ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟ

|
Google Oneindia Kannada News

ಸ್ಟಾಕ್ ಹೋಮ್, ಅಕ್ಟೋಬರ್ 6: ಕಪ್ಪು ರಂದ್ರದ ಕುರಿತಾದ ಮಹತ್ವದ ಸಂಶೋಧನೆ ನಡೆಸಿದ ಮೂವರು ವಿಜ್ಞಾನಿಗಳಿಗೆ ಪ್ರಸಕ್ತ ಸಾಲಿನ ಭೌತಶಾಸ್ತ್ರ ನೊಬೆಲ್ ಪುರಸ್ಕಾರ ಲಭಿಸಿದೆ.

ವಿಜ್ಞಾನಿಗಳಾದ ರೋಜರ್ ಪೆನ್ರೋಸ್, ರೀನ್‌ಹಾರ್ಡ್ ಗೆನ್ಸಲ್ ಮತ್ತು ಆಂಡ್ರಿಯಾ ಘೆಜ್ ಅವರು 2020ರ ಭೌತಶಾಸ್ತ್ರ ನೊಬೆಲ್‌ಗೆ ಜಂಟಿಯಾಗಿ ಆಯ್ಕೆಯಾಗಿದ್ದಾರೆ ಎಂದು ಸ್ಟಾಕ್‌ಹೋಮ್‌ನಲ್ಲಿರುವ ನೊಬೆಲ್ ಸಮಿತಿ ತಿಳಿಸಿದೆ.

ಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಘೋಷಣೆಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಘೋಷಣೆ

ಕಪ್ಪುಕುಳಿಗಳ ಅಸ್ತಿತ್ವವನ್ನು ಸ್ವತಃ ಐನ್‌ಸ್ಟೀನ್ ಸಹ ನಂಬಿರಲಿಲ್ಲ. ಬೃಹತ್ ಮತ್ತು ಪ್ರಬಲವಾದ ಕಪ್ಪು ಕುಳಿಗಳು ಅದರತ್ತ ಸಾಗುವ ಎಲ್ಲವನ್ನು ಸಹ ಸೆಳೆದುಕೊಂಡು ಬಿಡುತ್ತವೆ. ಬೆಳಕು ಸಹ ಕಪ್ಪು ಕುಳಿಯಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಈ ಕಪ್ಪುಕುಳಿಗಳು ನಿಜಕ್ಕೂ ಸೃಷ್ಟಿಯಾಗಿರಬಹುದು ಎಂದು 1965ರಲ್ಲಿ ನಿರೂಪಿಸಿದ್ದ ರೋಜರ್, ಅದರ ಬಗ್ಗೆ ವಿವರಣೆ ನೀಡಿದ್ದರು.

Nobel Prize In Physics 2020 Awarded To Roger Penrose, Reinhard Genzal, Andrea Ghez

ಕಪ್ಪುಕುಳಿಗಳು ಆಲ್ಬರ್ಟ್ ಐನ್‌ಸ್ಟೀನ್ ಅವರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಫಲಿತಾಂಶವನ್ನು ತಿಳಿಯಲು ಗಣಿತದ ವಿಧಾನವನ್ನು ರೋಜರ್ ಪೆನ್ರೋಸ್ ಸಿದ್ಧಪಡಿಸಿದ್ದರು. ಇದಕ್ಕಾಗಿ ಪ್ರಶಸ್ತಿಯ ಅರ್ಧಭಾಗವನ್ನು ಪೆನ್ರೋಸ್ ಅವರಿಗೆ ನೀಡಲಾಗುತ್ತದೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ತಿಳಿಸಿದೆ.

Recommended Video

Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

ಜರ್ಮನಿಯ ವಿಜ್ಞಾನಿ ರೀನ್ ಹಾರ್ಡ್ ಗೆನ್ಸಲ್ ಮತ್ತು ಅಮೆರಿಕದ ಆಂಡ್ರಿಯಾ ಘೆಜ್ ಪ್ರಶಸ್ತಿಯ ಎರಡನೆಯ ಅರ್ಧವನ್ನು ಪಡೆದುಕೊಳ್ಳಲಿದ್ದಾರೆ. ನಮ್ಮ ಗ್ಯಾಲಕ್ಸಿಯ ಕೇಂದ್ರ ಭಾಗದಲ್ಲಿ ಬೃಹತ್ ಘನ ವಸ್ತುವೊಂದನ್ನು ಸಂಶೋಧಿಸಿದ್ದಕ್ಕಾಗಿ ಅವರಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

English summary
Nobel Prize for Physics 2020 jointly awarded to Roger Penrose, Reinhard Genzal, Andrea Ghez.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X