• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ

|

ಸ್ಟಾಕ್‌ಹೋಮ್, ಅಕ್ಟೋಬರ್ 10: ರಸಾಯನ ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ಗುರುವಾರ ಪ್ರಕಟಿಸಲಾಗಿದೆ.

ಸ್ವೀಡನ್‌ನ ರಾಯಲ್ ಸ್ಟೀಡಿಶ್ ಅಕಾಡೆಮಿ ಆಫ್ ಸೈನ್ಸನ್ 2019ನೇ ಸಾಲಿನ ರಸಾಯನ ವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರಕ್ಕೆ ಲೀಥಿಯಂ-ಇಯಾನ್ ಬ್ಯಾಟರಿಗಳ ಸಂಶೋಧನೆಯಲ್ಲಿ ಸಾಧನೆ ಮಾಡಿದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿರುವ ಜರ್ಮನಿ ಮೂಲದ ಜಾನ್ ಬಿ. ಗುಡೆನೊ, ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿರುವ ಇಂಗ್ಲೆಂಡ್‌ನ ಎಂ. ಸ್ಟ್ಯಾನ್ಲಿ ವಿಟ್ಟಿಂಗ್‌ಹ್ಯಾಮ್ ಮತ್ತು ಮೀಜೋ ವಿಶ್ವವಿದ್ಯಾಲಯದ ಪ್ರೊಫೆಸರ್ ಅಕಿರಾ ಯೋಶಿನೋ ಅವರನ್ನು ಆಯ್ಕೆ ಮಾಡಲಾಗಿದೆ.

ಲೀಥಿಯಂ-ಇಯಾನ್ ಬ್ಯಾಟರಿಗಳು ತಂತ್ರಜ್ಞಾನ ಜಗತ್ತಿನಲ್ಲಿ ಕ್ರಾಂತಿಯುಂಟುಮಾಡಿವೆ. ಈ ಬಗೆಯ ಬ್ಯಾಟರಿಗಳು ದೈನಂದಿನ ಬಳಕೆಯಲ್ಲಿರುವ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಿಕ್ ವಾಹನಗಳಲ್ಲಿ ಕೂಡ ಬಳಕೆಯಾಗುತ್ತಿವೆ.

ಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವ

'ತಮ್ಮ ಕಾರ್ಯದ ಮೂಲಕ ಪ್ರಸಕ್ತ ಸಾಲಿನ ರಾಸಾಯನ ವಿಜ್ಞಾನ ನೊಬೆಲ್ ಪುರಸ್ಕೃತರು ತಂತಿರಹಿತ ಮತ್ತು ಪಳೆಯುಳಿಕೆ ಇಂಧನ ಮುಕ್ತ ಸಮಾಜಕ್ಕೆ ಬುನಾದಿ ಹಾಕಿದ್ದಾರೆ' ಎಂದು ನೊಬೆಲ್ ಪ್ರತಿಷ್ಠಾನ ಹೇಳಿದೆ.

ಸಾಹಿತ್ಯ ನೊಬೆಲ್ ಪ್ರಕಟ

2018 ಮತ್ತು 2019ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಕೂಡ ಗುರುವಾರ ಘೋಷಣೆ ಮಾಡಲಾಗಿದೆ. 2018ನೇ ಸಾಲಿನ ಸಾಹಿತ್ಯ ನೊಬೆಲ್‌ಅನ್ನು ಪೊಲ್ಯಾಂಡ್‌ನ ಲೇಖಕಿ ಓಲ್ಗಾ ಟೊಕರ್ಕುಜ್ ಅವರಿಗೆ ನೀಡಲಾಗಿದೆ. 2019ನೇ ಸಾಲಿನ ಸಾಹಿತ್ಯ ಪುರಸ್ಕಾರ ಆಸ್ಟ್ರಿಯಾದ ಲೇಖಕ ಪೀಟರ್ ಹಂಡ್ಕೆ ಅವರಿಗೆ ಒಲಿದಿದೆ.

2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಚೆಫ್ ಜೋಸ್ ಆಂಡ್ರಸ್ ಆಯ್ಕೆ

2018ರಲ್ಲಿ ಸ್ವೀಡಿಶ್ ಅಕಾಡೆಮಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿದ್ದರಿಂದ ಸಾಹಿತ್ಯದ ನೊಬೆಲ್ ಪ್ರಕಟಗೊಂಡಿರಲಿಲ್ಲ.

English summary
The Nobel foundation has announced prizes for nobel in Chemistry of 2019 and nobel in literature for 2018 and 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X