• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪುರಸ್ಕಾರ

|

ವಾಷಿಂಗ್ಟನ್,ಅಕ್ಟೋಬರ್ 08: ಅಮೆರಿಕದ ಖ್ಯಾತ ಕವಯಿತ್ರಿ ಲೂಯಿಸ್ ಗ್ಲುಕ್ ಅವರಿಗೆ 2020ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪುರಸ್ಕಾರ ಗುರುವಾರ (ಅಕ್ಟೋಬರ್ 08, 2020) ಘೋಷಿಸಲಾಗಿದೆ. ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಜಗತ್ತಿನ ಶ್ರೇಷ್ಠ ಸಾಹಿತಿಗೆ ಪ್ರತಿ ವರ್ಷ ನೀಡಲಾಗುತ್ತದೆ.

1943ರಲ್ಲಿ ಲೂಯಿಸ್ ಗ್ಲುಕ್ ನ್ಯೂಯಾರ್ಕ್ ನಲ್ಲಿ ಜನಿಸಿದ್ದರು.ಮೆಸಾಚುಸೆಟ್ಸ್ ನ ಕೇಂಬ್ರಿಡ್ಜ್ ನಲ್ಲಿ ಲೂಯಿಸ್ ವಾಸವಾಗಿದ್ದಾರೆ. ಸ್ವೀಡಿಶ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲಮ್ ಈ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟ

ಅಮೆರಿಕದ ಯೇಲ್ ಯೂನಿರ್ವಸಿಟಿಯಲ್ಲಿ ಆಂಗ್ಲ ಪ್ರೊಫೆಸರ್ ಆಗಿ ಲೂಯಿಸ್ ಕಾರ್ಯನಿರ್ವಹಿಸುತ್ತಿದ್ದಾರೆ. 1968ರಲ್ಲಿ ಫಸ್ಟ್ ಬಾರ್ನ್ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ಆಸ್ಟ್ರಿಯಾದ ಕಾದಂಬರಿಕಾರ ಪೀಟರ್​ ಹ್ಯಾಂಡ್ಕೆ ಅವರಿಗೆ ಸಾಹಿತ್ಯ ನೊಬೆಲ್​ ಪ್ರಶಸ್ತಿ ಸಿಕ್ಕಿದ್ದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದರು.

ಸರ್ಬಿಯನ್​ ನಾಯಕರು ಮತ್ತು ಸ್ಲೊಬೊಡಾನ್​ ಮಿಲೋಸೆವಿಕ್​ ಅವರ ಸೈನ್ಯದ ದೌರ್ಜನ್ಯವನ್ನು ಬೆಂಬಲಸುವವರಿಗೆ ಹೇಗೆ ಪ್ರಶಸ್ತಿ ನೀಡಲಾಯಿತು ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಪ್ರತಿಕ್ರಿಯಿಸಿದ ಸ್ವೀಡಿಷ್​ ಅಕಾಡೆಮಿ, ನಾವು ಕೇವಲ ಅವರ ಸಾಹಿತ್ಯ ನೋಡಿ ಈ ಪ್ರಶಸ್ತಿ ನೀಡಿರುವುದು ಎಂದು ಸಮರ್ಥನೆ ನೀಡಿತ್ತು.

ಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಘೋಷಣೆಮೂವರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಘೋಷಣೆ

ಈಗಾಗಲೇ ವೈದ್ಯಕೀಯ, ಭೌತವಿಜ್ಞಾನ, ರಾಸಾಯನಿಕ ವಿಜ್ಞಾನದಲ್ಲಿ ನೊಬೆಲ್​ ಪ್ರಶಸ್ತಿ ಘೋಷಿಸಲಾಗಿದೆ. ಇನ್ನು ಶಾಂತಿ ಮತ್ತು ಆರ್ಥಿಕತೆ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಬಗ್ಗೆ ಇನ್ನು ಪ್ರಕಟವಾಗಿಲ್ಲ.

   America ಅಲ್ಲಿ ಕೊರೋನ ನಿಯಂತ್ರಣ ಮಾಡೋದ್ರಲ್ಲಿ ನೀವು ಸೋತ್ರಿ | Oneindia Kannada

   ಅಮೆರಿಕದ ಸಮಕಾಲೀನ ಸಾಹಿತ್ಯದಲ್ಲಿನ ಪ್ರಮುಖ ಕವಿಗಳಲ್ಲಿ ಲೂಯಿಸ್ ಕೂಡಾ ಒಬ್ಬರಾಗಿದ್ದಾರೆ. ಲೂಯಿಸ್ 1993ರಲ್ಲಿ ಪುಲಿಟ್ಜೆರ್ ಪ್ರಶಸ್ತಿ, 2014ರಲ್ಲಿ ನ್ಯಾಷನಲ್ ಬುಕ್ ಅವಾರ್ಡ್ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

   English summary
   The 2020 Nobel Prize in Literature was awarded to the American poet Louise Glück “for her unmistakable poetic voice that with austere beauty makes individual existence universal”. The American poet Louise Glück was born in 1943 in New York and lives in Cambridge, Massachusetts.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X