ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಆಹಾರ ಕಾರ್ಯಕ್ರಮಕ್ಕೆ ನೊಬೆಲ್ ಶಾಂತಿ ಪುರಸ್ಕಾರದ ಗೌರವ

|
Google Oneindia Kannada News

ಸ್ಟಾಕ್‌ಹೋಮ್, ಅಕ್ಟೋಬರ್ 9: ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಪಾತ್ರವಾಗಿದೆ ಎಂದು ನೊಬೆಲ್ ಸಮಿತಿ ಘೋಷಿಸಿದೆ.

ಜಗತ್ತಿನಾದ್ಯಂತ ಹಸಿವಿನ ಸಮಸ್ಯೆಯ ವಿರುದ್ಧದ ಹೋರಾಟದಲ್ಲಿ ನಡೆಸಿ ಪ್ರಮುಖ ಪ್ರಯತ್ನಕ್ಕಾಗಿ ಹಾಗೂ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಸುಧಾರಿಸಿದ್ದಕ್ಕಾಗಿ ಮತ್ತು ಯುದ್ಧ ಮತ್ತು ಸಂಘರ್ಷದ ಪ್ರಮುಖ ಅಸ್ತ್ರವನ್ನಾಗಿ ಹಸಿವನ್ನು ಬಳಸಿಕೊಳ್ಳುವುದನ್ನು ತಡೆಯುವ ಪ್ರಯತ್ನದ ಮುಂಚೂಣಿಯ ಪಡೆಯಾಗಿ ನಿರ್ವಹಿಸಿದ ಕಾರ್ಯಕ್ಕಾಗಿ ಡಬ್ಲ್ಯೂಎಫ್‌ಪಿಗೆ 2020ರ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗುತ್ತಿದೆ ಎಂದು ನೊಬೆಲ್ ಅಕಾಡೆಮಿ ತಿಳಿಸಿದೆ.

ಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪುರಸ್ಕಾರಅಮೆರಿಕದ ಕವಯತ್ರಿಗೆ ಪ್ರತಿಷ್ಠಿತ ನೊಬೆಲ್ ಸಾಹಿತ್ಯ ಪುರಸ್ಕಾರ

ವಿಶ್ವ ಆಹಾರ ಕಾರ್ಯಕ್ರಮವು ಹಸಿವಿನ ಸಮಸ್ಯೆಯನ್ನು ನಿವಾರಿಸುವ ಮತ್ತು ಆಹಾರ ಭದ್ರತೆ ಒದಗಿಸುವ ಜಗತ್ತಿನ ಅತಿ ದೊಡ್ಡ ಮಾನವೀಯ ಸಂಸ್ಥೆಯಾಗಿದೆ. 2019ರಲ್ಲಿ ಈ ಡಬ್ಲ್ಯೂಎಫ್‌ಪಿ 88 ದೇಶಗಳ ಆಹಾರ ಅಭದ್ರತೆ ಮತ್ತು ಹಸಿವಿನ ಸಂತ್ರಸ್ತರಾದ ಸುಮಾರು 100 ಮಿಲಿಯನ್ ಜನರಿಗೆ ನೆರವು ನೀಡಿದೆ.

Nobel Peace Prize 2020 Awarded To World Food Programme

2015ರಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಹಸಿವು ನಿವಾರಣೆ ಕೂಡ ಒಂದಾಗಿ ಸೇರ್ಪಡೆಯಾಗಿತ್ತು. ಈ ಗುರಿಯನ್ನು ತಲುಪುವ ಪ್ರಯತ್ನದಲ್ಲಿ ಡಬ್ಲ್ಯೂಎಫ್‌ಪಿ ವಿಶ್ವಸಂಸ್ಥೆಯ ಪ್ರಾಥಮಿಕ ಸಾಧನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿಯು ಸಾಕಷ್ಟು ನಕಾರಾತ್ಮಕವಾಗಿದೆ. 2019ರಲ್ಲಿ 135 ಮಿಲಿಯನ್ ಮಂದಿ ತೀವ್ರ ಹಸಿವಿನಿಂದ ಬಳಲಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿಯೇ ಅತ್ಯಧಿಕ. ಇದಕ್ಕೆ ಕಾರಣ ಯುದ್ಧ ಮತ್ತು ಆಂತರಿಕ ಸಶಸ್ತ್ರ ಸಂಘರ್ಷಗಳು ಎಂದು ನೊಬೆಲ್ ಸಮಿತಿ ಹೇಳಿದೆ.

ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟ?ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರ ನೊಬೆಲ್ ಪ್ರಕಟ?

ಕೊರೊನಾ ವೈರಸ್ ಪಿಡುಗು, ಯುದ್ಧ, ಸಂಘರ್ಷ ಮುಂತಾದ ಕಾರಣಗಳಿಂದ ಜಗತ್ತಿನಾದ್ಯಂತ ಹಸಿವಿನ ಬಲಿಪಶುಗಳ ಸಂಖ್ಯೆ ಅಧಿಕವಾಗುತ್ತಿದೆ. ಈ ನಿಟ್ಟಿನಲ್ಲಿ ವಿಶ್ವ ಆಹಾರ ಕಾರ್ಯಕ್ರಮ ಮಹತ್ವದ ಕಾರ್ಯ ನಡೆಸುತ್ತಿದೆ ಎಂದು ನೊಬೆಲ್ ಸಮಿತಿ ಶ್ಲಾಘಿಸಿದೆ.

English summary
United Nations World Food Programme (WFP) has won the Nobel Peace Prize of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X