಲರ್) ಬಹುಮಾನದ ಹಣವನ್ನು ಹೊಂದಿರಲಿದೆ.

ಜಗತ್ತಿನಾದ್ಯಂತ 70 ಮಿಲಿಯನ್‌ಗೂ ಅಧಿಕ ಹೆಪಟೈಟಿಸ್ ಪ್ರಕರಣಗಳಿದ್ದು, ಪ್ರತಿ ವರ್ಷ ಈ ಸಮಸ್ಯೆಯಿಂದಾಗಿ 4,00,000 ಮಂದಿ ಸಾಯುತ್ತಿದ್ದಾರೆ. ದೀರ್ಘಾವಧಿಯ ಕಾಯುಲೆಯು ಯಕೃತ್ತಿನ ಉರಿಯೂತ ಹಾಗೂ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ.

English summary
Nobel Prize in Physiology or Medicine 2020 jointly awarded to Harvey J Alter, Michael Houghton, Charles M Rice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X