ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಾಯನ ಶಾಸ್ತ್ರದ 3 ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ

By Vanitha
|
Google Oneindia Kannada News

ಲಂಡನ್, ಅಕ್ಟೋಬರ್, 07 : ಲಂಡನ್ನಿನ ಡಾ.ಥಾಮಸ್ ಲಿಂಡಾಲ್, ಪೌಲ್ ಎಲ್ ಮಾಡ್ರಿಚ್ ಮತ್ತು ಅಜಿಜ್ ಸ್ಯಾನ್ ಕರ್ ಅವರಿಗೆ ರಾಸಾಯನಿಕ ಶಾಸ್ತ್ರದ (ಡಿಎನ್ ಎ ಬಂಧ) ಕುರಿತಾಗಿ ವಿಭಿನ್ನ ಸಂಶೋಧನೆ ಕೈಗೊಂಡ ಕಾರಣ 2015ನೇ ಸಾಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ.

ಲಂಡನ್ನಿನ ಫ್ರಾನ್ಸಿಸ್ ಕ್ರಿಕ್ ಇನ್ ಸ್ಟಿಟ್ಯೂಟ್ ಡಾ. ಲಿಂಡಾಲ್ ಅವರು ಅವನತಿಯ ಹಂತದಲ್ಲಿಯ ಡಿಎನ್ ಎಯಿಂದ ಜಗತ್ತಿನಲ್ಲಿ ಹೊಸ ಜೀವ ಸೃಷ್ಟಿಸಬಹುದು ಎಂದು ಕಂಡು ಹಿಡಿದ ಕಾರಣಕ್ಕೆ ನೊಬೆಲ್ ಪ್ರಶಸ್ತಿ ದೊರೆತಿದೆ.[ಭೌತ ವಿಜ್ಞಾನದ 2 ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ]

Nobel prize in Chemistry Awarded to 3 scientists for DNA studies

ಪೌಲ್ ಎಲ್ ಮಾಡ್ರಿಚ್ ಹೋವರ್ಡ್ ಹಗಿಸ್ ಮೆಡಿಕಲ್ ಇನ್ ಸ್ಟಿಟ್ಯೂಟ್ ಮತ್ತು ಡ್ಯೂಕ್ ವಿಶ್ವವಿದ್ಯಾಲಯ ಮೆಡಿಕಲ್ ಸೆಂಟರ್ ಡಿಎನ್ ಎ ಯನ್ನು ಆವರಿಸಿದ ಬೇಡವಾದ ಜೀವಕೋಶಗಳು ಕೋಶ ವಿಭಜನೆಯ ಸಮಯದಲ್ಲಿ ಹೇಗೆ ಮರು ರೂಪುಗೊಳ್ಳುತ್ತದೆ ಎಂದು ತೋರಿಸಿದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.[ನೊಬೆಲ್ ಪ್ರಶಸ್ತಿ ಹಂಚಿಕೊಂಡ 3 ಸಂಶೋಧಕರು]

ಚಾಪೆಲ್ ಹಿಲ್ ನ ಉತ್ತರ ಕೆರೋಲಿನಾ ವಿಶ್ವವಿದ್ಯಾಲಯದ ಡಾ. ಅಜೀಜ್ ಸ್ಯಾನ್ಕಾರ್ ಯಾಂತ್ರಿಕ ಜೀವಕೋಶಗಳು ನೀಳಾತೀತ ಕಿರಣಗಳಿಂದ ಹಾನಿಗೊಳಗಾದ ಡಿಎನ್ ಎ ಯನ್ನು ಹೇಗೆ ಮರು ರೂಪಿಸುತ್ತದೆ ಎಂದು ನಕ್ಷೆ ತಯಾರಿಸಿದ ಕಾರಣ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

English summary
Tamas Lindahl, Paul L. Modrich and Aziz Sancar were awarded the Nobel Prize in Chemistry on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X