ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆನಿಸ್ ಮುಕ್ವೇಜ್, ನಾದಿಯಾ ಮುರದ್ ಗೆ ನೊಬೆಲ್ ಶಾಂತಿ ಪುರಸ್ಕಾರ

|
Google Oneindia Kannada News

ಡೆನಿಸ್ ಮುಕ್ವೇಜ್, ನಾದಿಯಾ ಮುರದ್ 2018ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಟ್ಟು 115 ಸಂಸ್ಥೆಗಳಿಂದ ಬಂದಿದ್ದ 216 ಹೆಸರುಗಳ ಪೈಕಿ ಸಾಮಾಜಿಕ ಪಿಡುಗೆಗೆ ಸವಾಲೊಡ್ಡಿದ್ದ ಡೆನಿಸ್ ಹಾಗೂ ನಾದಿಯಾ ಅವರನ್ನು ನೋಬೆಲ್ ಸಮಿತಿ ಆಯ್ಕೆ ಮಾಡಿದೆ.

Nobel pease prize 2018, won by Denis Mukwege and Nadiya murad

ಲೈಂಗಿಕ ದೌರ್ಜನ್ಯದ ವಿರುದ್ಧ ಸಮರ ಸಾರಿದ ಕಾರಣಕ್ಕೆ ಡೆನಿಸ್ ಹಾಗೂ ನಾದಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗುತ್ತಿದೆ. ನಾದಿಯಾ ಮುರದ್ 23 ವರ್ಷದ ಸುಂದರ ಯುವತಿ, ಐಸಿಸ್ ಉಗ್ರರ ಹಿಂಸೆಗೆ ನಲುಗಿದ್ದ ಮುಗ್ದೆ, ಈಗ ವಿಶ್ವ ಸಂಸ್ಥೆಯ ಸದ್ಭಾವನಾ ರಾಯಭಾರಿ.

ವಿಶ್ವಸಂಸ್ಥೆಯ ಡ್ರಗ್ ಮತ್ತು ಕ್ರೈಂ ವಿಭಾಗದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾನವ ಕಳ್ಳಸಾಗಣೆಯಲ್ಲಿ ಬಚಾವಾದವರ ಗೌರವ ಕಾಪಾಡುವ ಜವಾಬ್ದಾರಿ ನಾದಿಯಾ ಮೇಲಿದೆ. ಐಸಿಸ್ ಪಾತಕಿಗಳ ಕೈಯ್ಯಿಂದ ತಪ್ಪಿಸಿಕೊಂಡು ಬಂದಿದ್ದ ನಾದಿಯಾ ಈ ವರ್ಷ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಡೆನಿಸ್ ಮುಕ್ವೇಜ್ ಅವರು ಸ್ತ್ರೀರೋಗ ತಜ್ಞರಾಗಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಾವಿರಾರು ಸಂತ್ರಸ್ತರಿಗೆ ಇವರು ಚಿಕಿತ್ಸೆ ನೀಡಿದ್ದಾರೆ. ಯುದ್ಧ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾಗುತ್ತಿದ್ದ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿದ್ದರು. ಎರಡನೇ ಕಾಂಗೋ ಯುದ್ಧ ಸಂದರ್ಭದಲ್ಲಿ ಸಾವಿರಾರು ಸಂತ್ರಸ್ತರಿಗೆ ಇವರು ನೆರವಾಗಿದ್ದರು.

ನಾದಿಯಾ ಮುರದ್ ಇರಾಕ್ ನ ಉತ್ತರ ಭಾಗದಲ್ಲಿರುವ ಕೋಚಾ ಎಂಬ ಗ್ರಾಮದಲ್ಲಿ ವಾಸವಿದ್ದರು. ಮೊದಲು ಐಸಿಸ್ ಉಗ್ರರ ಹಿಂಸಾಕೃತ್ಯದ ಬಗ್ಗೆ ಅವರಿಗೆ ಅರಿವಿರಲಿಲ್ಲ. ಒಮ್ಮೆ ನಾದಿಯಾ ವಾಸವಿದ್ದ ಹಳ್ಳಿಗೆ ನುಗ್ಗಿದ್ದ ಐಸಿಸ್ ಉಗ್ರರು ಎಲ್ಲರಿಗೂ ಶಾಲೆಯೊಳಗೆ ಹೋಗುವಂತೆ ಸೂಚಿಸುತ್ತಾರೆ.

ಗುಂಪಿನಲ್ಲಿದ್ದ ಮಹಿಳೆಯರು ಮತ್ತು ಪುರುಷರನ್ನು ಬೇರ್ಪಡಿಸುತ್ತಾರೆ. ನಂತರ 314 ಪುರುಷರನ್ನು ಕೊಂದು ಹಾಕುತ್ತಾರೆ. ನಾದಿಯಾಳ 6 ಸಹೋದರರು ಕೂಡ ಬಲಿಯಾಗುತ್ತಾರೆ.

2018ರ ನೊಬೆಲ್ ಶಾಂತಿ ಪ್ರಶಸ್ತಿಯು 9 ಮಿಲಿಯನ್ ಸ್ವೀಡಿಶ್ ಕ್ರಾನರ್ ಅಂದರೆ 7,49,31,900 ಕೋಟಿ ರೂಗಳ ಮೊತ್ತವನ್ನು ಒಳಗೊಂಡಿದೆ. 2009ರಲ್ಲಿ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಲಭಿಸಿತ್ತು. ಬುಧವಾರ ರಸಾಯನಶಾಸ್ತ್ರದಲ್ಲಿ ಅಮೆರಿಕಾ, ಕೆನಡಾ ಮತ್ತು ಫ್ರಾನ್ಸ್ ನ ಮೂವರು ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.

English summary
The Norwegian Nobel Committee on Friday announced their decision to award the Nobel Peace Prize for 2018 to Denis Mukwege and Nadia Murad for their efforts to end the use of sexual violence as a weapon of war and armed conflict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X