• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಗೆ ನೊಬೆಲ್ ಶಾಂತಿ ಪುರಸ್ಕಾರ

|

ಓಸ್ಲೊ, ಅಕ್ಟೋಬರ್ 11: ಇಥಿಯೋಪಿಯಾದ ಪ್ರಧಾನಮಂತ್ರಿ ಅಬಿಯ್ ಅಹ್ಮದ್ ಅವರಿಗೆ 2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ. ಎರಿಟ್ರಿಯಾ ಜತೆಗೆ ಬಹು ಕಾಲದಿಂದ ಇದ್ದ ಇಥಿಯೋಪಿಯಾದ ಗಡಿ ಬಿಕ್ಕಟ್ಟು ನಿವಾರಿಸುವಲ್ಲಿನ ಅವರ ಪ್ರಯತ್ನಕ್ಕೆ ಈ ಪುರಸ್ಕಾರ ದೊರೆತಿದೆ. ನಾರ್ವೆಯಲ್ಲಿನ ನೊಬೆಲ್ ಇನ್ಸ್ ಟ್ಯೂಟ್ ಶುಕ್ರವಾರದಂದು ಅಬಿಯ್ ಅವರ ಕಳೆದ ವರ್ಷದ ಏಪ್ರಿಲ್ ನಿಂದ ತಂದಿರುವ 'ಸುಧಾರಣಾ ಕ್ರಮಗಳಿಗೆ' ಮೆಚ್ಚುಗೆ ಸೂಚಿಸಿದೆ.

ಕೆಲವರು ಈ ಪ್ರಶಸ್ತಿಯು ಬಹಳ ಬೇಗ ಅಬಿಯ್ ಅಹ್ಮದ್ ಅವರಿಗೆ ದೊರೆತಿದೆ ಎನ್ನಬಹುದು. ಆದರೆ ಅಹ್ಮದ್ ರ ಶ್ರಮವನ್ನು ಗುರುತಿಸುವುದು ಹಾಗೂ ಪ್ರೋತ್ಸಾಹಿಸುವುದು ಅಗತ್ಯ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಬೆರಿಟ್ ರೀಸ್ ಆಂಡರ್ಸನ್ ಹೇಳಿದ್ದಾರೆ. ನಲವತ್ಮೂರು ವರ್ಷದ ಅಬಿಯ್ ಆಫ್ರಿಕಾದ ಅತ್ಯಂತ ಕಿರಿಯ ವಯಸ್ಸಿನ ನಾಯಕರು. ಅವರು ಅಧಿಕಾರಕ್ಕೆ ಏರಿದ ಕೆಲ ಸಮಯದಲ್ಲೇ ದೊಡ್ಡ ಪ್ರಮಾಣದಲ್ಲಿ ಸುಧಾರಣಾ ಕ್ರಮಗಳನ್ನು ತಂದರು.

ರಸಾಯನಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಕಟ

ಆಫ್ರಿಕಾದಲ್ಲಿ ಬಹಳ ದೀರ್ಘ ಕಾಲದಿಂದಲೂ ಉಳಿದುಕೊಂಡಿದ್ದ ಬಿಕ್ಕಟ್ಟನ್ನು ಎರಿಟ್ರಿಯಾ ಜತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಲು ಮುಂದಾದರು. ವಾರಗಳಲ್ಲೇ ಎರಿಟ್ರಿಯಾದ ದೀರ್ಘಾವಧಿಯ ನಾಯಕ ಕೂಡ ಹೆಜ್ಜೆ ಮುಂದಿಟ್ಟರು. ಅಡಿಸ್ ಅಬಾಬಾಗೆ ಭೇಟಿ ನೀಡಿದರು. ಸಂಪರ್ಕ ಹಾಗೂ ಸಾರಿಗೆ ಪುನರಾರಂಭ ಆಯಿತು.

