• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Nobel Prize in Chemistry : ಮೂವರಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 5: ರಸಾಯನಶಾಸ್ತ್ರದಲ್ಲಿ ಈ ವರ್ಷದ ನೊಬೆಲ್ ಪ್ರಶಸ್ತಿಯನ್ನು ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್ಲೆಸ್ ಅವರಿಗೆ ಅಣುಗಳನ್ನು ಒಟ್ಟಿಗೆ ಜೋಡಣೆ ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ನೀಡಲಾಗಿದೆ.

ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾನ್ಸ್ ಎಲೆಗ್ರೆನ್ ಅವರು ಬುಧವಾರ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿರುವ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿ ವಿಜೇತರನ್ನು ಘೋಷಿಸಿದರು. ನಿಯಾಂಡರ್ತಲ್ ಡಿಎನ್‌ಎ ರಹಸ್ಯಗಳನ್ನು ಬಹಿರಂಗ ಮಾಡಿದ ವಿಜ್ಞಾನಿಯನ್ನು ಗೌರವಿಸುವ ವೈದ್ಯಕೀಯ ಪ್ರಶಸ್ತಿಯೊಂದಿಗೆ ಒಂದು ವಾರದ ನೊಬೆಲ್ ಪ್ರಶಸ್ತಿ ಘೋಷಣೆಗಳು ಸೋಮವಾರ ಪ್ರಾರಂಭವಾದವು. ಚಿಕ್ಕ ಕಣಗಳು ಬೇರ್ಪಟ್ಟರೂ ಪರಸ್ಪರ ಸಂಪರ್ಕವನ್ನು ಉಳಿಸಿಕೊಳ್ಳಬಲ್ಲವು ಎಂಬುದನ್ನು ತೋರಿಸಿಕೊಟ್ಟ ಮೂವರು ವಿಜ್ಞಾನಿಗಳು ಮಂಗಳವಾರ ಭೌತಶಾಸ್ತ್ರದಲ್ಲಿ ಜಂಟಿಯಾಗಿ ಬಹುಮಾನವನ್ನು ಗೆದ್ದಿದ್ದಾರೆ.

ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊರಿಗೆ 2022ನೇ ಸಾಲಿನ ನೊಬೆಲ್ ಪ್ರಶಸ್ತಿಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊರಿಗೆ 2022ನೇ ಸಾಲಿನ ನೊಬೆಲ್ ಪ್ರಶಸ್ತಿ

2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಅಕ್ಟೋಬರ್ 10ರಂದು ಪ್ರಕಟಿಸಲಾಗುತ್ತದೆ. ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ 2022ರ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಕ್ಯಾರೊಲಿನ್ ಆರ್. ಬರ್ಟೊಝಿ, ಮಾರ್ಟೆನ್ ಮೆಲ್ಡಾಲ್ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಅವರಿಗೆ "ಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿ ಅಭಿವೃದ್ಧಿಗಾಗಿ" ನೀಡಲು ನಿರ್ಧರಿಸಿದೆ ಎಂದು ಟ್ವೀಟ್‌ ಮಾಡಿದೆ.

Nobel Prize in Chemistry for three Scientists

"ಕಳೆದ 25 ವರ್ಷಗಳಲ್ಲಿ ನನ್ನ ಪ್ರಯೋಗಾಲಯದಿಂದ ಹಲವಾರು ತರಬೇತಿ ಪಡೆದವರು ಮಾಡಿದ ಎಲ್ಲಾ ಕೆಲಸಗಳನ್ನು ಗುರುತಿಸಲು ಮತ್ತು ನಾನು ಎಷ್ಟು ಅದೃಷ್ಟಶಾಲಿಯಾಗಿದ್ದೇನೆ ಎಂಬುದನ್ನು ಪ್ರತಿಬಿಂಬಿಸಲು ಮತ್ತು ಅವರೊಂದಿಗೆ ಆಚರಣೆಯಲ್ಲಿ ಪಾಲ್ಗೊಳ್ಳಲು ಇದು ನನಗೆ ಒಂದು ಅವಕಾಶವಾಗಿದೆ ಎಂದು ಕ್ಯಾರೊಲಿನ್ ಆರ್. ಬರ್ಟೊಝಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ ಮಕ್ಕಳಿಗಾಗಿ ನೋಬಲ್‌ ಪಾರಿತೋಷಕ ಮಾರಿದ ಪತ್ರಕರ್ತಉಕ್ರೇನ್‌ ಮಕ್ಕಳಿಗಾಗಿ ನೋಬಲ್‌ ಪಾರಿತೋಷಕ ಮಾರಿದ ಪತ್ರಕರ್ತ

English summary
This year's Nobel Prize in Chemistry goes to Carolyn R. Bertozzi, Maarten Meldal and K. Barry Sharpless is credited with linking molecules together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X