ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಥಶಾಸ್ತ್ರ ನೊಬೆಲ್: ಅಮೆರಿಕದ ಪಾಲ್, ರಾಬರ್ಟ್ ವಿಜೇತರು

|
Google Oneindia Kannada News

ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರು 2020 ರ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಹರಾಜು ಸಿದ್ಧಾಂತ (auction theory) ಅಥವಾ ಹರಾಜು ಸಿದ್ಧಾಂತದಲ್ಲಿನ ಹೊಸ ಬದಲಾವಣೆಗಳಿಗಾಗಿ ಮತ್ತು ಹೊಸ ಹರಾಜು ಸ್ವರೂಪಗಳನ್ನು ರಚಿಸುವುದಕ್ಕಾಗಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸ್ಟಾಕ್ ಹೋಮ್ ಮೂಲದ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋರಾನ್ ಹಾನ್ಸನ್ ಅವರು ಸೋಮವಾರದಂದು ಪುರಸ್ಕಾರ ವಿಜೇತರ ಹೆಸರನ್ನು ಪ್ರಕಟಿಸಿದೆ.

2ನೇ ವಿಶ್ವಯುದ್ಧ ನಂತರ ಜಾಗತಕವಾಗಿ ಆರ್ಥಿಕ ಕುಸಿತವನ್ನು ಕಾಣಲಾಗಿದೆ. ಕೊವಿಡ್ 19 ನಿಯಂತ್ರಣಕ್ಕಾಗಿ ಲಾಕ್ಡೌನ್ ನಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಗಾಗಿ ಪಾಲ್ ಆರ್. ಮಿಲ್ಗ್ರೋಮ್ ಮತ್ತು ರಾಬರ್ಟ್ ಬಿ. ವಿಲ್ಸನ್ ಹೊಸ ಹರಾಜು ಸ್ವರೂಪವನ್ನು ಮುಂದಿಟ್ಟಿದ್ದನ್ನು ಇಲ್ಲಿ ಸ್ಮರಿಸಲಾಗಿದೆ.

ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪುರಸ್ಕಾರದ ಗೌರವವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪುರಸ್ಕಾರದ ಗೌರವ

ಆಲ್ಫ್ರೆಡ್ ನೊಬೆಲ್ ಅವರ ಸ್ಮರಣೆಯಲ್ಲಿ ಆರ್ಥಿಕ ವಿಜ್ಞಾನದಲ್ಲಿ ರಿಕ್ಸ್‌ಬ್ಯಾಂಕ್ ಪ್ರಶಸ್ತಿಯನ್ನು ಸ್ವೀಕರಿಸಲಾಗುತ್ತಿದೆ. ಈ ಪ್ರಶಸ್ತಿಯನ್ನು 1969 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಇದನ್ನು 51 ಬಾರಿ ನೀಡಲಾಗಿದೆ.

Nobel Prize in Economics 2020 awarded to R Milgrom and Robert B. Wilson for auction theory work

ಕಳೆದ ಬಾರಿ ಜಾಗತಿಕ ಬಡತನದ ಬಗ್ಗೆ ಸಂಶೋಧನೆ ಮಾಡಿದ್ದ ಮ್ಯಾಚಾಸ್ಯುಸೆಟ್ಸ್ ವಿವಿಯ ಇಬ್ಬರು ಹಾಗೂ ಹಾರ್ವಡ್ ವಿವಿಯ ಮೂವರಿಗೆ ಲಭಿಸಿತ್ತು.

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟ

ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಇದನ್ನು ಸ್ವೀಕರಿಸುವವರಿಗೆ ಚಿನ್ನದ ಪದಕ, ಒಂದು ಕೋಟಿ ಸ್ವೀಡಿಷ್ ಕ್ರೋನಾ (1.1 ಮಿಲಿಯನ್ ಯುಎಸ್ ಡಾಲರ್) ನೀಡಲಾಗುತ್ತದೆ. ಆರ್ಥಿಕತೆಗಾಗಿ 2019 ರ ನೊಬೆಲ್ ಪ್ರಶಸ್ತಿಯನ್ನು ಭಾರತೀಯ ಮೂಲದ ಅಭಿಜೀತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಮತ್ತು ಹಾರ್ವರ್ಡ್ ಪ್ರಾಧ್ಯಾಪಕ ಮೈಕೆಲ್ ಕ್ರಾಮರ್ ಅವರಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The 2020 Sveriges Riksbank Prize in Economic Sciences in Memory of Alfred Nobel has been awarded to Paul R. Milgrom and Robert B. Wilson “for improvements to auction theory and inventions of new auction formats
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X