ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಥಿಯೋಪಿಯಾ ಪ್ರಧಾನಿಗೆ 2019ರ ನೊಬೆಲ್ ಶಾಂತಿ ಪುರಸ್ಕಾರ

|
Google Oneindia Kannada News

ಒಸ್ಲೋ, ಅಕ್ಟೋಬರ್ 11: ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಆಯ್ಕೆಯಾಗಿದ್ದಾರೆ.

ಎರಿಟ್ರಿಯಾದೊಂದಿಗಿನ ಬಿಕ್ಕಟ್ಟನ್ನು ಸೌಹಾರ್ದದಿಂದ ಬಗೆಹರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದ್ದಕ್ಕಾಗಿ 43 ವರ್ಷ ಅಬಿ ಅಹ್ಮದ್ ಅಲಿ ಅವರಿಗೆ ಈ ಗೌರವ ಒಲಿದಿದೆ.

ರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ

1998-2000ರವರೆಗೆ ಗಡಿಯಲ್ಲಿ ಇಥಿಯೋಪಿಯಾ ಮತ್ತು ಎರಿಟ್ರಿಯಾಗಳು ಸುದೀರ್ಘ ಕಾಲದಿಂದ ಯುದ್ಧ ಸಂಘರ್ಷಗಳಲ್ಲಿ ತೊಡಗಿದ್ದವು. ಹಲವು ವರ್ಷಗಳ ಮಾತುಕತೆಯ ಬಳಿಕ 2018ರ ಜುಲೈನಲ್ಲಿ ಎರಡೂ ದೇಶಗಳ ಸಂಬಂಧ ಪುನಃ ಸರಿಹೊಂದಿದೆ. ಉಭಯ ದೇಶಗಳ ನಡುವಿನ ಗಡಿ ಸಮಸ್ಯೆ ಬಗೆಹರಿಸಿ ಶಾಂತಿ ನೆಲೆಸುವಲ್ಲಿ ಪ್ರಮುಖ ಪ್ರಯತ್ನ ನಡೆಸಿದ ಅಬಿ ಅಹ್ಮದ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

Nobel Peace Prize 2019 For Ethiopian PM Abiy Ahmed

'ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ಪ್ರಯತ್ನಗಳಿಗಾಗಿ ಮತ್ತು ಮುಖ್ಯವಾಗಿ ನೆರೆಯ ಎರಿಟ್ರಿಯಾ ದೇಶದೊಂದಿಗಿನ ಗಡಿ ಸಂಘರ್ಷವನ್ನು ಪರಿಹರಿಸಲು ನಿರ್ಣಾಯಕ ಕ್ರಮ ತೆಗೆದುಕೊಂಡಿರುವುದಕ್ಕಾಗಿ ಅಬಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ' ಎಂದು ನೊಬೆಲ್ ಸಮಿತಿ ಶುಕ್ರವಾರ ತಿಳಿಸಿದೆ.

ಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವ

2018ರ ಏಪ್ರಿಲ್‌ನಲ್ಲಿ ಇಥಿಯೋಪಿಯಾ ಪ್ರಧಾನಿಯಾಗಿ ಆಯ್ಕೆಯಾದ ಕೇವಲ ಆರು ತಿಂಗಳಲ್ಲಿ ಅಬಿ ಅವರು ಜೈಲಿನಲ್ಲಿದ್ದ ಎರಿಟ್ರಿಯಾದ ಕೈದಿಗಳನ್ನು ಬಿಡುಗಡೆಗೊಳಿಸಿದ್ದರು. ಜತೆಗೆ ದೇಶ ಎಸಗಿದ ಕ್ರೌರ್ಯಕ್ಕೆ ಕ್ಷಮೆ ಕೋರಿದ್ದರು. ತಮ್ಮ ಪೂರ್ವಾಧಿಕಾರಿಗಳು ಭಯೋತ್ಪಾದಕರು ಎಂದು ಗುರುತಿಸಿ ಗಡಿಪಾರು ಮಾಡಿದ್ದ ಸಶಸ್ತ್ರ ಸಂಘಟನೆಗಳನ್ನು ಸ್ವದೇಶಕ್ಕೆ ಮರಳಿ ಸ್ವಾಗತಿಸಿದ್ದರು.

2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಚೆಫ್ ಜೋಸ್ ಆಂಡ್ರಸ್ ಆಯ್ಕೆ2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಚೆಫ್ ಜೋಸ್ ಆಂಡ್ರಸ್ ಆಯ್ಕೆ

ನೊಬೆಲ್ ಶಾಂತಿ ಪುರಸ್ಕೃತ ಅಬಿ ಅವರಿಗೆ $900,000 ಡಾಲರ್ ಪ್ರಶಸ್ತಿ ಮೊತ್ತ ಪಡೆದುಕೊಳ್ಳಲಿದ್ದಾರೆ. ಓಸ್ಲೋದಲ್ಲಿ ಡಿ.10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

English summary
Ethiopian Prime Minister Abiy Ahmed won 2019 Nobel peace prize for his peacemaking efforts with Eritrea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X