ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಾಲಾ, ಸತ್ಯಾರ್ಥಿಗೆ ನೊಬೆಲ್ ಶಾಂತಿ ಪುರಸ್ಕಾರ

|
Google Oneindia Kannada News

ಓಸ್ಲೋ, ಅ. 10 : ಒಂದು ಕಡೆ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ಎದುರಾಗುವ ಲಕ್ಷಣಗಳು ಕಾಣುತ್ತಿದ್ದರೆ, ಇನ್ನೊಂದೆಡೆ ಭಾರತದ ಮಕ್ಕಳ ಹಕ್ಕುಗಳ ಆಂದೋಲನಕಾರ ಕೈಲಾಶ್‌ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ ಅವರಿಗೆ ಜಂಟಿಯಾಗಿ ನೊಬೆಲ್‌ ಪಾರಿತೋಷಕ ಲಭಿಸಿದೆ.

60 ವರ್ಷದ ಕೈಲಾಶ್‌ ಸತ್ಯಾರ್ಥಿ ಭಾರತದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ 'ಬಚ್‌ಪನ್‌ ಬಚಾವೋ ಆಂದೋಲನ್‌ 'ಆರಂಭಿಸಿದವರು. ಮದರ್‌ ಥೆರೇಸಾ ಬಳಿಕ ಭಾರತಕ್ಕೆ ಶಾಂತಿ ನೊಬೆಲ್‌ ದೊರಕಿಸಿದ ಕೀರ್ತಿ ಕೈಲಾಶ್‌ ಪಾಲಾಗಿದೆ.[ಮೆದುಳಿನ 'ಜಿಪಿಎಸ್‌' ಶೋಧಕರಿಗೆ ವೈದ್ಯ ನೊಬೆಲ್]

nobel

ವಿದ್ಯಾರ್ಥಿನಿಯಾಗಿರುವ 17 ವರ್ಷದ ಪಾಕಿಸ್ತಾನದ ಮಲಾಲಾ ಈ ಬಾರಿ ನೊಬೆಲ್‌ ಪಡೆದುಕೊಂಡಿದ್ದಾರೆ. ಅಲ್ಲದೇ ನೊಬೆಲ್‌ ಶಾಂತಿ ಪುರಸ್ಕೃತರಲ್ಲಿ ಅತ್ಯಂತ ಕಿರಿಯ ವಯಸ್ಸಿನಳು ಎಂಬ ಹಿರಿಮೆಯೂ ಪಾತ್ರರಾಗಿದ್ದಾರೆ.

ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆದ ಪಾಕಿಸ್ತಾನದ ತಾಲಿಬಾನ್ ಸಂಘಟನೆ ವಿರುದ್ಧ ಪ್ರತಿಭಟನೆಗೆ ನಿಂತ ಮಲಾಲಾ ಮೇಲೆ 2012ರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಸಾವು ಬದುಕಿನ ನಡುವೆ ಹೋರಾಡಿ ಗೆದ್ದ ಮಲಾಲಾ ಪಾಕಿಸ್ತಾನಕ್ಕೆ ಮೊದಲ ನೊಬೆಲ್‌ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ.

English summary
History was made on Friday when an Indian and a Pakistani jointly shared the Nobel Peace Prize for 2014. India's Kailash Satyarthi and Pakistan's Malala Yousafzay were awarded the Nobel Peace Prize for "showing great personal courage" and their struggle against the suppression of children and young people and for the right of all children to education.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X