ಎರಡು ದಶಕಗಳಿಂದ ದೂರವಾಗಿದ್ದ ಕುಟುಂಬಗಳು ಕಣ್ಣೀರಿನೊಂದಿಗೆ ಮತ್ತೆ ಒಂದಾದವು ಆ ಮೂಲಕ ವಿಶ್ವಸಂಸ್ಥೆಯು ಎರಿಟ್ರಿಯಾ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವು ಮಾಡಲಾಯಿತು. ಇನ್ನು ಅಬಿಯ್ ಒಂದಾದ ಮೇಲೆ ಒಂದರಂತೆ ರಾಜಕೀಯ ಅಚ್ಚರಿಗಳನ್ನು ನೀಡಿದರು. ಹತ್ತಾರು ಸಾವಿರ ಕೈದಿಗಳನ್ನು ಬಿಡುಗಡೆ ಮಾಡಿದರು. ರಾಜಕೀಯ ವಿರೋಧಿ ಬಣದ ಗುಂಪುಗಳನ್ನು ದೇಶಕ್ಕೆ ಸ್ವಾಗತಿಸಿದರು.

ಸಾಮಾಜಿಕ ಮಾಧ್ಯಮಗಳು ಇಥಿಯೋಪಿಯಾದ ಜನರ ಪಾಲಿಗೆ ಮುಕ್ತವಾಯಿತು. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಮುಕ್ತವಾಗಿ- ನ್ಯಾಯಸಮ್ಮತವಾಗಿ ಇರಲಿದೆ ಎಂದು ಅಬಿಯ್ ಭರವಸೆ ನೀಡಿದ್ದಾರೆ. ಇಥಿಯೋಪಿಯಾದಲ್ಲಿ ಪುರುಷರು- ಮಹಿಳೆಯರಿಗೆ ಅಧಿಕಾರ ಸಮಾನವಾಗಿ ಹಂಚಿಕೆ ಆಗಿದೆ. ಮಹಿಳೆಯೊಬ್ಬರು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಮೂವರು ವಿಜ್ಞಾನಿಗಳಿಗೆ ಶರೀರಶಾಸ್ತ್ರ ವಿಭಾಗದ ನೊಬೆಲ್ ಗೌರವ

ಕಳೆದ ವರ್ಷ ಅದೇ ಮೊದಲ ಬಾರಿಗೆ ಎಂಬಂತೆ ಯಾವ ಮಾಧ್ಯಮ ಪ್ರತಿನಿಧಿಯು ಜೈಲಿನಲ್ಲಿ ಇಲ್ಲ ಎಂದು ವರದಿ ಆಗಿದೆ. ಇಥಿಯೋಪಿಯಾದ ಸರ್ಕಾರಿ ವಲಯದಲ್ಲಿ ಹೂಡಿಕೆ ಮಾಡುವುದಕ್ಕೆ ಖಾಸಗಿಯವರನ್ನು ಆಹ್ವಾನಿಸಲಾಗುತ್ತಿದೆ. ಅಬಿಯ್ ಅವರ ಮೇಲೆ ಗ್ರೆನೇಡ್ ದಾಳಿ ಕೂಡ ನಡೆದಿತ್ತು. ಜತೆಗೆ ದೊಡ್ಡ ಸಂಖ್ಯೆಯಲ್ಲಿದ್ದ ಸೈನಿಕರು ಅವರ ಕಚೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ನೊಬೆಲ್ ಶಾಂತಿ ಪುರಸ್ಕಾರವಾಗಿ ಒಂಬತ್ತು ಮಿಲಿಯನ್ ಸ್ವೀಡಿಶ್ ಕ್ರೋನರ್ ನಗದು, ಚಿನ್ನದ ಪದಕ ಸಹ ನೀಡಲಾಗುತ್ತದೆ. ನಾರ್ವೆಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರೂ ನಗದು ಮೊತ್ತವನ್ನು ಸ್ವೀಡಿಶ್ ಕ್ರೋನರ್ ನಲ್ಲಿ ನೀಡಲಾಗುತ್ತದೆ.

English summary
Ethiopian PM Abiy Ahmed awarded Nobel peace award 2019. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X